Last Updated:
ಬಾಲಿವುಡ್ನ ಖ್ಯಾತ ಸಿನಿಮಾಗಳಾ ಜಿಗರ್, ವಿಜಯ್ ಪಥ್ನಂತಹ ಸಿನಿಮಾ ಮಾಡಿದ ನಿರ್ದೇಶಕ ನಿಧನರಾಗಿದ್ದಾರೆ. ಅವರ ಸಾವಿಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ.
ಅಜಯ್ ದೇವಗನ್ (Ajay Devgan) ಅಭಿನಯದ ಜಿಗರ್ (Jigar) ಮತ್ತು ವಿಜಯಪಥ್ (Vijaypath) ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ಸಿನಿಮಾ ನಿರ್ದೇಶಕ ಫಾರೋಗ್ ಸಿದ್ದಿಕಿ (Farogh Siddique) ಇಂದು ಬೆಳಿಗ್ಗೆ ನಿಧನರಾದರು. ಈ ಸುದ್ದಿ ಚಿತ್ರರಂಗದಲ್ಲಿ ಶಾಕ್ ಕೊಟ್ಟಿದೆ. ಅವರ ಸಾವಿನ ಕಾರಣ ಇನ್ನೂ ತಿಳಿದು ಬಂದಿಲ್ಲ.
1990 ರ ದಶಕದ ಬಾಲಿವುಡ್ನಲ್ಲಿ ಫರೋಗ್ ಸಿದ್ದಿಕಿ ದೊಡ್ಡ ಹೆಸರಾಗಿದ್ದರು. ಗಮನಾರ್ಹ ಕೆಲಸಗಳನ್ನು ಮಾಡಿದ್ದರು. ಬಣ್ಣದ ಲೋಕದಲ್ಲಿ ಎಲ್ಲರೂ ವಿಶೇಷವಾಗಿ ಕಾಣುವ ವ್ಯಕ್ತಿಯಾಗಿದ್ದರು. ವಿಶೇಷವಾಗಿ ಆಕ್ಷನ್ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿ ಅವರ ಕೊಡುಗೆಗಾಗಿ ಗುರುತಿಸಲ್ಪಟ್ಟರು.
ಅಜಯ್ ದೇವಗನ್ ಮತ್ತು ಕರಿಷ್ಮಾ ಕಪೂರ್ ನಟಿಸಿದ ಅವರ ಜಿಗರ್ (1992) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಎನಿಸಿಕೊಂಡಿತು. ಅಜಯ್ ದೇವಗನ್ ಅವರ ಆರಂಭಿಕ ವೃತ್ತಿಜೀವನವನ್ನು ಆಕ್ಷನ್ ಹೀರೋ ಆಗಿ ಬೆಳೆಸುವಲ್ಲಿ ಫರೋಗ್ ಪ್ರಮುಖ ಪಾತ್ರ ವಹಿಸಿದರು.
ವಿಶೇಷವಾದ ಸಮರ ಕಲೆಗಳ ವಿಚಾರಗಳಿಂದ ಪ್ರೇರಿತವಾದ ಈ ಚಿತ್ರವು ಅದರ ತೀವ್ರವಾದ ಆಕ್ಷನ್ ಮತ್ತು ಸಂಗೀತಕ್ಕಾಗಿ ಪ್ರೇಕ್ಷಕರಲ್ಲಿ ಜನಪ್ರಿಯವಾಯಿತು.
ಜಿಗರ್ ಜೊತೆಗೆ, ಸಿದ್ದಿಕ್ ವಿಜಯಪಥ್ (1994), ವಿಶ್ವವಿಧಾತ (1997), ರೇವತಿ (2005), ಮತ್ತು ದಿ ಡಾನ್ (1995) ನಂತಹ ಚಿತ್ರಗಳನ್ನು ನಿರ್ದೇಶಿಸಿದರು. ಆ ಸಮಯದ ಕಮರ್ಷಿಯಲ್ ಸಿನಿಮಾಗಳ ವಿಚಾರದಲ್ಲಿ ಗಣನೀಯ ಕೊಡುಗೆ ನೀಡಿದರು. ಅವರು ಸಿನಿಮಾಗಳು ಹೆಚ್ಚಾಗಿ ಆ್ಯಕ್ಷನ್, ರೊಮ್ಯಾನ್ಸ್ ಸುತ್ತ ಇರುತ್ತಿದ್ದವು.
ಸಿದ್ದಿಕ್ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಲ್ಲದಿದ್ದರೂ, 90 ರ ದಶಕದಲ್ಲಿ ಅವರ ಸಿನಿಮಾಗಳು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಿದವು. ಮೆಚ್ಚುಗೆ ಗಳಿಸಿದವು. ಅಜಯ್ ದೇವಗನ್ ಅವರಂತಹ ನಟರೊಂದಿಗಿನ ಅವರ ಕಾಂಬಿನೇಷನ್ ವಿಶೇಷವಾಗಿದೆ.
Bangalore,Karnataka














