Last Updated:
Cauvery River: ಕಾವೇರಿ ನದಿ ನೀರಿನ ವಿವಾದ ಸಂಬಂಧಿಸಿ ಈಗ ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷೆ ಹೇಳಿದ್ದೇನು?
ಈ ವರ್ಷ ಮಳೆ (Monsoon) ಇಲ್ಲ, ಪಕ್ಕಾ ಬರಗಾಲ ಅಂತ ಮಾತನಾಡುತ್ತಿರುವ ಹಾಗೆಯೇ ಈ ವರ್ಷ ಮುಂಗಾರು ಕೈ ಕೊಟ್ಟಿದೆ. ಎಲ್ಲಿಯೂ ಚೆನ್ನಾಗಿ ಮಳೆ ಬೀಳುತ್ತಿಲ್ಲ. ಕರವಾಳಿಗೂ ಇಲ್ಲ, ಮಧ್ಯ ಕರ್ನಾಟಕಕ್ಕೂ (Karnataka) ಇಲ್ಲ. ಮಳೆ ಭಾರೀ ಕಡಿಮೆಯಾಗಿದ್ದು ಈ ಬಾರಿ ನೀರಿಗೆ ಪರದಾಡೋದು ಫಿಕ್ಸ್ ಎನ್ನುವ ಹಾಗಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ರಾಜ್ಯಕ್ಕೆ ಬಿಗ್ ಶಾಕ್ ಎದುರಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶಿಸಿದೆ. ಇಂದು ನಡೆದ ಹೈವೋಲ್ಟೇಜ್ ಸಭೆಯಲ್ಲಿ ಕರ್ನಾಟಕಕ್ಕೆ ಹಿನ್ನೆಡೆಯಾಗಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಪಾಲನೆಗೆ ಸೂಚನೆ ನೀಡಲಾಗಿದೆ. ಅಲ್ಲದೇ 3,500 ಕ್ಯೂಸೆಕ್ ನೀರು ಬಿಡಲು ಆದೇಶಿಸಿದೆ.
ಈ ಒಂದು ಆದೇಶದ ಬೆನ್ನಲ್ಲೇ ಕರ್ನಾಟಕದಲ್ಲಿ ಕನ್ನಡಿಗರ ಆಕ್ರೋಶ ಹೆಚ್ಚಾಗಿದೆ. ಕಾವೇರಿ ನೀರು ಹಂಚಿಕೆ ವಿವಾದ ಫಿಲಂ ಚೇಂಬರ್ ನಲ್ಲಿ ಮಹತ್ವದ ಸುದ್ಧಿಗೋಷ್ಠಿ ನಡೆದಿದೆ. ಸುದ್ಧಿಗೋಷ್ಟಿಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ರಾಕ್ ಲೈನ್ ವೆಂಕ್ಟೇಶ, ಸಾರಾ ಗೋವಿಂದ್, ಸುಂದರ್ ರಾಜ್, ಕೆ ಮಂಜು ಭಾಗಿಯಾಗಿದ್ದರು.
ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಮಾತನಾಡಿ, ನೆಲ ಜಲ ಭಾಷೆ ಈ ಮೂರಕ್ಕೂ ಧಕ್ಕೆ ಆಗುತ್ತೆ ಅಂದಾಗ ಫಿಲಂ ಚೇಂಬರ್ ಯಾವತ್ತೂ ನಿಂತಿದ್ದೀವಿ. ಅವತ್ತು ..ಮಹಾದಾಯಿ..ಇವತ್ತು ಕಾವೇರಿ, 4 tmc ನೀರು ಬಿಡಬೇಕು ಅಂತ ಕೇಳಿದ್ದಾರೆ. ಇಂತ ಸಂಧರ್ಭದಲ್ಲಿ ನಾವು ರೈತರ ಪರ ಇದ್ದೀವಿ ಅಂತ ಹೇಳೋಕೆ ಇಚ್ಚಿಸುತ್ತೇವೆ ಎಂದಿದ್ದಾರೆ.
CWMA ಯಿಂದ ಮತ್ತೆ ಆದೇಶ ಹಿನ್ನೆಲೆ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಸಂಜಯ್ ವೃತ್ತದಲ್ಲಿ ರೈತರ ಪ್ರತಿಭಟನೆ ನಡೆಸಿ CWMA ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ರೈತ ಮುಖಂಡ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ಮಾತನಾಡಿದ್ದು, CWMA ಆದೇಶ ದಿಕ್ಕರಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿ, ಯಾವುದೇ ಕಾರಣಕ್ಕೂ ನೀರನ್ನು ಬಿಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Bangalore,Karnataka














