Last Updated:
Drishyam 3: ನಾವು ವರ್ಷಕ್ಕೆ 2 ಸಿನಿಮಾ ಮಾತ್ರ ಮಾಡೋದು ಅಂತ ಕೂರೋ ಸ್ಟಾರ್ ಹೀರೋಗಳು ಇತ್ತ ನೋಡಲೇಬೇಕು. ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ದೃಶ್ಯಂ 3 ಶೂಟಿಂಗ್ ಆಗಿದ್ದು ಎಷ್ಟು ದಿನದಲ್ಲಿ ಗೊತ್ತಾ?
ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾಡುವ ಟ್ರೆಂಡ್ ಶುರುವಾಗಿ ವರ್ಷಗಳಾದವು. ಹಿಟ್ ಆಗಲಿ ಫ್ಲಾಪ್ ಆಗಲಿ ವರ್ಷಕ್ಕೆ ನಾವು ಎರಡು ಸಿನಿಮಾ ಮಾತ್ರ ಮಾಡೋದಪ್ಪಾ ಅಂತ ದೊಡ್ಡ ದೊಡ್ಡ ಸ್ಟಾರ್ ಹೀರೋಗಳು (Star Heroes) ಪಟ್ಟು ಹಿಡಿದು ಕುಳಿತರೆ ಇನ್ನೂ ಕೆಲವರು ಜಸ್ಟ್ ಒಂದು ಸಿನಿಮಾ ಮಾಡೋದೆ ಕಷ್ಟ. ಇನ್ನೂ ಕೆಲವು ನಟರ ಸಿನಿಮಾ ಬರೋದೆ 2-3 ವರ್ಷಕ್ಕೊಮ್ಮೆ.
ಹೀಗಿರುವ ಸಂದರ್ಭದಲ್ಲಿ ಸಿನಿಮಾವನ್ನು ಈಗಲೂ ಸಂಪೂರ್ಣ ವೃತ್ತಿ ಎಂದುಕೊಂಡು ತಮ್ಮ ಕೈನಲ್ಲಿ ಸಾಧ್ಯವಾದಷ್ಟು ಸಿನಿಮಾ ಮಾಡುವ ನಟರು ಈಗಲೂ ಇದ್ದಾರೆ. ಇದಕ್ಕೆ ಉದಾಹರಣೆ ನಟ ಮೋಹನ್ಲಾಲ್.
ಹೌದು, ದೃಶ್ಯಂ 3 ಸಿನಿಮಾ ರಿಲೀಸ್ ಆಗಿ ಭರ್ಜರಿ ಮೆಚ್ಚುಗೆ ಗಳಿಸುತ್ತಿದೆ. ಸಿನಿಮಾ ಜಸ್ಟ್ 3 ದಿನದಲ್ಲಿ 100 ಕೋಟಿ ಕ್ಲಬ್ ಸೇರಿದೆ. ಈ ಹಿಂದಿನ 2 ಸಿನಿಮಾಗಳು ಹೇಗೆ ಜನರ ಮೆಚ್ಚುಗೆ ಗಳಿಸಿದವೋ ಅದನ್ನು ದೃಶ್ಯಂ 3 ಕೂಡಾ ಉಳಿಸಿಕೊಂಡಿದೆ ಎನ್ನುವುದು ವಿಶೇಷ.
ಈ ಸಿನಿಮಾಗೆ ಹಾಕಿದ್ದು 100 ಕೋಟಿ ಬಜೆಟ್, ಬಜೆಟ್ ಮೂರು ದಿನದಲ್ಲಿ ವಾಪಸ್ ಕೂಡಾ ಬಂತು. ಇದರ ಮೇಲೆ ಬರೋ ಒಂದೊಂದು ರೂಪಾಯಿ ಕೂಡಾ ಚಿತ್ರತಂಡಕ್ಕೆ ಲಾಭವೇ. ಹಾಗಾದರೆ ಈ ಸಿನಿಂಆ ಶೂಟಿಂಗ್ಗೆ ಎಷ್ಟು ದಿನ ಬೇಕಾಯಿತು?
ದೃಶ್ಯಂ 3 ರ ಮೂಲ ಮಲಯಾಳಂ ವರ್ಷನ್ ಶೂಟಿಂಗ್ ಸೆಪ್ಟೆಂಬರ್ 22, 2025 ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ 2, 2025 ರಂದು ಮುಕ್ತಾಯವಾಯಿತು. ಜಸ್ಟ್ ಎರಡು ತಿಂಗಳು 10 ದಿನದಲ್ಲಿ ಈ ಶೂಟಿಂಗ್ ಅನ್ನು ಮುಗಿಸಲಾಗಿದೆ.
ಇದು ಅಚ್ಚರಿ ಅನಿಸೋದಿಲ್ವಾ? ಜಸ್ಟ್ 2 ತಿಂಗಳಲ್ಲಿ ಶೂಟಿಂಗ್ ಮುಗಿಸಿದ ಸಿನಿಮಾ ಈಗ ಜಸ್ಟ್ 3 ದಿನದಲ್ಲಿ ಬರೋಬ್ಬರಿ 100 ಕೋಟಿ ಕಲೆಕ್ಷನ್ ಮಾಡಿ ಆಗಿದೆ. ಇದರ ಮೇಲೆ ಬರೋ ಒಂದೊಂದು ರೂಪಾಯಿಯೂ ಪಕ್ಕಾ ಪ್ರಾಫಿಟ್.
‘ದೃಶ್ಯಂ 3’ ಚಿತ್ರವೂ ರಿಲೀಸ್ ಆದ ಕೇವಲ ಮೂರೇ ದಿನಗಳಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಅದ್ಭುತ ಕಲೆಕ್ಷನ್ ಸಾಧಿಸಿದೆ.
ರಿಲೀಸ್ ಆದ ಪ್ರಾರಂಭಿಕ ಮೂರು ದಿನಗಳಲ್ಲಿ, ದೃಶ್ಯಂ 3 ಭಾರತದಲ್ಲಿ ಸುಮಾರು 40 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ದಾಖಲಿಸಿದೆ. ಮೊದಲ ಮೂರು ದಿನಗಳಲ್ಲಿಯೇ ಇಷ್ಟು ದೊಡ್ಡ ಮಟ್ಟದ ಆರಂಭ ಸಿಕ್ಕಿರುವುದು ಚಿತ್ರಕ್ಕೆ ಭಾರೀ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಂತಾಗಿದೆ.
Bangalore,Karnataka
May 25, 2026 12:40 PM IST
Drishyam 3: ವರ್ಷಕ್ಕೆ 1, 2 ಸಿನಿಮಾ ಮಾತ್ರ ಮಾಡೋದು ಅನ್ನೋರು ಇಲ್ನೋಡಿ! ಬ್ಲಾಕ್ಬಸ್ಟರ್ ಹಿಟ್ ದೃಶ್ಯಂ 3 ಶೂಟಿಂಗ್ ಆಗಿದ್ದೆಷ್ಟು ದಿನದಲ್ಲಿ ಗೊತ್ತಾ?













