Dulquer Salman: ನಟ ದುಲ್ಕರ್​ಗೆ ಬಿಗ್ ಶಾಕ್! ಕಸ್ಟಮ್ಸ್ ಅಧಿಕಾರಿಗಳಿಂದ ಗಂಟೆಗಟ್ಟಲೆ ಡ್ರಿಲ್ | | ACTPnews

ದುಲ್ಕರ್


Last Updated:

Dulquer Salman: ಖ್ಯಾತ ನಟ ದುಲ್ಕರ್ ಸಲ್ಮಾನ್​ಗೆ ಗಂಟೆಗಟ್ಟಲೆ ಡ್ರಿಲ್ ಮಾಡಿದ್ಯಾಕೆ? ಕೊಚ್ಚಿ ಆಫೀಸ್​​ನಲ್ಲಿ ಅಧಿಕಾರಿಗಳಿಂದ ವಿಚಾರಣೆ, ಭೂತಾನ್​ನಿಂದ ಕಾರು ಕೇರಳಕ್ಕೆ ಬಂದಿದ್ದು ಹೇಗೆ?

ದುಲ್ಕರ್
ದುಲ್ಕರ್

ವಿವಾದಾತ್ಮಕ ಭೂತಾನ್ ಕಾರು ಕಳ್ಳಸಾಗಣೆ (Car Smuggling Case) ಪ್ರಕರಣದಲ್ಲಿ ಬಹುಭಾಷಾ ನಟ ದುಲ್ಕರ್ ಸಲ್ಮಾನ್ (Dulquer Salman) ಅವರನ್ನು ಕೊಚ್ಚಿಯ (Kochi) ಕಸ್ಟಮ್ಸ್ ಕಚೇರಿಯಲ್ಲಿ (Customs Office) ಅಧಿಕಾರಿಗಳು ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಈಗಾಗಲೇ ದುಲ್ಕರ್ ಅವರ ನಾಲ್ಕು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ. ಭೂತಾನ್​ ಗಡಿಯಲ್ಲಿ ಕೆಲಸ ಮಾಡೋ ಕಳ್ಳಸಾಗಣೆ ತಂಡವು ದುಲ್ಕರ್ ಅವರಿಗೆ ವಾಹನಗಳನ್ನು ಮಾರಾಟ ಮಾಡಿದೆ ಎಂಬ ಆರೋಪವನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಕಾರನ್ನು ಕಳ್ಳಸಾಗಣೆ ಮಾಡಲಾಗಿ ತರಲಾಗಿದೆ ಎನ್ನುವುದು ತನಗೆ ತಿಳಿದಿಲ್ಲ ಎಂದು ದುಲ್ಕರ್ ಹೇಳಿದ್ದಾರೆ. ಭೂತಾನ್​ನಿಂದ ಭಾರತಕ್ಕೆ ಐಷಾರಾಮಿ ಕಾರುಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವ ಬಗ್ಗೆ ತನಿಖೆ ನಡೆಸುತ್ತಿರುವ ‘ಆಪರೇಷನ್ ನಮ್ಖೋರ್’ ನ ಭಾಗವಾಗಿ ನಟನ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದುಲ್ಕರ್ ನಟಿಸಿದ ತೆಲುಗು ಚಿತ್ರ ‘ಲಕ್ಕಿ ಭಾಸ್ಕರ್’ ನಲ್ಲಿ ಬಳಸಲಾದ ನಿಸ್ಸಾನ್ ಪೆಟ್ರೋಲ್ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮೊದಲು, ದುಲ್ಕರ್ ನಿಂದ ಲ್ಯಾಂಡ್ ರೋವರ್ ಡಿಫೆಂಡರ್, ಟೊಯೋಟಾ ಲ್ಯಾಂಡ್ ಕ್ರೂಸರ್ ಮತ್ತು ನಿಸ್ಸಾನ್ ಪೆಟ್ರೋಲ್ ನಂತಹ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

ಭೂತಾನ್​ನಿಂದ ತೆರಿಗೆ ಪಾವತಿಸದೆ ಭಾರತಕ್ಕೆ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗುತ್ತಿರುವ ಐಷಾರಾಮಿ ವಾಹನಗಳನ್ನು ಉತ್ತರ ಭಾರತದ ರಾಜ್ಯಗಳಲ್ಲಿ ನೋಂದಾಯಿಸಿ, ಕೇರಳಕ್ಕೆ ಕಳ್ಳಸಾಗಣೆ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವಿತ್ತು.

ದುಲ್ಕರ್ ನ್ಯಾಯಾಲಯದ ಮೆಟ್ಟಿಲೇರಿದ್ದು, ತಾನು ಕಾರುಗಳನ್ನು ಕಾನೂನುಬದ್ಧವಾಗಿ ಖರೀದಿಸಿದ್ದೇನೆ ಎಂದಿದ್ದರು. ನಂತರ ವಶಪಡಿಸಿಕೊಂಡ ಕಾರುಗಳನ್ನು ಬ್ಯಾಂಕ್ ಗ್ಯಾರಂಟಿ ಆಧಾರದ ಮೇಲೆ ಅವರಿಗೆ ಬಿಡುಗಡೆ ಮಾಡಲಾಯಿತು. ಅನುಮತಿಯಿಲ್ಲದೆ ಕಾರುಗಳನ್ನು ರಾಜ್ಯದಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ತನಿಖಾ ತಂಡವು ಕೋರಿದಾಗ ಕಾರುಗಳನ್ನು ಹಾಜರುಪಡಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.

ಇದನ್ನೂ ಓದಿ: Ganesh Birthday: ಗಣೇಶ್ ಬರ್ತ್​ಡೇ ಸಂಭ್ರಮ, 2 ವಾರದ ಅಂತರದಲ್ಲಿ 2 ಸಿನಿಮಾ ರಿಲೀಸ್

ವಿವಾದಾತ್ಮಕ ಭೂತಾನ್ ಕಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುಲ್ಕರ್ ಸಲ್ಮಾನ್ ಅವರನ್ನು ಕೊಚ್ಚಿಯ ಕಚೇರಿಯಲ್ಲಿ ಕಸ್ಟಮ್ಸ್ ಇಲಾಖೆ ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದ್ದು ಭೂತಾನ್ ಗಡಿಯ ಮೂಲಕ ಭಾರತಕ್ಕೆ ತೆರಿಗೆ ವಂಚನೆ ಮಾಡಿದ ಐಷಾರಾಮಿ ಕಾರುಗಳ ಅಕ್ರಮ ಕಳ್ಳಸಾಗಣೆ ಕುರಿತು ನಡೆಯುತ್ತಿರುವ ತನಿಖೆಯಾದ ‘ಆಪರೇಷನ್ ನಮ್ಖೋರ್’ ನ ಭಾಗವಾಗಿ, ಸಂಸ್ಥೆಯು ಈಗಾಗಲೇ ನಟನಿಂದ ನಾಲ್ಕು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed