Golden Star Ganesh: ಗಣೇಶ್ ನನ್ನ ಕ್ರಶ್ ಎಂದ ‘ಪಿಚ್ಚರ್’ ಹೀರೋಯಿನ್! ಪಕ್ಕದಲ್ಲೇ ಇದ್ರು ಶಿಲ್ಪಾ ಗಣೇಶ್ | | ACTPnews

ಗಣೇಶ್ ನನ್ನ ಕ್ರಶ್ ಎಂದ ಪಿಚ್ಚರ್ ನಾಯಕಿ; ಪಕ್ಕದಲ್ಲಿ ಇದ್ದರು ಶಿಲ್ಪಾ ಗಣೇಶ್!


Last Updated:

ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ನನಗೆ ತುಂಬಾನೆ ಇಷ್ಟ ಆಗ್ತಾರೆ. ಅವರು ನನ್ನ ಕ್ರಶ್ ಅಂತಲೇ ಪಿಚ್ಚರ್ ಚಿತ್ರದ ನಾಯಕಿ ಅಮೃತಾ ನೇರವಾಗಿಯೇ ಹೇಳಿದ್ದಾರೆ. ಈ ಸಮಯದಲ್ಲಿ ಶಿಲ್ಪಾ ಗಣೇಶ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.

ಗಣೇಶ್ ನನ್ನ ಕ್ರಶ್ ಎಂದ ಪಿಚ್ಚರ್ ನಾಯಕಿ; ಪಕ್ಕದಲ್ಲಿ ಇದ್ದರು ಶಿಲ್ಪಾ ಗಣೇಶ್!
ಗಣೇಶ್ ನನ್ನ ಕ್ರಶ್ ಎಂದ ಪಿಚ್ಚರ್ ನಾಯಕಿ; ಪಕ್ಕದಲ್ಲಿ ಇದ್ದರು ಶಿಲ್ಪಾ ಗಣೇಶ್!

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಪಕ್ಕದಲ್ಲಿಯೆ ಕುಳಿತಿದ್ದರು. ಅವರ ಪಕ್ಕ ಪತ್ನಿ ಶಿಲ್ಪಾ ಗಣೇಶ್ ಇದ್ದರು. ಆದರೆ, ಕೊನೆಯಲ್ಲಿ ಕುಳಿತ ನಾಯಕಿ ಅಮೃತಾ (Amrutha) ಹೇಳ್ತಾ ಹೋದ್ರು. ಶಾಲೆಗೆ ಹೋಗುವಾಗ ಗಣೇಶ್ ಅವರು ನನಗೆ ತುಂಬಾ ಇಷ್ಟ ಆಗುತ್ತಿದ್ದರು. ಇವರು ನನ್ನ ಕ್ರಶ್ (Crush) ಅಂತಲೂ ಹೇಳಿದರು. ಗಣೇಶ್ ಅವರು ಮದುವೆ ಆದಾಗ ತುಂಬಾನೆ ಬೇಸರ ಆಗಿತ್ತು. ಇವರು ಯಾಕೆ ಮದುವೆ ಆದರು ಅನಿಸ್ತಾ ಇತ್ತು ಅಂತಲೂ ಹೇಳಿದರು. ಆದರೆ, ಇದಕ್ಕೆ ಗಣೇಶ್ (Ganesh) ರಿಯಾಕ್ಟ್ ಮಾಡಿದ್ದಾರೆ. ಏನ್ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಗಣೇಶ್ ನನ್ನ ಕ್ರಶ್

ಪಿಚ್ಚರ್ ಚಿತ್ರ ರಿಲೀಸ್ ಹಂತಕ್ಕೆ ಬಂದಿದೆ. ಕನ್ನಡ ಮತ್ತು ತುಳು ಭಾಷೆಯಲ್ಲಿ ಇದು ಬರ್ತಿದೆ. ಶಿಲ್ಪಾ ಗಣೇಶ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಚಿತ್ರದ ಗೋಕುಲದ ರಾಧೆ ಅನ್ನುವ ಹಾಡನ್ನು ಕೂಡ ಹಾಡಿದ್ದಾರೆ.

Golden Star Ganesh Wife Shilpa Ganesh Produced Picture Movie Latest Updates

ಪಿಚ್ಚರ್ ಯಾವಾಗ ರಿಲೀಸ್
ಈ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಶಿಲ್ಪಾ ಗಣೇಶ್ ಆಗಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇದ್ದರು. ಇವರ ಸಮೀಪದಲ್ಲಿಯೇ ಕುಳಿತದ ಚಿತ್ರದ ನಾಯಕಿ ಅಮೃತಾ ಸುದು ಮಾತನಾಡ್ತಾ ಇದ್ದರು.
ಮದುವೆ ಆದಾಗ ಬೇಸರ

ನನಗೆ ಗಣೇಶ್ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ಇವರು ನನ್ನ ಶಾಲಾ ದಿನಗಳ ಕ್ರಶ್ ಆಗಿದ್ದರು. ಇವರು ಮದುವೆ ಆದಾಗ ಬೇಸರ ಆಗಿತ್ತು. ಇವರು ಯಾಕೆ ಮದುವೆ ಆದರು ಅಂತಲೇ ಬೇಸರವ ಆಯಿತು ಅನ್ನೋದನ್ನ ಹೇಳಿಕೊಂಡಿದ್ದಾರೆ.

ಅಮೃತಾ ಸುದು ಇದನ್ನೆಲ್ಲ ಹೇಳುವಾಗ ಶಿಲ್ಪಾ ಗಣೇಶ್ ಏನೂ ಹೇಳೋಕೆ ಹೋಗ್ಲಿಲ್ಲ. ಆದರೆ, ಪಕ್ಕದಲ್ಲಿಯೇ ಕುಳಿತ ನಾಯಕ ನಟ ಗಣೇಶ್ ಒಂದು ಮಾತು ಹೇಳಿದರು. ಅಲ್ಲಾ ರೀ…..ನೀವು ಮೊದಲೇ ಹೇಳೋದಲ್ವೇ? ಸಿನಿಮಾ ಮುಗಿದ್ಮೇಲೆ ಹೇಳ್ತಾ ಇದ್ದೀರಾ? ಅಂತಲೇ ತಮಾಷೆ ಮಾಡಿದ್ದಾರೆ ಅಂತಲೇ ಹೇಳಬಹುದು.

ಪಿಚ್ಚರ್ ಯಾವಾಗ ರಿಲೀಸ್

ಪಿಚ್ಚರ್ ಚಿತ್ರ ರೆಡಿ ಆಗಿದೆ. ಜುಲೈ-24 ರಂದು ಇದು ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಅಮೃತಾ ಸುದು ನಾಯಕಿ ಆಗಿದ್ದಾರೆ. ನಿತ್ಯಪ್ರಕಾಶ್ ಬಂಟ್ವಾಳ್ ಈ ಸಿನಿಮಾದ ನಾಯಕರಾಗಿದ್ದಾರೆ.

Golden Star Ganesh Wife Shilpa Ganesh Produced Picture Movie Latest Updates

ಕಾಶ್ಮೀರದಲ್ಲಿ ಶೂಟಿಂಗ್

ಸಂದೀಪ ಬೆದ್ರ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ಇದು ರಿಲೀಸ್ ಆಗುತ್ತದೆ. ಈ ಚಿತ್ರಕ್ಕೆ ಸ್ಯಾಮುಯೆಲ್ ಅಭಿ ಸಂಗೀತ ಕೊಟ್ಟಿದ್ದಾರೆ. ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

ಕಾಶ್ಮೀರದಲ್ಲಿ ಶೂಟಿಂಗ್

ಕನ್ನಡದ ಚಿತ್ರಗಳು ಕಾಶ್ಮೀರದಲ್ಲಿ ಚಿತ್ರೀಕರಣ ಆಗಿವೆ. ಆದರೆ, ತುಳು ಚಿತ್ರ ಅಂತ ಬಂದ್ರೆ ಇದೇ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ಆಗಿದೆ. ಆದರೆ, ಇಡೀ ಚಿತ್ರವಲ್ಲ ನೋಡಿ.

ಸಿನಿಮಾದಲ್ಲಿ ಬರುವ ಗೋಕುಲ ರಾಧೆ ಅನ್ನುವ ಹಾಡಿನ ಚಿತ್ರೀಕರಣವನ್ನ ಇಲ್ಲಿ ಮಾಡಿದ್ದೇವೆ. ಈ ಹಾಡಿನ ಫೀಮೇಲ್ ವರ್ಶನ್ ಅನ್ನ ನಾನು ಹಾಡಿದ್ದೇನೆ. ಮೇಲ್ ವರ್ಶನ್ ಅನ್ನ ಜಸ್ಕರನ್ ಸಿಂಗ್ ಹಾಡಿದ್ದಾರೆ ಅಂತ ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಹೇಳಿದ್ದಾರೆ.

Golden Star Ganesh Wife Shilpa Ganesh Produced Picture Movie Latest Updates

ಗಣೇಶ್ ನನ್ನ ಕ್ರಶ್ ಎಂದ ಪಿಚ್ಚರ್ ನಾಯಕಿ; ಪಕ್ಕದಲ್ಲಿ ಇದ್ದರು ಶಿಲ್ಪಾ ಗಣೇಶ್!
ಗಣೇಶ್ ಏನಂದ್ರು

ನಾನು ನನ್ನ ನಟನೆಯ ಚಿತ್ರಗಳ ಪ್ರೆಸ್ ಮೀಟ್‌ಗೆ ಬಂದಿದ್ದೇನೆ. ಆದರೆ, ಈಗ ನಮ್ಮ ನಿರ್ಮಾಣದ ಸಿನಿಮಾದ ಪ್ರೆಸ್ ಮೀಟ್‌ಗೆ ಬಂದಿದ್ದೇನೆ. ಈ ಚಿತ್ರಕ್ಕೆ ಡೈರೆಕ್ಟರ್ ಸಂದೀಪ್ ಬೆದ್ರೆ ಒಳ್ಳೆ ಕಥೆ ಮಾಡಿದ್ದಾರೆ.

ಇದೊಂದು ಅವಿಭಕ್ತ ಕುಟುಂಬದ ಕತೆ ಆಗಿದೆ. ಇದರಲ್ಲಿ ಎಮೋಷನ್ಸ್ ಇವೆ. ಕಾಮಿಡಿ ಇದೆ. ನೋಡುಗರಿಗೆ ಏನು ಬೇಕೋ ಅದೆಲ್ಲವೂ ಇದೆ ಅಂತಲೇ ಗಣೇಶ್ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports