Last Updated:
Flydubai Incident: ಫ್ಲೈ ದುಬೈ ಘಟನೆಯಲ್ಲಿ ಪ್ರಯಾಣಿಕ ಫ್ಲೈಟ್ ಕಂಟ್ರೋಲ್ ತೆಗೆದುಕೊಳ್ಳೋಕೆ ನೆರವಾಗಿದ್ದು ಟಿವಿ ಸಿರೀಸ್? ಪ್ರಯಾಣಿಕ ಹೇಳಿದ್ದೇನು?
ಫ್ಲೈ ದುಬೈ (Flydubai) ಘಟನೆ ಎಲ್ಲರಿಗೂ ಶಾಕ್ ಕೊಟ್ಟಿದೆ. ಪ್ರಪಂಚ ಸ್ಮಿತ್ ಮಚ್ಚಾರ್ (Smit Machchhar) ಅವರ ಧೈರ್ಯವನ್ನುಬ ಕೊಂಡಾಡಿ ಧನ್ಯವಾದ ಹೇಳುತ್ತಿದೆ. ಈ ಸಂದರ್ಭದಲ್ಲಿ ಧೈರ್ಯ ತೋರಿಸಿ ಪರಿಸ್ಥಿತಿಯನ್ನು ಸಂಭಾಳಿಸಿದವರನ್ನು ಜನ ಭೇಷ್ ಎನ್ನುತ್ತಿದ್ದಾರೆ. ಈ ನಡುವೆ ಫ್ಲೈಟ್ನಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ಹೇಗೆ ಫ್ಲೈಟ್ನ ಕಂಟ್ರೋಲ್ಗೆ ತೆಗೆದುಕೊಂಡೆ ಎನ್ನುವುದನ್ನು ಪ್ರಯಾಣಿಕನೊಬ್ಬ ವಿವರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡುವಂತೆ ಮಾಡಿದೆ.
ಟಿವಿಯಲ್ಲಿ ಹಲವಾರು ವರ್ಷಗಳಿಂದ ಪ್ರಸಾರವಾಗುತ್ತಿದ್ದ ವಿಮಾನ ದುರಂತಗಳ ತನಿಖಾ ಸಿರೀಸ್ ನೋಡಿದ್ದು ಇಸ್ರೇಲಿ ಪ್ರಯಾಣಿಕನಿಗೆ ಎಮರ್ಜೆನ್ಸಿ ಸಮಯದಲ್ಲಿ ಕಾರ್ಯಪ್ರವೃತ್ತವಾಗಲು ನೆರವಾಯಿತು ಎನ್ನುವ ವಿಚಾರ ರಿವೀಲ್ ಆಗಿದೆ. ಇಸ್ರೇಲ್ ಪ್ರಯಾಣಿಕ ಯಾನಿವ್ ಹಯೂನ್ ಈ ಸಿರೀಸ್ ನೋಡಿದ್ದರಿಂದಲೇ ಕಾಕ್ಪಿಟ್ ದಾಳಿಯ ವೇಳೆ ಸಮಯೋಚಿತವಾಗಿ ಕಾರ್ಯಪ್ರವೃತ್ತನಾಗಲು ಸಾಧ್ಯವಾಯಿತು ಎಂದಿದ್ದಾರೆ.
ದಾಳಿ ಮಾಡಿದ ಸಹ ಪೈಲಟ್ನನ್ನು ಹಿಡಿದು ಸದೆಬಡಿದ ಹಯೂನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆ ಮಾತನಾಡಿ ಏರ್ ಕ್ರಾಫ್ಟ್ ಕಂಟ್ರೋಲ್ ಕಳೆದುಕೊಂಡಾಗ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ನಾನು ಕೆನಡಿಯನ್ ವಾಯುಸಂಚಾರ ಡಾಕ್ಯುಮೆಂಟರಿ ಸಿರೀಸ್ ಮೇ ಡೇ ನೋಡಿ ತಿಳಿದುಕೊಂಡೆ ಎಂದು ಹೇಳಿದ್ದಾರೆ. ಮೇ ಡೇ ಸಿರೀಸ್ ಅನ್ನು ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್ ಎಂದೂ ಕರೆಯುತ್ತಾರೆ.
ದುಬೈನಿಂದ ಟೆಲ್ ಅವಿವ್ಗೆ ಪ್ರಯಾಣಿಸುತ್ತಿದ್ದ ವಿಮಾನ ಸೌದಿ ಅರೆಬಿಯಾಗೆ ಡೈವರ್ಟ್ ಆಯಿತು. ಸಹ ಪೈಲಟ್ ಇನ್ನೊಬ್ಬ ಪೈಲಟ್ ಮೇಲೆ ದಾಳಿ ಮಾಡಿದ ನಂತರ ಈ ಘಟನೆ ನಡೆದಿದೆ. ಈ ಎಲ್ಲ ಗದ್ದಲದ ನಡುವೆ ಹಯೂನ್ ಹಾಗೂ ಇನ್ನೊಬ್ಬ ಪ್ರಯಾಣಿಕ ಕಾಕ್ಪಿಟ್ಗೆ ಬಂದು ಗಾಯಗೊಂಡು ಪೈಲಟ್ ಬಾಗಿಲ ಬಳಿ ಬಿದ್ದಿರುವುದನ್ನು ನೋಡಿದ್ದಾರೆ. ದಾಳಿ ಮಾಡಿದ ಪೈಲಟ್ ಆಗಲೇ ಕಂಟ್ರೋಲ್ ತೆಗೆದುಕೊಂಡಿದ್ದ.
ನಾನು ಒಳಗೆ ಹೋದಾಗ ದಾಳಿ ಮಾಡಿದ್ದ ಪೈಲಟ್ ಎರಡು ಸೀಟ್ ಮಧ್ಯೆ ಫ್ಲೈಟ್ ಕಂಟ್ರೋಲ್ ತೆಗೆದುಕೊಂಡಿದ್ದ. ಸೀಟ್ ಮೇಲೆ ಪೈಲಟ್ ಇರಲಿಲ್ಲ. ಪ್ರಯಾಣಿಕ ದಾಳಿ ಮಾಡಿದ ಪೈಲಟ್ನನ್ನು ಹಿಡಿದು ಆತನನ್ನು ಫ್ಲೈಟ್ ಕಂಟ್ರೋಲ್ನಿಂದ ದೂರ ಎಳೆದಿದ್ದಾಗಿ ತಿಳಿಸಿದ್ದಾನೆ. ಆ ನಂತರ ಉಳಿದ ಪ್ರಯಾಣಿಕರು ಆ ಪೈಟಲ್ನನ್ನು ಹಿಡಿದುಕೊಳ್ಳಲು ನೆರವಾದರು ಎನ್ನಲಾಗಿದೆ. ವಿಮಾನ ಕೆಳ ಮುಖವಾಗಿ ಬೀಳುತ್ತಿದ್ದಂತೆ ಕಾಕ್ಪಿಟ್ಗೆ ಬಂದು ಕಂಟ್ರೋಲ್ ತೆಗೆದುಕೊಂಡೆ ಎಂದು ಪ್ರಯಾಣಿಕ ತಿಳಿಸಿದ್ದಾರೆ.














