Last Updated:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20ಐ ಪಂದ್ಯ ಜುಲೈ 1 ರಂದು ನಡೆಯಲಿದೆ. ಐರ್ಲೆಂಡ್ ವಿರುದ್ಧದ ಸರಣಿ ಸೋಲಿನ ನಂತರ, ಟೀಮ್ ಇಂಡಿಯಾ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಿದೆ.
ಐರ್ಲೆಂಡ್ (Ireland) ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ (India) ತಂಡ ಸೋತಿದೆ. ಜುಲೈ 1 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೆಣಸಲಿದೆ. ಶ್ರೇಯಸ್ ಅಯ್ಯರ್ (Shreyas Iyer) ಅವರ ನಾಯಕತ್ವದ ಅವಧಿ ಕಳಪೆ ಆರಂಭವನ್ನು ಪಡೆಯಿತು. ನೀಡಿತು. ಈಗ, ಅವರು ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಗೆಲ್ಲುವ ಮೂಲಕ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಲು ನೋಡುತ್ತಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್ (England) ವಿರುದ್ಧದ ಮೊದಲ ಟಿ20ಐ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್-11 ಹೇಗಿರಲಿದೆ? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಹೌದು, ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಟೀಮ್ ಇಂಡಿಯಾ 16 ಆಟಗಾರರನ್ನು ಒಳಗೊಂಡಿದೆ. ಐರ್ಲೆಂಡ್ ವಿರುದ್ಧದ ಸರಣಿ ಸೋಲಿನ ನಂತರ, ಟೀಮ್ ಇಂಡಿಯಾ ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡುವುದು ಬಹುತೇಕ ಖಚಿತ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐನಿಂದ ಹೊರಗುಳಿಯಬಹುದಾದ ಐದು ಆಟಗಾರರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವೈಭವ್ ಸೂರ್ಯವಂಶಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಅವರು ಸಂಜು ಸ್ಯಾಮ್ಸನ್‌ಗೆ ಹೆಚ್ಚುವರಿ ಅವಕಾಶಗಳನ್ನು ನೀಡಲು ಬಯಸುವುದಾಗಿ ಹೇಳಿದ್ದಾರೆ. ಈ ಕಾರಣಕ್ಕಾಗಿ ವೈಭವ್ ತಮ್ಮ ಚೊಚ್ಚಲ ಪ್ರವೇಶಕ್ಕಾಗಿ ಕಾಯಬೇಕಾಗಬಹುದು.
ಐರ್ಲೆಂಡ್ ವಿರುದ್ಧದ ಮೊದಲ ಟಿ20ಐನಲ್ಲಿ ಪ್ರಸಿದ್ಧ್ ಕೃಷ್ಣ ಕಳಪೆ ಆರಂಭ ಪಡೆದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 57 ರನ್‌ಗಳನ್ನು ಬಿಟ್ಟುಕೊಟ್ಟರು. ಎರಡನೇ ಟಿ20ಐನಲ್ಲಿ ಪ್ರಿನ್ಸ್ ಯಾದವ್ ಅವರನ್ನು ಬದಲಾಯಿಸಿದರು. ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರು ಇಂಗ್ಲೆಂಡ್ ವಿರುದ್ಧವೂ ಪ್ರಿನ್ಸ್ ಯಾದವ್ ಆಡಬಹುದು. ಪರಿಣಾಮ ಪ್ರಸಿದ್ಧ್ ಅವರನ್ನು ಹೊರಗಿಡಬಹುದು.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ಮರಳಲಿದ್ದಾರೆ. ಅವರು ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದು, ಅವರು ಕಮ್ಬ್ಯಾಕ್ ಮಾಡಿದ ನಂತರ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಪರಿಣಾಮ ರವಿ ಬಿಷ್ಣೋಯಿ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗಬಹುದು.
ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ವಿಫಲರಾದರು. ಪರಿಣಾಮವಾಗಿ, ಅವರನ್ನು ಎರಡನೇ ಟಿ20ಐಗೆ ಟೀಮ್ ಇಂಡಿಯಾ ತಂಡದಿಂದ ಹೊರಗಿಡಲಾಗಿದೆ. ತಂಡಕ್ಕೆ ಹೆಚ್ಚುವರಿ ಸ್ಪಿನ್ನರ್ ಅಗತ್ಯವಿಲ್ಲದ ಕಾರಣ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಸುಂದರ್ ಅವರನ್ನು ಹೊರಗಿಡಬಹುದು.
ಸೂರ್ಯಾಂಶು ಶೆಡ್ಜ್ ಐರ್ಲೆಂಡ್ ವಿರುದ್ಧ ಮರೆಯಲಾಗದ ಟಿ20ಐ ಚೊಚ್ಚಲ ಪಂದ್ಯವನ್ನು ಆಡಿದ್ದರು. ಆದರೆ. ಇಂಗ್ಲೆಂಡ್ ವಿರುದ್ಧ ಶೆಡ್ಜ್‌ಗೆ ಅವಕಾಶ ಸಿಗದಿರಬಹುದು. ವರುಣ್ ಚಕ್ರವರ್ತಿ ಕಮ್ಬ್ಯಾಕ್ ಮಾಡಿದ ನಂತರ ತಂಡದ ಸಂಯೋಜನೆಯನ್ನು ಗಮನಿಸಿದರೆ, ಶೆಡ್ಜ್ ಹೊರಗುಳಿಯಬೇಕಾಗಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್-11: ಅಭಿಷೇಕ್ ಶರ್ಮಾ, ಸಂಜು ಸ್ಯಾಮನ್ಸ್, ಇಶಾನ್ ಕಿಶನ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್.













