Europe Heat Wave: ಭಾರತದಲ್ಲೂ 43°C, ಯೂರೋಪ್‌ನಲ್ಲೂ 43°C! ಆದರೆ ಇಲ್ಲಿ ಯಾಕೆ ವಾತಾವರಣ ಭಿನ್ನವಾಗಿದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

ಯುರೋಪ್‌ನ 43°C  ಮತ್ತು ಭಾರತದ 43°C  ಒಂದೇ ಅಲ್ಲವೇ? ಇಲ್ಲಿ 48°C ಸಿ ತಲುಪುತ್ತದೆಯಲ್ಲ, ಏನು ಇಷ್ಟು ಗೊಂದಲ? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎನರ್ಜಿ ಮತ್ತು ಕ್ಲೈಮೇಟ್ ತಜ್ಞ ಸಿದ್ಧಾರ್ಥ್ ಸಿಂಗ್ ಅವರು ವಿವರಿಸಿದ್ದಾರೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬಿಸಿಗಾಳಿಯ (heat wave) ಅಬ್ಬರಕ್ಕೆ ಇಡೀ ಯೂರೋಪ್ (Europe) ಕಂಗೆಟ್ಟಿದೆ. ಒಂದೇ ವಾರದಲ್ಲಿ ಹೀಟ್ ವೇವ್‌ಗೆ ಬರೋಬ್ಬರಿ 1300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಬಿಸಿಲಿನ ತೀವ್ರತೆ ಯುರೋಪ್‌ನಾದ್ಯಂತ ದೈನಂದಿನ ಜೀವನವನ್ನು ತುಂಬಾ ಅಸ್ತವ್ಯಸ್ತಗೊಳಿಸಿದೆ. ಸಾರಿಗೆ ಸೇವೆಗಳು ಕೂಡ ಸಂಚಾರ ನಿಲ್ಲಿಸಿದ್ದು, ಆಸ್ಪತ್ರೆಗಳಲ್ಲಿ ಬಿಸಿಲಿನಿಂದಾಗುವ ತುರ್ತು ಪ್ರಕರಣಗಳು ತುಂಬಾ ಹೆಚ್ಚಾಗಿವೆ. ನದಿಗಳ ನೀರಿನ ತಾಪಮಾನವೂ ಅಸಾಧಾರಣವಾಗಿ ಏರಿದೆ. ಇದರಿಂದ ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ತುಂಬಾ ಸಮಸ್ಯೆ ಆಗ್ತಿದೆಯಂತೆ. ಸದ್ಯ 43°C ಉಷ್ಣಾಂಶ (temperature) ದಾಖಲಾಗಿದೆ. ಇತ್ತ ಭಾರತದಲ್ಲೂ (India) 43°C ವಾತಾವರಣವಿದ್ದರೂ ಯುರೋಪ್‌ನಂತೆ ಭಾರತದಲ್ಲಿ ಯಾಕೆ ಅಷ್ಟೊಂದು ಪರಿಣಾಮ ಬೀರೋದಿಲ್ಲ?

ಭಾರತ, ಯೂರೋಪ್‌ನಲ್ಲಿ ಪರಿಣಾಮ ಬೇರೆ ಏಕೆ?

ಈ ಬಗ್ಗೆ ಎಕ್ಸ್‌ ಬಳಕೆದಾದರೊಬ್ಬರು ಪ್ರಶ್ನಿಸಿದ್ದಾರೆ. ಯುರೋಪ್‌ನ 43°C  ಮತ್ತು ಭಾರತದ 43°C  ಒಂದೇ ಅಲ್ಲವೇ? ಇಲ್ಲಿ 48°C ಸಿ ತಲುಪುತ್ತದೆಯಲ್ಲ, ಏನು ಇಷ್ಟು ಗೊಂದಲ? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎನರ್ಜಿ ಮತ್ತು ಕ್ಲೈಮೇಟ್ ತಜ್ಞ ಸಿದ್ಧಾರ್ಥ್ ಸಿಂಗ್ ಅವರು ವಿವರಿಸಿದ್ದಾರೆ.

ಭಾರತ, ಯೂರೋಪ್‌ನಲ್ಲಿ ಬೇರೆ ಬೇರೆ ಅನುಭವ

ಹೌದು, 43°C ಭಾರತದಲ್ಲಿ ಬೇರೆ, ಯುರೋಪ್‌ನಲ್ಲಿ ಬೇರೆ ಅನುಭವ ಕೊಡುತ್ತದೆ ಎಂದು ವಿವರಿಸಿದ್ದಾರೆ.  ಥರ್ಮಾಮೀಟರ್ ಒಂದೇ ಸಂಖ್ಯೆ ತೋರಿಸಿದರೂ, ವಾಸ್ತವದಲ್ಲಿ ಬಿಸಿಲು ಹೇಗೆ ಅನುಭವವಾಗುತ್ತದೆ ಎನ್ನುವುದು ಹಲವು ಕಾರಣಗಳಿಂದ ಬದಲಾಗುತ್ತದೆ ಅಂತ ಅವರು ವಿವರಿಸಿದ್ದಾರೆ. ಈ ಅಂಶಗಳು ಈ ಕೆಳಗಿನಂತೆ ಇವೆ…

ಭೂಗೋಳ ಸ್ಥಾನ

ಯುರೋಪ್ ಭಾರತಕ್ಕಿಂತ ಉತ್ತರಕ್ಕೆ ಇದೆ. ಪ್ಯಾರಿಸ್ ನಗರವು ಕೆನಡಾದ ಟೊರೊಂಟೋಗಿಂತಲೂ ಉತ್ತರದಲ್ಲಿದೆ. ಭಾರತದಲ್ಲಿ ಸೂರ್ಯ ನೇರವಾಗಿ ಮೇಲಿನಿಂದ ಬೀಳುತ್ತದೆ. ಯುರೋಪ್‌ನಲ್ಲಿ ಸೂರ್ಯ ಬದಿಯಿಂದ (ಕೋನದಲ್ಲಿ) ಬೀಳುತ್ತದೆ. ಹಾಗಾಗಿ ಬಿಸಿಲು ಬೇರೆ ರೀತಿ ಅನುಭವವಾಗುತ್ತದೆ.

ಗಾಳಿ ಮತ್ತು ಮೋಡ

ಇತ್ತೀಚಿನ ಯುರೋಪ್‌ನ ಬಿಸಿಲು ಅಲೆಗಳಲ್ಲಿ ಗಾಳಿ ತುಂಬಾ ಕಡಿಮೆ ಅಥವಾ ಇಲ್ಲದಂತಿತ್ತು. ಮರಗಳ ಎಲೆಗಳೂ ಅಲುಗಾಡುತ್ತಿರಲಿಲ್ಲ. ಇದರಿಂದ ತುಂಬಾ ಉಸಿರು ಕಟ್ಟುವಂತೆ ಅನುಭವವಾಗುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಗಾಳಿ ಸಹಜವಾಗಿ ಇರುತ್ತದೆ.

ಕಟ್ಟಡಗಳು ಮತ್ತು ನಗರ ಯೋಜನೆ

ಯುರೋಪ್‌ನ ಮನೆಗಳು ಚಳಿಗಾಲದಲ್ಲಿ ಬಿಸಿ ಉಳಿಸಿಕೊಳ್ಳುವಂತೆ ಕಟ್ಟಲಾಗಿದೆ. ಮರದ ನೆಲ, ದಪ್ಪ ಗೋಡೆಗಳು, ಕಪ್ಪು ಛಾವಣಿಗಳು ಬಿಸಿಲನ್ನು ಹೀರಿಕೊಂಡು ಒಳಗೆ ಬಿಸಿ ಮಾಡುತ್ತವೆ. ಭಾರತದ ಮನೆಗಳು ಬಿಸಿಲಿಗೆ ತಡೆಯುವಂತೆ ಕಟ್ಟಲಾಗುತ್ತದೆ.

ಏರ್ ಕಂಡಿಷನರ್

ಯುರೋಪ್‌ನಲ್ಲಿ ಹಿಂದೆ ಬಿಸಿಲು ಕಡಿಮೆ ಇದ್ದುದರಿಂದ ಹೆಚ್ಚಿನ ಮನೆಗಳಲ್ಲಿ ಏಸಿ ಇರಲಿಲ್ಲ. ಕೇವಲ 20% ಮನೆಗಳಲ್ಲಿ ಮಾತ್ರ ಏಸಿ ಇದೆ. ಭಾರತದಲ್ಲಿ ಹೆಚ್ಚು ಜನ ಏಸಿ ಬಳಸುತ್ತಾರೆ.

ಮಾಲಿನ್ಯ

ಭಾರತದಲ್ಲಿ ಹೆಚ್ಚು ಧೂಳು ಮತ್ತು ಕಣಗಳಿರುವುದರಿಂದ ಸೂರ್ಯನ ಕಿರಣಗಳು ಸ್ವಲ್ಪ ಚದುರಿ ಕಡಿಮೆ ತೀವ್ರವಾಗುತ್ತವೆ. ಯುರೋಪ್‌ನಲ್ಲಿ ಆಕಾಶ ಸ್ವಚ್ಛವಾಗಿರುವುದರಿಂದ ಬಿಸಿಲು ನೇರವಾಗಿ ಮತ್ತು ತೀವ್ರವಾಗಿ ಬೀಳುತ್ತದೆ. ಇದಲ್ಲದೆ, ಭಾರತದಲ್ಲಿ ಸಹ ಜನರು ಬಿಸಿಲಿನಿಂದ ಬಹಳ ತೊಂದರೆ ಪಡುತ್ತಾರೆ. ಟಿನ್ ಛಾವಣಿ, ಏಸಿ ಹೊಗೆ, ಏರ್ ಕಂಡಿಷನ್ ಇಲ್ಲದ ಮನೆಗಳಲ್ಲಿ ಜನರು ಕಷ್ಟಪಡುತ್ತಾರೆ. ಆದರೆ ಯೂರೋಪ್‌ನಲ್ಲಿ ಕಂಡು ಕೇಳರಿಯದಷ್ಟು ಹೀಟ್ ವೇವ್ ತೊಂದರೆ ಕೊಡುತ್ತಿದೆ ಅಂತ ಅವರು ವಿವರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed