Last Updated:
ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್‌ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ.
ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು (Baduku) ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆಯು ಆಯೋಜಿಸಿರುವ ‘ದೃಶ್ಯ ಫಿಲ್ಮ್ ಮೇಕಿಂಗ್ ಕೋರ್ಸ್’ ನಿಮ್ಮ ಸಿನಿ ಬದುಕಿನ ಕನಸಿಗೆ ಹೊಸ ರೆಕ್ಕೆ ನೀಡಲಿದೆ. ಇಂದೇ ನೀವು ಅರ್ಜಿ (Application) ಸಲ್ಲಿಸಿ, ನಿಮ್ಮ ಬದುಕು ಬದಲಾಯಿಸಿಕೊಳ್ಳಿ.
ಈ ಕೋರ್ಸ್ ಜೂನ್ 30ರಿಂದ ಪ್ರಾರಂಭವಾಗಲಿದೆ. ನೀವು ಮಾಡಬೇಕಾಗಿರುವುದು ಇಷ್ಟೇ.ಸಿನಿಮಾ ಅಥವಾ ಕಿರುತೆರೆಯ ಬಗ್ಗೆ ನಿಮ್ಮ ಆಸಕ್ತಿ ಅಥವಾ ಅನುಭವವನ್ನು 300-500 ಪದಗಳಲ್ಲಿ ಬರೆಯಿರಿ.
ನಿಮ್ಮ ರೆಸ್ಯೂಮ್ ಜೊತೆಗೆ ಈ ಮಾಹಿತಿಯನ್ನು https://forms.gle/jaBSGKZrrP4X66uF6 ಲಿಂಕ್ ಮೂಲಕ ಅಪ್‌ಲೋಡ್ ಮಾಡಿ ಅಥವಾ massmedia@samvadabaduku.org ಇಮೇಲ್ ಐಡಿಗೆ ಕಳುಹಿಸಿ.
Bangalore [Bangalore],Bangalore,Karnataka
May 23, 2026 12:23 PM IST













