Last Updated:
Dhurandhar: ಧುರಂಧರ್ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್ ಜೋಹ್ರ, ವಿರುದ್ಧ ಚಿತ್ರತಂಡದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಲೈಂಗಿಕ ಕಿರುಕುಳದ ಆರೋಪದಡಿ ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಧುರಂಧರ್ (Dhurandhar) ಚಿತ್ರದ ಪ್ರೊಡಕ್ಷನ್ ಡಿಸೈನರ್ (Production Designer) ಸೈನಿ ಎಸ್ (Saini S. Johra) ಜೋಹ್ರ, ವಿರುದ್ಧ ಚಿತ್ರತಂಡದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಲೈಂಗಿಕ ಕಿರುಕುಳದ ಆರೋಪದಡಿ ಚಂಡೀಗಢ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಈ ಪ್ರಕರಣದಿಂದ ಜೋಹ್ರ, ಈಗಾಗಲೇ ಜಾಮೀನು ಪಡೆದಿದ್ದಾರೆ ಎಂದು ವರದಿಯಾಗಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ನವದೆಹಲಿಯ ನಿವಾಸಿಯಾಗಿರುವ ದೂರುದಾರರು ಏಪ್ರಿಲ್ 20 ರಂದು ಲಿಖಿತ ದೂರು ಸಲ್ಲಿಸಿದ ನಂತರ ಚಂಡೀಗಢದ ಸೆಕ್ಟರ್ 17 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 74, 79, 123 ಮತ್ತು 126(2) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಜೊತೆಗೆ ಜೋಹ್ರ ಈಗಾಗಲೇ ಜಾಮೀನು ಪಡೆದಿರುವುದಾಗಿ ವರದಿಯಾಗಿದೆ, ಆದರೆ ಅವರಿಂದ ಇನ್ನೂ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ಹೊರಬಿದ್ದಿಲ್ಲ.
FIR against #Dhurandhar production designer over sexual harassment allegations ⚠️
Chandigarh Police have registered a case against Saini S Johray, the production designer of Dhurandhar, following a complaint by a woman accusing him of sexual harassment, wrongful confinement and… pic.twitter.com/UhfF71tnhN— Always Bollywood (@AlwaysBollywood) May 26, 2026
ದೂರುದಾರೆಯ ಪ್ರಕಾರ, ಜೋಹ್ರ ಕೆಲಸ ಸಂಬಂಧಿತ ಚರ್ಚೆಯ ನೆಪದಲ್ಲಿ ತಮಗನ್ನು ಚಂಡೀಗಢದ ತಾಜ್ ಹೋಟೆಲ್‌ನ ಕೊಠಡಿಗೆ ಕರೆಸಿಕೊಂಡಿದ್ದಾರೆ . ಆ ಬಳಿಕ ಆರಂಭದಲ್ಲಿ ಇದನ್ನು ಸಾಮಾನ್ಯ ತಂಡದ ಸಭೆ ಎಂದು ಭಾವಿಸಿದ್ದರೂ ನಂತರ ತನ್ನನ್ನು ಮಾತ್ರವೇ ಅಲ್ಲಿ ಕರೆಯಲಾಗಿದೆ ಎಂಬದು ತಿಳಿದುಬಂತು.
ಸೆಪ್ಟೆಂಬರ್ 10, 2025ರ ರಾತ್ರಿ 8.30 ರ ಸುಮಾರಿಗೆ ಹೋಟೆಲ್ ತಲುಪಿದ ದೂರುದಾರೆಯ ಪ್ರಕಾರ, ಜೋಹ್ರ ತನ್ನ ಮೇಲೆ ಮದ್ಯ ಸೇವಿಸಲು ಒತ್ತಡ ಹೇರಿದ್ದಾನೆ. ಅವರು ವೈನ್ ಮತ್ತು ರಮ್ ಇರುವ ಪಾನೀಯವನ್ನು ತಯಾರಿಸಿ, ಹಿಂಜರಿಕೆಯ ಹೊರತಾಗಿಯೂ ಅದನ್ನು ಮುಗಿಸಲು ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಪಾನೀಯ ಸೇವಿಸಿದ ಸ್ವಲ್ಪ ಸಮಯದಲ್ಲೇ ತೀವ್ರ ತಲೆತಿರುಗುವಿಕೆ ಉಂಟಾಗಿದ್ದು, ಕೋಣೆಯಿಂದ ಹೊರ ಹೋಗಲು ಕೇಳಿಕೊಂಡರೂ, ಹೊರಬಿಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹಾಗೆಯೇ ದೂರುದಾರೆಯ ಪ್ರಕಾರ, ನೃತ್ಯ ಕಲಿಸುವ ನೆಪದಲ್ಲಿ ಜೋಹ್ರ ಅನುಚಿತ ದೈಹಿಕ ಸಂಪರ್ಕಕ್ಕೆ ಮುಂದಾಗಿದ್ದಾನೆ. ದೈಹಿಕವಾಗಿ ದುರ್ಬಲ ಸ್ಥಿತಿಯಲ್ಲಿದ್ದಾಗಲೂ ತನ್ನ ವರ್ತನೆಯನ್ನು ಮುಂದುವರೆಸಿದ್ದಾನೆ ಎಂದು ಅವರು ಹೇಳಿದ್ದಾರೆ. ವಾಂತಿ ಮತ್ತು ಅಸ್ವಸ್ಥ ಪರಿಸ್ಥಿತಿಯಲ್ಲಿ ಇದ್ದರೂ, ಹೋಟೆಲ್ ಕೊಠಡಿಯಿಂದ ಹೊರಹೋಗಲು ಅವಕಾಶ ನೀಡದಿರುವುದು ದೂರಿನಲ್ಲಿರುವ ಅತ್ಯಂತ ಗಂಭೀರ ಅಂಶವಾಗಿದೆ.
ಇನ್ನು ಚಂಡೀಗಢ ಪೊಲೀಸರು ಈಗಾಗಲೇ ದೂರು ದಾಖಲಿಸಿರುವುದರಿಂದ ಪ್ರಕರಣ ಈಗ ಪೂರ್ಣ ತನಿಖೆಗೆ ಸಾಗುತ್ತಿದೆ. ಆರೋಪಗಳು ಗಂಭೀರವಾಗಿರುವ ಹಿನ್ನೆಲೆಯಲ್ಲಿಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದೆ ಇನ್ನಷ್ಟು ಮಾಹಿತಿ ಹೊರಬರಲಿದೆ ಎಂದು ಹೇಳಲಾಗುತ್ತಿದೆ.
Bangalore [Bangalore],Bangalore,Karnataka













