Film Festival: 3 ನಿಮಿಷದ ವಿಡಿಯೋ ತಂದು ಕೊಡಲಿದೆ 6.50 ಲಕ್ಷ ರೂಪಾಯಿ; ಇನ್ನೂ ಇದೆ 53 ದಿನದ ಅವಕಾಶ! | | ACTPnews

ಕಿರು ಚಿತ್ರ


Last Updated:

NHRC ಮಾನವ ಹಕ್ಕುಗಳ ಕುರಿತ ಕಿರುಚಿತ್ರ ಸ್ಪರ್ಧೆಯ 12ನೇ ಆವೃತ್ತಿಗೆ ಅರ್ಜಿ ಆಹ್ವಾನ, 3-10 ನಿಮಿಷದ ಚಿತ್ರ, ಒಟ್ಟು 6,50,000 ರೂಪಾಯಿ ಬಹುಮಾನ, ಕೊನೆಯ ದಿನ ಜೂನ್ 30, 2026

ಕಿರು ಚಿತ್ರ
ಕಿರು ಚಿತ್ರ

ಬೆಂಗಳೂರು: ಫಿಲ್ಮ್‌ (Film) ತೆಗಿಬೇಕು ಅನ್ನೋ ಹವ್ಯಾಸ ಇದೆಯಾ? ಸಮಾಜದ ಅನ್ಯಾಯವನ್ನು ನಿಮ್ಮ ಕ್ಯಾಮರಾ ಕಣ್ಣಿನ ಮೂಲಕ ಜಗತ್ತಿಗೆ ತೋರಿಸಬೇಕೆಂಬ ಛಲ ಇದೆಯಾ? ಹಾಗಿದ್ದರೆ ನಿಮಗಾಗಿ ಬಂದಿದೆ ಒಂದು ಅದ್ಭುತ ಅವಕಾಶ! ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) 2015ರಿಂದ ನಡೆಸಿಕೊಂಡು ಬರುತ್ತಿರುವ ಕಿರುಚಿತ್ರ ಸ್ಪರ್ಧೆಯ 12ನೇ ಆವೃತ್ತಿಗೆ ಇದೀಗ ದೇಶದ ಎಲ್ಲಾ ನಾಗರಿಕರಿಂದ (Public) ಪ್ರವೇಶಗಳನ್ನು ಆಹ್ವಾನಿಸಿದ್ದು, ಅರ್ಜಿ ಸ್ವೀಕರಿಸಲು ಕೊನೆಯ ದಿನ ಜೂನ್ 30, 2026!

ಒಟ್ಟೂ 6,50,000 ರೂಪಾಯಿ ಬಹುಮಾನ

ಈ ಸ್ಪರ್ಧೆಯ ಬಹುಮಾನ ಪಟ್ಟಿ ನೋಡಿದರೆ ಬೆರಗಾಗುತ್ತೀರಿ. ಪ್ರಥಮ ಬಹುಮಾನ ₹2,00,000 + ಪ್ರಮಾಣಪತ್ರ + ಟ್ರೋಫಿ, ದ್ವಿತೀಯ ₹1,50,000 + ಪ್ರಮಾಣಪತ್ರ + ಟ್ರೋಫಿ, ತೃತೀಯ ₹1,00,000 + ಪ್ರಮಾಣಪತ್ರ + ಟ್ರೋಫಿ. ಅಷ್ಟೇ ಅಲ್ಲ, ತೀರ್ಪುಗಾರರ ಶಿಫಾರಸಿನ ಆಧಾರದ ಮೇಲೆ ಗರಿಷ್ಠ 4 ಚಿತ್ರಗಳಿಗೆ ತಲಾ ₹50,000 ನಗದು + ಪ್ರಮಾಣಪತ್ರ ಸ್ಪೆಷಲ್ ಮೆನ್ಷನ್ ಪ್ರಶಸ್ತಿಯೂ ಇದೆ! ಒಟ್ಟು ₹6,50,000ಕ್ಕೂ ಹೆಚ್ಚಿನ ಬಹುಮಾನ ರಾಶಿ ನಿಮಗಾಗಿ ಕಾಯುತ್ತಿದೆ.

3-10 ನಿಮಿಷದೊಳಗೆ ನಿಮ್ಮ ವೀಡಿಯೋ ಇರಲಿ

ಈ ಸ್ಪರ್ಧೆಯ ಅತ್ಯಂತ ಆಕರ್ಷಕ ಅಂಶ ಎಂದರೆ ಯಾವುದೇ ವಯೋಮಿತಿ ನಿರ್ಬಂಧವಿಲ್ಲ! ಭಾರತದ ಯಾವ ಮೂಲೆಯ ನಾಗರಿಕರಾದರೂ, ವೈಯಕ್ತಿಕವಾಗಿ ಅಥವಾ ಗುಂಪಾಗಿ ಭಾಗವಹಿಸಬಹುದು. ಕಿರುಚಿತ್ರ ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿ ಇರಬಹುದು. ಇಂಗ್ಲಿಷ್ ಉಪಶೀರ್ಷಿಕೆ (subtitles) ಮಾತ್ರ ಕಡ್ಡಾಯ. ಕಿರುಚಿತ್ರದ ಅವಧಿ ಕನಿಷ್ಠ 3 ನಿಮಿಷ ಮತ್ತು ಗರಿಷ್ಠ 10 ನಿಮಿಷ ಆಗಿರಬೇಕು.
ಇಲ್ಲಿದೆ ಗಮನ ಸೆಳೆಯುವ ವಿಷಯಗಳು

ವಿಷಯ ಆಯ್ಕೆಯ ಬಗ್ಗೆ ಕೇಳ್ತೀರಾ? ಮಾನವ ಹಕ್ಕುಗಳ ಯಾವುದೇ ಆಯಾಮ ನಿಮ್ಮ ಕ್ಯಾಮೆರಾಗೆ ವಸ್ತುವಾಗಬಹುದು. ಮಹಿಳಾ ಹಕ್ಕುಗಳು, ದಲಿತರು-ಆದಿವಾಸಿಗಳ ಸಮಸ್ಯೆಗಳು, ಶಿಕ್ಷಣ-ಆರೋಗ್ಯ-ಆಹಾರ-ನೀರು-ನ್ಯಾಯದಂತಹ ಮೂಲಭೂತ ಹಕ್ಕುಗಳು, ಪರಿಸರ ಮತ್ತು ಹವಾಮಾನ ಬದಲಾವಣೆ, ವಲಸೆ ಸಮಸ್ಯೆ, ಪೊಲೀಸ್ ಕಸ್ಟಡಿ-ಜೈಲು-ಎನ್‌ಕೌಂಟರ್‌ಗಳಲ್ಲಿ ಹಕ್ಕುಗಳು, ಡಿಜಿಟಲ್ ಪ್ರೈವಸಿ-ಆನ್‌ಲೈನ್ ಕಿರುಕುಳ, ವಿಕಲಚೇತನರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಹೀಗೆ ಯಾವ ವಿಷಯ ನಿಮ್ಮ ಮನಕ್ಕೆ ತಟ್ಟುತ್ತದೆಯೋ ಅದೇ ನಿಮ್ಮ ಚಿತ್ರದ ಶಕ್ತಿ!

ಅರ್ಜಿ ಸಲ್ಲಿಕೆ, ವಿಳಾಸ, ವಿಚಾರಣೆಗೆ ಮಾಹಿತಿ ಇಲ್ಲಿದೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed