Last Updated:
ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಆನಂದ ನಿಲಯ’ ಸೀರಿಯಲ್ ಶುರು ಆಗುತ್ತಿದೆ. ಈ ಧಾರವಾಹಿಯ ಲೀಡ್ ಆ್ಯಕ್ಟರ್ ಶ್ರೀರಾಜನ್ (ರಾಕೇಶ್) ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ದೇಹದ ತೂಕ ಇಳಿಸಿಕೊಂಡಿರೋದು, ಕಮ್ ಬ್ಯಾಕ್ ಮಾಡಿರೋ ಸ್ಟೋರಿ, ಬಂದ್ಮೇಲೆ ಸಿಗ್ತಿರೋ ಪ್ರೀತಿ, ಹೀಗೆ ಎಲ್ಲವನ್ನು ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ಇವರ Exclusive ಸಂದರ್ಶನದ ವಿವರ ಇಲ್ಲಿದೆ ಓದಿ.
ಬಣ್ಣದ ಲೋಕದಿಂದ ದೂರವೇ ಉಳಿರೋ ಬೇಸರವು ಇತ್ತು. ಫ್ಯಾಮಿಲಿ ಬಿಜಿನೆಸ್ (Family Business) ಕೂಡ ಇತ್ತು. ಆದರೂ ಸೆಳೆತ ಕಡಿಮೆ ಆಗಿರಲಿಲ್ಲ. ಆದರೆ ಮತ್ತೆ ಬಣ್ಣ ಹಚ್ಚಬೇಕು ಅಂತ ಅಂದುಕೊಂಡೆ. ಕನ್ನಡಿಯಲ್ಲಿ ದೇಹ ನೋಡಿಕೊಂಡೆ, ನನಗೇನೆ ಇಷ್ಟ ಆಗಲಿಲ್ಲ. ತೂಕ ಇಳಿಸಿಕೊಳ್ಳಬೇಕು ಅಂತ ಡಿಸೈಡ್ ಮಾಡಿದೆ. ಬರೋಬ್ಬರಿ 116 ಕೆಜಿ ತೂಕ ಇತ್ತು. ಇದೀಗ 84 ಕೆಜಿ ಇದೆ. ಈ ಜರ್ನಿಯಲ್ಲಿ 32 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ದೇವರ ಆಶೀರ್ವಾದಿಂದ ಎರಡನೇ ಇನ್ನಿಂಗ್ಸ್ ಶುರು ಆಗಿದೆ. ಆನಂದ ನಿಲಯ ಸೀರಿಯಲ್ (Ananda Nilaya Serial) ಮಾಡ್ತಾ ಇದ್ದೇನೆ. ಈ ಒಂದು ಸೀರಿಯಲ್ ಅಲ್ಲಿ ಒಳ್ಳೆ ಪಾತ್ರವೇ ಸಿಕ್ಕಿದೆ. ಹೆಸರಾಂತ ನಟ ಶ್ರೀರಾಜನ್ (ರಾಕೇಶ್) (Shrirajan) ತಮ್ಮ ಹೊಸ ಅಧ್ಯಾಯದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ಇವರ Exclusive ಸಂದರ್ಶನದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.














