Last Updated:
ಬೆಂಗಳೂರು ಗ್ರಾಮಾಂತರದ ಸರ್ಕಾರಿ ಶಾಲಾ ಬಾಲಕಿಯರು ಫುಟ್ಬಾಲ್‌ನಲ್ಲಿ ಸಾಧನೆ ಮಾಡಿದ್ದಾರೆ. KIAF ಬೆಂಬಲದೊಂದಿಗೆ ತರಬೇತಿ ಪಡೆದು ತಾಲ್ಲೂಕು ಚಾಂಪಿಯನ್ ಆಗಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರು (Bengaluru) ಗ್ರಾಮಾಂತರದ ಸರ್ಕಾರಿ ಶಾಲೆಗಳ (Govt School) ಹೆಣ್ಣುಮಕ್ಕಳು ಈಗ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳಿಂದ ವಂಚಿತರಾಗಿದ್ದ ಗ್ರಾಮೀಣ ಪ್ರತಿಭೆಗಳು, ಈಗ ಫುಟ್‍ಬಾಲ್ ಕಾಲ್ಚಳಕದ ಮೂಲಕ ಕ್ರೀಡಾ (Sports) ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಬಾಲಕಿಯರ ಈ ಅಚ್ಚರಿಯ ಸಾಧನೆ ಹಾಗೂ ಕ್ರೀಡಾ ಕ್ರಾಂತಿಯ ಸಂಪೂರ್ಣ ವರದಿ ಇಲ್ಲಿದೆ.
ಕೇವಲ ಆಟಕ್ಕಷ್ಟೇ ಸೀಮಿತವಾಗದೆ, ತಳಮಟ್ಟದಿಂದಲೇ ಪ್ರತಿಭಾವಂತ ಆಟಗಾರ್ತಿಯರನ್ನು ಗುರುತಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ವಿದ್ಯಾರ್ಥಿನಿಯರಿಗೆ ಸಂಪೂರ್ಣವಾಗಿ ಉಚಿತವಾಗಿ ಟ್ರೈನಿಂಗ್ ಕಿಟ್‍ಗಳು, ಫುಟ್‍ಬಾಲ್ ಬೂಟುಗಳು, ಸ್ಟಾಕಿಂಗ್ಸ್ ಮತ್ತು ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಪ್ರಸ್ತುತ 7 ಸರ್ಕಾರಿ ಶಾಲೆಗಳ 100 ಬಾಲಕಿಯರಿಗೆ ತರಬೇತಿ ನೀಡಲಾಗುತ್ತಿದ್ದು, ಅವರಲ್ಲಿ ಆತ್ಮವಿಶ್ವಾಸ ಮತ್ತು ಶಿಸ್ತು ಹೆಚ್ಚಿದೆ.
ಈ ಯೋಜನೆಯ ಫಲ ಈಗಾಗಲೇ ಕಣ್ಣಮುಂದೆ ಬಂದಿದೆ. ಯಲಹಂಕದ ಪ್ರತಿಷ್ಠಿತ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋಟ್ರ್ಸ್ ಎಕ್ಸಲೆನ್ಸ್‍ನಲ್ಲಿ ನಡೆದ ಪಂದ್ಯಗಳಲ್ಲಿ ಈ ಬಾಲಕಿಯರು ತಮ್ಮ ಕರಾಮತ್ತು ತೋರಿಸಿದ್ದಾರೆ.2026–27ರ ತಾಲೂಕು ಮಟ್ಟದ ಬಾಲಕಿಯರ ಫುಟ್‍ಬಾಲ್ ಟೂರ್ನಿಯಲ್ಲಿ ಜಿಎಚ್‍ಪಿಎಸ್ ಬೆಟ್ಟಕೋಟೆ ತಂಡವು ತಾಲ್ಲೂಕು ಚಾಂಪಿಯನ್ ಆಗಿ ಹೊರಹೊಮ್ಮಿದೆ.ಜಿಎಂಪಿಜಿಎಸ್ ವಿಜಯಪುರ ತಂಡವು ರನ್ನರ್-ಅಪ್ ಸ್ಥಾನ ಪಡೆದು ಅಚ್ಚರಿ ಮೂಡಿಸಿದೆ.
ಒಟ್ಟು 18 ಆಟಗಾರ್ತಿಯರು ನೇರವಾಗಿ ಬೆಂಗಳೂರು ಜಿಲ್ಲಾ ಮಟ್ಟದ ಟೂರ್ನಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ.
ಕೇವಲ ಕ್ರೀಡೆಯಷ್ಟೇ ಅಲ್ಲದೆ, ಕೆಐಎಫ್ ಸಂಸ್ಥೆಯು ‘ನಮ್ಮ ಶಿಕ್ಷಣ’ ಹಾಗೂ ‘ನಮ್ಮ ಆರೋಗ್ಯ’ದಂತಹ ಪ್ರಮುಖ ಯೋಜನೆಗಳ ಮೂಲಕ ಸುಮಾರು 3,000 ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ. ಈಗ ಯಶಸ್ವಿಯಾಗಿರುವ ಈ ಫುಟ್‍ಬಾಲ್ ಯೋಜನೆಯನ್ನು ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಮತ್ತಷ್ಟು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಬಾಲಕಿಯರ ಈ ಸಾಧನೆ ನಿಜಕ್ಕೂ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.














