Last Updated:
ಪ್ರಸ್ತುತ ಸುಮಾರು 1.6 ಮಿಲಿಯನ್ ಜನರು F ವೀಸಾಗಳು ಮತ್ತು 500,000 J ವೀಸಾಗಳನ್ನು ಹೊಂದಿದ್ದಾರೆ. ಹೊಸ ನೀತಿಯು ಪ್ರಮುಖ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಕಡಿಮೆ ಮಾಡಬಹುದು ಮತ್ತು ಲಕ್ಷಾಂತರ ಡಾಲರ್ಗಳಷ್ಟು ವೆಚ್ಚವಾಗಬಹುದು ಎಂದು ನ್ಯಾಯಾಧೀಶರು ಎಚ್ಚರಿಸಿದರು.
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತಕ್ಕೆ ಸೋಮವಾರ ಮತ್ತೊಂದು ಮುಖಭಂಗ ಉಂಟಾಗಿದೆ. ಫೆಡರಲ್ ನ್ಯಾಯಾಧೀಶರೊಬ್ಬರು ವಿದೇಶಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ಅಮೆರಿಕದಲ್ಲಿ ಎಷ್ಟು ಕಾಲ ಉಳಿಯಬಹುದು ಎಂಬುದಕ್ಕೆ ಕಠಿಣ ಮಿತಿ ಹೇರುತ್ತಿದ್ದ ಟ್ರಂಪ್ ಸರ್ಕಾರದ (USA Govt) ಹೊಸ ನಿಯಮಕ್ಕೆ ಬ್ರೇಕ್ ಹಾಕಿದ್ದಾರೆ.














