Last Updated:
Fahadh Faasil: ಬೆಂಗಳೂರು ಮೂಲದ ಬಟ್ಟೆ ಬ್ರ್ಯಾಂಡ್ಗೆ ನಟ ಫಹದ್ ಫಾಸಿಲ್ ಅವರು ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ.
ಪುಷ್ಪ ಸಿನಿಮಾ ಮೂಲಕ ಭಾರೀ ಸದ್ದು ಮಾಡಿದ, ಆವೇಶಂ ಮೂಲಕ ಯುವಜನರಿಗೆ ಕಿಕ್ಕೇರಿಸಿದ ನಟ ಫದಹ್ ಫಾಸಿಲ್ ಅವರು ಈಗ ಬೆಂಗಳೂರಿನ (Bengaluru) ಬ್ರ್ಯಾಂಡ್ ಒಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಮಲಯಾಳಂನ (Malayalam) ಖ್ಯಾತ ನಟ ಫಹದ್ ಫಾಸಿಲ್ ಅವರು ಬೆಂಗಳೂರು ಮೂಲದ ಮೆನ್ಸ್ ವೇರ್ ಬ್ರ್ಯಾಂಡ್ ಎಸ್ಟಿಲೊಕಸ್ಗೆ ರಾಯಭಾರಿಯಾಗಿದ್ದಾರೆ. ಬೆಂಗಳೂರು ಮೂಲಕ ಬ್ರ್ಯಾಂಡ್ ಒಂದಕ್ಕೆ ಮಲಯಾಳಂ ನಟನನ್ನು ರಾಯಭಾರಿಯಾಗಿ ನೇಮಿಸಲಾಗಿದೆ.
ಎಸ್ಟಿಲೊಕಸ್ ದಕ್ಷಿಣ ಭಾರತದಲ್ಲಿ ತನ್ನ ಶಾಖೆಗಳನ್ನು ಮತ್ತಷ್ಟು ವಿಸ್ತರಿಸುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಬ್ರ್ಯಾಂಡ್ ವಿಸ್ತರಿಸುವಾಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಫೇಸ್ ಅನ್ನು ಬ್ರ್ಯಾಂಡ್ ಆಯ್ಕೆ ಮಾಡಿದೆ.
ಫಹದ್ ಫಾಸಿಲ್ ಜೊತೆ ಕೈಜೋಡಿಸಿದ್ದು ಕಂಪೆನಿಗೆ ಲಾಭದಾಯಕವಾಗಿರಲಿದೆ ಎನ್ನಲಾಗಿದ್ದು, ದಕ್ಷಿಣದಾದ್ಯಂತ ಶಾಖೆ ವಿಸ್ತರಣೆಗೂ ಸಹಾಯವಾಗಲಿದೆ. ಮುಖ್ಯವಾಗಿ ನಟ ಯುವಜನರ ಮಧ್ಯೆ ವಿಶೇಷ ಕ್ರೇಜ್ ಗಳಿಸಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಫಹಾದ್ಗೆ ಅತ್ಯುತ್ತಮ ಸಿನಿಮಾ ಆಫರ್ಗಳು ಬರುತ್ತಿವೆ. ಬಹಳ ಸ್ಪೆಷಲ್ ಎನ್ನುವ ಪಾತ್ರಗಳನ್ನು ಮಾಡಿ ನಟ ಈಗ ಸೌತ್ ಮತ್ತು ನಾರ್ತ್ ನಲ್ಲಿಯೂ ಪ್ರಸಿದ್ಧಿ ಗಳಿಸುತ್ತಿದ್ದಾರೆ. ಪುಷ್ಪ ಸಿನಿಮಾ ಹಾಗೂ ಕಾಲಿವುಡ್ನ ವಿಕ್ರಮ್ ಸಿನಿಮಾದಲ್ಲಂತೂ ಫಹಾದ್ ನಟನೆಗೆ ಸಾಟಿಯೇ ಇಲ್ಲ. ಹಾಗಾಗಿ ನಟನ ಸಿನಿಮಾ ಜೀವನ ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಹಾಗಾಗಿಯೇ ನಟನಿಗೆ ಬ್ರ್ಯಾಂಡ್ ಕೊಲಾಬರೇಷನ್ಸ್, ಜಾಹೀರಾತುಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಫಹದ್ ಅವರು ತಮ್ಮ ವಿಭಿನ್ನ ಅಭಿನಯದ ಮೂಲಕ ಜೆನ್ಝೀಗಳ ಮನಸ್ಸು ಗೆಲ್ಲುತ್ತಿದ್ದಾರೆ. ಅವರಿಗೆ ಈಗ ದೇಶಾದ್ಯಂತ ಅಭಿಮಾನಿಗಳಿದ್ದು, ಒಂದು ಕಾಲದಲ್ಲಿ ಮಲಯಾಳಂನಲ್ಲಿಯೇ ಫ್ಲಾಪ್ ಸಿನಿಮಾ ಕೊಟ್ಟಿದ್ದ ನಟನ ರೇಂಜ್ ಈಗ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿದೆ.
ನಿರ್ದೇಶಕನ ಮಗನಾಗಿ, ಪ್ರಾದೇಶಿಕ ಸಿನಿಮಾ ನಾಯಕನಾಗಿ ಅಭಿಯನ ರಂಗಕ್ಕೆ ಕಾಲಿಟ್ಟ ನಟನಿಗೆ ಈಗ ಎಲ್ಲೆಡೆಯಿಂದ ಉತ್ತಮ ಆಫರ್ಗಳು ಬರುತ್ತಿವೆ. ಬೆಂಗಳೂರು ಡೇಸ್ ಸಿನಿಮಾ ಬರುವ ತನಕ ಬಹಳಷ್ಟು ಜನರಿಗೆ ಫಹಾದ್ ಪರಿಚಯವೇ ಇರಲಿಲ್ಲ. ಆದರೆ ಆ ಸಿನಿಮಾದಿಂದ ನಟನ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಪುಷ್ಪ, ವಿಕ್ರಮ್, ಆವೇಶಂನಂತಹ ಸಿನಿಮಾಗಳಲ್ಲಿ ಇವರ ಅಭಿನಯ ನೋಡಿ ಮೆಚ್ಚದವರೇ ಇಲ್ಲ.
Bangalore,Karnataka
Jul 02, 2026 12:37 PM IST













