Last Updated:
ಸಿಟಿ ಲೈಟ್ಸ್ ಚಿತ್ರದಲ್ಲಿ ಒಂದು ಲವ್ ಸ್ಟೋರಿ ಇದೆ. ಇದರಲ್ಲಿ ಮುಗ್ಧತೆನೂ ಇದೆ. ದುನಿಯಾ ಚಿತ್ರದಲ್ಲಿಇದ್ದ ಆ ಪ್ರೇಮಿಗಳ ಮುಗ್ಧತೆ ಇಲ್ಲಿರೋ ಪ್ರೇಮಿಗಳಲ್ಲೂ ಇದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿ ಇದನ್ನ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಪೂರ್ಣ ವಿವರ ಇಲ್ಲಿದೆ ಓದಿ…
ದುನಿಯಾ ಚಿತ್ರದ (Duniya Vijay) ಶಿವಲಿಂಗ ಮತ್ತು ಪೂರ್ಣಿ ಲವ್ ಸ್ಟೋರಿ ಇಂದಿಗೂ ಇಷ್ಟ ಆಗುತ್ತದೆ. ಲಾಂಗು ಮಚ್ಚು ಲೋಕದಲ್ಲಿ ಒಂದು ಚೆಂದದ ಪ್ರೀತಿಯನ್ನು ಚಿತ್ರದ ಡೈರೆಕ್ಟರ್ ಸೂರಿ ಇಲ್ಲಿ ಹೇಳಿದ್ದರು. ಇವರ ಪ್ರೀತಿಯಲ್ಲಿ ಬುದ್ಧಿವಂತಿಕೆ ಏನೂ ಇರಲಿಲ್ಲ. ಇಬ್ಬರು ಮುಗ್ಧ ಪ್ರೇಮಿಗಳೇ (Innocent Lover) ಆಗಿದ್ದರು. ಕೊನೆಗೆ ಏನ್ ಆಗ್ತಾರೆ ಅನ್ನೊದು ದುನಿಯಾ ಚಿತ್ರ ನೋಡಿವರಿಗೆ ಗೊತ್ತೇ ಇರುತ್ತದೆ. ಅಂತಹ ಈ ಮುಗ್ಧ ಪ್ರೀತಿಯನ್ನ ಸಿಟಿ ಲೈಟ್ಸ್ (City Lights) ಅಲ್ಲಿ ತರುವ ಪ್ರಯತ್ನವೂ ಆಗಿದೆ. ಡೈರೆಕ್ಟರ್ ದುನಿಯಾ ವಿಜಯ್ (Duniya Vijay) ಈ ಒಂದು ಪ್ರಯತ್ನ ಮಾಡಿದ್ದಾರೆ. ಅದರ ಬಗ್ಗೆ ಅಷ್ಟೆ ಪ್ರೀತಿಯಿಂದಲೂ ಮಾತನಾಡುದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಚಿತ್ರದಲ್ಲಿ ಪ್ರೀತಿ ಇದೆ…
ಆದರೆ, ಅವುಗಳನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಮಾತ್ರ ಅರ್ಥ ಆಗುತ್ತದೆ. ಈ ಚಿತ್ರ ನೋಡಿದ್ಮೇಲೆ ಡೈರೆಕ್ಟರ್ ಒಳ್ಳೆ ವಿಷಯ ಹೇಳಿದ್ದಾರೆ ಅಂತ ಜನ ಮಾತನಾಡಿಕೊಳ್ಳುತ್ತಾರೆ. ಆ ರೀತಿಯ ವಿಷಯ ಚಿತ್ರದಲ್ಲಿದೆ.
ಚಿತ್ರದಲ್ಲಿ ಕೇವಲ ರಕ್ತ ಪಾತ ಮಾತ್ರ ಇಲ್ಲ. ಇಲ್ಲೊಂದು ಲವ್ ಸ್ಟೋರಿನೂ ಇದೆ. ಇದು ಮುಗ್ಧ ಪ್ರೇಮ ಕತೆನೆ ಆಗಿದೆ. ದುನಿಯಾ ಚಿತ್ರದಲ್ಲಿ ಇತ್ತಲ್ವಾ ಆ ಮುಗ್ಧ ಪ್ರೀತಿ….
ಹೌದು, ಆ ರೀತಿಯ ಪ್ರೀತಿಯನ್ನ ಇಲ್ಲೂ ತಂದಿದ್ದೇನೆ. ಹಾಗಂತ ಇದು ದುನಿಯಾ ಲವ್ ಸ್ಟೋರಿ ಅಲ್ವೇ ಅಲ್ಲ. ಸಿಟಿ ಲೈಟ್ಸ್ ಬೇರೆ ಚಿತ್ರವೇ ಆಗಿದೆ. ಇಲ್ಲಿ ಆ ಮುಗ್ಧ ಪ್ರೀತಿಯನ್ನ ಹೇಳುವ ಕೆಲಸ ಮಾಡಿದ್ದೇನೆ ಅಂತಲೇ ದುನಿಯಾ ವಿಜಯಕುಮಾರ್ ಹೇಳಿಕೊಂಡಿದ್ದಾರೆ.
ಸಿಟಿ ಲೈಟ್ಸ್ ಚಿತ್ರದಲ್ಲಿ ದುನಿಯಾ ವಿಜಯಕುಮಾರ್ ಮಗಳು ಮೊನಿಷಾ ವಿಜಯ್ಕುಮಾರ್ ಅಭಿನಯಿಸಿದ್ದಾರೆ. ಇವರಿಗೆ ಇದು ಮೊದಲ ಚಿತ್ರವೇ ಆಗಿದೆ. ವಿದೇಶದಲ್ಲಿ ಸಿನಿಮಾ ಅಭ್ಯಾಸ ಮಾಡಿದ್ದಾರೆ.
ಮುಗ್ಧ ಪ್ರೀತಿ…
(ಚಿತ್ರ ಕೃಪೆ: ಮೊನಿಷಾ ವಿಜಯ್ಕುಮಾರ್ ಇನ್ಸ್ಟಾಗ್ರಾಮ್)
ಅಲ್ಲಿಂದ ಬಂದ್ಮೇಲೆ ಅಪ್ಪನ ಡೈರೆಕ್ಷನ್ನ ಈ ಚಿತ್ರದಲ್ಲಿಯೇ ಅಭಿನಯಿಸಿದ್ದಾರೆ. ಇದು ಇವರಿಗೆ ವಿಶೇಷ ಅನುಭವ ಕೊಟ್ಟಿದೆ. ವಿದೇಶದಲ್ಲಿ ಕಲಿತಿರೋದನ್ನ ಇಲ್ಲಿಯೇ ಕಲಿಯಬಹುದಿತ್ತು ಅಂತಲೂ ಅನಿಸಿದೆ.
ವಿನಯ್ ರಾಜಕುಮಾರ್ ಈ ಚಿತ್ರದಲ್ಲಿ ಮೊನಿಷಾ ವಿಜಯಕುಮಾರ್ಗೆ ಜೋಡಿ ಆಗಿದ್ದಾರೆ. ಮೊನಿಷಾ ಮತ್ತು ವಿನಯ್ ಈ ಚಿತ್ರದಲ್ಲಿ ತುಂಬಾನೆ ಚೆನ್ನಾಗಿಯೂ ಕಾಣಿಸುತ್ತಾರೆ.
ಸಿಟಿ ಲೈಟ್ಸ್ ಚಿತ್ರ ಸೆಪ್ಟೆಂಬರ್-18 ರಂದು ರಿಲೀಸ್ ಆಗುತ್ತಿದೆ. 150 ಪ್ಲಸ್ ಥಿಯೇಟರ್ ಅಲ್ಲಿ ಇದು ತೆರೆ ಕಾಣುತ್ತಿದೆ. ಇನ್ನುಳಿದಂತೆ ಈ ಚಿತ್ರ ಕೂಡ ನಿರೀಕ್ಷೆ ಹುಟ್ಟುಹಾಕಿದೆ ಅಂತ ಹೇಳಬಹುದು.














