Gilli Nata: ಬಿಗ್ ನ್ಯೂಸ್ ಕೊಡ್ತಾರಂತೆ ಗಿಲ್ಲಿ! ಒಂದು ವಿಶೇಷ ಘೋಷಣೆಗೆ ರೆಡಿಯಾದ ಬಿಗ್ ಬಾಸ್ ವಿನ್ನರ್! | | ACTPnews

Bigg Boss Winner Gilli Nata New Announcement Post Got Viral


ಒಂದು ವಿಶೇಷ ಘೋಷಣೆ

ಒಂದು ವಿಶೇಷ ಘೋಷಣೆ ಅಂತ ಗಿಲ್ಲಿ ಹೇಳಿದ್ದಾರೆ. ಇವರ ಆ ಘೋಷಣೆ ಏನು ಅನ್ನೋದು ಸದ್ಯದ ಪ್ರಶ್ನೆ ಆಗಿದೆ. ಜೂನ್-16 ರಂದು ಸಂಜೆ 6.15 ಕ್ಕೆ ಈ ಒಂದು ಘೋಷಣೆ ಆಗುತ್ತಿದೆ.

ಗಿಲ್ಲಿ ಫ್ಯಾನ್ಸ್ ಫುಲ್ ಖುಷ್

(ಚಿತ್ರ ಕೃಪೆ: ಗಿಲ್ಲಿ ನಟ ಇನ್‌ಸ್ಟಾಗ್ರಾಮ್)

ಈ ವಿಷಯವನ್ನ ಸ್ವತಃ ಗಿಲ್ಲಿ ನಟ ಘೋಷಣೆ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಇದನ್ನ ಶೇರ್ ಮಾಡಿಕೊಂಡಿದ್ದಾರೆ. ಇದರೊಟ್ಟಿಗೆ ಇಂತಿ ನಿಮ್ಮ ಗಿಲ್ಲಿ ಅಂತಲೂ ಹೇಳಿದ್ದಾರೆ.
ಹೊಸ ಸಿನಿಮಾ ಡೈರೆಕ್ಷನ್ನಾ

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಸುತ್ತ ಒಂದಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಗಿಲ್ಲಿ ನಟ ಡೈರೆಕ್ಷನ್ ಮಾಡ್ತಾರೆ ಅನ್ನೋದು ಇದೆ. ನಾಯಕನಾಗಿಯೇ ಬರ್ತಾರೆ ಅನ್ನೋದು ಇದೆ.

ಈ ಸುದ್ದಿಗಳು ಹರಿದಾಡಲು ಕಾರಣವು ಇದೆ. ದೊಡ್ಮನೆಯಿಂದ ಬಂದ್ಮೇಲೆ ಗಿಲ್ಲಿ ನಟ ತಮ್ಮ ಆಸಕ್ತಿಯ ಬಗ್ಗೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಡೈರೆಕ್ಷನ್ ಬಗ್ಗೆ ಆಸಕ್ತಿನೂ ಇದೆ ಅಂತಲೇ ಹೇಳಿದ್ದರು. ಅದರೊಟ್ಟಿಗೆ ಇವರು ನಾಯರಾಗಿಯೇ ಬರ್ತಾರೆ ಅನ್ನುವ ಸುದ್ದಿ ಬಲವಾಗಿಯೇ ಕೇಳಿ ಬಂದಿತ್ತು.

ಸೂಪರ್ ಹಿಟ್ ಸಿನಿಮಾ

ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಗಿಲ್ಲಿ ನಟ ಅಭಿನಯಿಸಿರೋ ಸೂಪರ್ ಹಿಟ್ ಚಿತ್ರ ಬಂತು. ವಿ.ನಾಗೇಂದ್ರ ಪ್ರಸಾದ್ ಸಹೋದರ್ ವಿಜಯಾನಂದ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.

Bigg Boss Winner Gilli Nata New Announcement Post Got Viral

ಗಿಲ್ಲಿ ನಟನ ಹೊಸ ನ್ಯೂಸ್

(ಚಿತ್ರ ಕೃಪೆ: ಗಿಲ್ಲಿ ನಟ ಇನ್‌ಸ್ಟಾಗ್ರಾಮ್)

ಈ ಚಿತ್ರದಲ್ಲಿ ಗೌರವ್ ಶೆಟ್ಟಿ ಕೂಡ ಇದ್ದರು. ಇದೊಂದು ಕಾಮಿಡಿ ಚಿತ್ರವೇ ಆಗಿತ್ತು. ಇದನ್ನ ಜನ ಕೂಡ ಮೆಚ್ಚಿಕೊಂಡರು. ಹಾಗೆ ಈ ಚಿತ್ರದಲ್ಲಿ ಗಿಲ್ಲಿ ನಟನೆ ಹೀರೋ ಅನ್ನೋದನ್ನೆ ಒತ್ತಿ ಹೇಳಲಾಗಿತ್ತು.

ಗಿಲ್ಲಿ ಫ್ಯಾನ್ಸ್ ಫುಲ್ ಖುಷ್

ಗಿಲ್ಲಿ ನಟನ ಈಗೀನ ಪೋಸ್ಟ್ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಡಿಸೈನ್, ಡಿಸೈನ್ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ನೀವು ಘೋಷಣೆ ಮಾಡೋದು ಹೆಚ್ಚ? ನಾವು ಹಬ್ಬ ಮಾಡೋದು ಹೆಚ್ಚ ಅಂತಲೂ ಪ್ರಶ್ನೆ ಮಾಡಿದ್ದಾರೆ.

ಅದ್ಯಾರೋ ಒಬ್ಬರು ಅಣ್ಣಾ ನೀವು ಬಿಗ್‌ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಿ ಅಂತಲೇ ಹೇಳಿದ್ದಾರೆ. ಗಿಲ್ಲಿ ನಟನ ಈ ಘೋಷಣೆಯ ಪೋಸ್ಟ್‌ಗೆ ಗಿಲ್ಲಿ ಮತ್ತು ಕಾವ್ಯ ಫ್ಯಾನ್ಸ್ ಲೈಕ್ ಕೊಡಿ ಅಂತ ಅದ್ಯಾರೋ ಬರೆದಿದ್ದಾರೆ.

ಗಿಲ್ಲಿ ನಟನ ಹೊಸ ನ್ಯೂಸ್

ಗಿಲ್ಲಿ ನಟನ ಈ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಈಗಾಗಲೇ ಹೇಳಿದಂತೆ ಗಿಲ್ಲಿ ನಟ ಏನು ಘೋಷಣೆ ಮಾಡ್ತಾರೆ ಅನ್ನುವ ಕುತೂಹಲ ಹೆಚ್ಚಾಗಿದೆ.

ಸಿನಿಮಾನಾ ಇಲ್ಲ ಮದುವೇನಾ ಅನ್ನೋ ಡೌಟು ಇದೆ. ನಾಯಕನಾ, ಡೈರೆಕ್ಟರಾ ಅನ್ನೋ ಪ್ರಶ್ನೆನೂ ಇದೆ. ಈ ಎಲ್ಲ ಪ್ರಶ್ನೆಗೆ ಜೂನ್-16 ರಂದು ಸಂಜೆ ಉತ್ತರ ಸಿಗುತ್ತದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed