Last Updated:
Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ‘ಒಂದು ವಿಶೇಷ ಘೋಷಣೆ ಮಾಡಲಿದ್ದೇನೆ’ ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ದ ಗಿಲ್ಲಿ, ಇದೀಗ ತಮ್ಮ ಮುಂದಿನ ಮಹತ್ವದ ಹೆಜ್ಜೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಏನಪ್ಪಾ ವಿಚಾರ ಅಂದ್ರೆ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ಹೊಸ ಸಿನಿಮಾದಲ್ಲಿ ಗಿಲ್ಲಿ ನಟ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಸ್ವತಃ ಚಿತ್ರತಂಡವೇ ಘೋಷಣೆ ಮಾಡಿದ್ದು, ಅಭಿಮಾನಿಗಳಲ್ಲಿ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಗಿಲ್ಲಿ ನಟ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಿಗ್ ಸ್ಪೆಷಲ್ ಅನೌನ್ಸ್‌ಮೆಂಟ್ ಎಂದು ಹಂಚಿಕೊಂಡ ಸಂದೇಶ ಅಭಿಮಾನಿಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
ಚಿತ್ರತಂಡ ಈಗಾಗಲೇ ಸಿನಿಮಾದ ಮುಹೂರ್ತ ಸಮಾರಂಭದ ದಿನಾಂಕವನ್ನು ಕೂಡ ಪ್ರಕಟಿಸಿದೆ. ಜೂನ್ 21ರಂದು ಚಿತ್ರದ ಅಧಿಕೃತ ಮುಹೂರ್ತ ನೆರವೇರಲಿದ್ದು, ಆ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಇನ್ನು ಈ ಸಿನಿಮಾಕ್ಕೆ ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅನೇಕ ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಅವರು, ಇದೀಗ ಗಿಲ್ಲಿಯನ್ನು ನಾಯಕನಾಗಿ ಪರಿಚಯಿಸುತ್ತಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.
ಈ ಹೊಸ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುತ್ತಿದ್ದು, ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಹಾಗೂ ಹರೀಶ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಂಸ್ಥಾಪಕ ಕೆ. ವೆಂಕಟ ನಾರಾಯಣ ಹಾಗೂ ಕೆವಿಎನ್ ಬಿಸಿನೆಸ್ ಹೆಡ್ ಸುಪ್ರಿತ್ ಈ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ. ಜೊತೆಗೆ ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡುವುದು ಸಂಸ್ಥೆಯ ಉದ್ದೇಶ ಎಂದು ಚಿತ್ರತಂಡ ತಿಳಿಸಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಗಿಲ್ಲಿ ಅಭಿನಯದ ಕಾಮಿಡಿ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಖ್ಯಾತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರ ವಿಜಯಾನಂದ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಗಿಲ್ಲಿ ಅಭಿನಯ ಗಮನ ಸೆಳೆದಿತ್ತು. ಜೊತೆಗೆ ನಟ ಗೌರವ್ ಶೆಟ್ಟಿ ಕೂಡ ಆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Bangalore [Bangalore],Bangalore,Karnataka













