Dhruva Sarja: ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್! | | ACTPnews

ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್!


Last Updated:

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡದ ಖಳನಾಯಕ ನಟರನ್ನ ನೆನಪಿಸಿಕೊಂಡಿದ್ದಾರೆ. ಎಲ್ಲರಿಗೂ ಅಪ್ಪಾಜಿ ಅಂತಲೂ ಹೇಳಿದ್ದಾರೆ. ಪ್ರಭಾಕರ್ ಮತ್ತು ಸರ್ಜಾ ಫ್ಯಾಮಿಲಿ ನಂಟು ಅದೆಷ್ಟು ಗಟ್ಟಿ ಅನ್ನೋದನ್ನು ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್!
ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಕನ್ನಡದ ಮಹಾನ್ ಖಳನಾಯಕರನ್ನ (Kannada Veteran Villains) ನೆನಪಿಸಿಕೊಂಡಿದ್ದಾರೆ. ತಮ್ಮ ತಾತನ ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ಆ ಸಮಯದಲ್ಲಿ ಏನೆಲ್ಲ ಆಗ್ತಾ ಇತ್ತು. ತಮ್ಮ ಮನೆಗೆ ಯಾವೆಲ್ಲ ಕಲಾವಿದರು ಬರ್ತಿದ್ದರು. ಹೇಗೆಲ್ಲ ಒಟ್ಟಿಗೆ ಮನೆಯಲ್ಲಿ ಟೈಮ್ ಸ್ಪೆಂಡ್ (Time Spend) ಮಾಡ್ತಾ ಇದ್ದರು. ಏನೆಲ್ಲ ನಡೀತಿತ್ತು. ಈ ಎಲ್ಲ ವಿಷಯವನ್ನ ಹೇಳಿಕೊಂಡಿದ್ದಾರೆ. ಆದರೆ, ಇದೆಲ್ಲ ಇವರಿಗೆ ಹೇಗೆ ಗೊತ್ತಿತ್ತು ಅನ್ನುವ ಕುತೂಹಲಕ್ಕೂ ಧ್ರುವ ಸರ್ಜಾ (Dhruva Sarja) ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಧ್ರುವ ಸರ್ಜಾ ಆ ದಿನಗಳು

ಧ್ರುವ ಸರ್ಜಾ ಬಹುತೇಕ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಹಂಚಿಕೊಂಡಿದ್ದಾರೆ. ಟೈಗರ್ ಪ್ರಭಾಕರ್ ಮತ್ತು ತಮ್ಮ ಫ್ಯಾಮಿಲಿಯ ನಂಟು ಹೇಗೆಲ್ಲ ಇರ್ತಾ ಇತ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ.
Dhruva Sarja Share Unknown Facts of prabhakar and sarja family bonding

ಯಾರಿಗೂ ಗೊತ್ತಿರದ ಆ ವಿಷಯ ಹಂಚಿಕೊಂಡ ಧ್ರುವ ಸರ್ಜಾ

ಆ ದಿನಗಳಲ್ಲಿ ನಮ್ಮ ಮನೆ ಒಂದು ರೀತಿ ಆಪ್ತರು ಮತ್ತು ಸ್ನೇಹಿತರು ಒಟ್ಟಿಗೆ ಸೇರುವ ಒಂದು ಅಡ್ಡ ಆಗಿತ್ತು. ಅಷ್ಟೆ ಪ್ರೀತಿ ಮತ್ತು ಆತ್ಮೀಯವಾಗಿಯೇ ಇಲ್ಲಿ ಟೈಮ್ ಕಳೆಯುತ್ತಿದ್ದರು.

ಒಟ್ಟಿಗೆ ಇಸ್ಪೆಟ್ ಆಡ್ತಿದ್ದರು

ನಮ್ಮ ಮನೆಗೆ ಪ್ರಭಾಕರ್ ಅಂಕಲ್ ಬರ್ತಿದ್ದರು. ತೂಗುದೀಪ್ ಶ್ರೀನಿವಾಸ್ ಅಪ್ಪಾಜಿ, ವಜ್ರಮುನಿ ಸರ್, ದಿನೇಶ್ ಅಪ್ಪಾಜಿ, ಸುಧೀರ್ ಅಪ್ಪಾಜಿ ಹೀಗೆ ಇವರೆಲ್ಲ ನಮ್ಮ ಮನೆಗೆ ಬರ್ತಾ ಇದ್ದರು.

ಇವರೆಲ್ಲ ಇಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದರು. ನಮ್ಮ ತಾತ ಶಕ್ತಿ ಪ್ರಸಾದ್ ಕೂಡ ಇವರ ಜೊತೆಗೆ ಇರ್ತಿದ್ದರು. ಎಲ್ಲರೂ ಒಟ್ಟಿಗೆ ಇಸ್ಪೆಟ್ ಕೂಡ ಅಡ್ತಾ ಇದ್ದರು ಅನ್ನೋದನ್ನ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.

ಇವರಿಗೆ ಇದು ಹೇಗೆ ಗೊತ್ತು

ಧ್ರುವ ಸರ್ಜಾ ಅವರಿಗೆಲ್ಲ ಇದು ಹೇಗೆ ಗೊತ್ತು? ಈ ಪ್ರಶ್ನೆ ಬರುತ್ತದೆ ಅಲ್ವೇ? ಅದಕ್ಕೂ ಧ್ರುವ ಸರ್ಜಾ ಉತ್ತರ ಕೊಟ್ಟಿದ್ದಾರೆ. ನಮ್ಮ ಅಮ್ಮ ಮತ್ತು ಅಪ್ಪಾಜಿ ಈ ಎಲ್ಲ ವಿಷಯವನ್ನ ಹೇಳ್ತಾ ಇದ್ದರು.

Dhruva Sarja Share Unknown Facts of prabhakar and sarja family bonding

ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್

ಹಾಗಾಗಿಯೇ ತಾತನ ಬಗ್ಗೆ ಮತ್ತು ತಾತನ ಸ್ನೇಹಿತರ ಬಗ್ಗೆ ಗೊತ್ತಿದೆ. ಅದಕ್ಕೂ ಹೆಚ್ಚಾಗಿ ಪ್ರಭಾಕರ್ ಅಂಕಲ್ ನಮ್ಮ ತಾತನ ಜೊತೆಗೆ ಹೆಚ್ಚು ಕಡಿಮೆ 40 ರಿಂದ 45 ಚಿತ್ರಗಳನ್ನ ಮಾಡಿದ್ದಾರೆ.

ನಮ್ಮ ಅಂಕಲ್ ಜೊತೆಗೂ..

ನಮ್ಮ ಅರ್ಜುನ್ ಸರ್ಜಾ ಅಂಕಲ್ ಜೊತೆಗೂ ಪ್ರಭಾಕರ್ ಅವರು ಸಿನಿಮಾ ಮಾಡಿದ್ದಾರೆ. ಹಾಗೆ ನಮ್ಮದು ಮೂರನೇ ಜನರೇಷನ್ ಅಂತಲೇ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.

ಟ್ರೈಲರ್ ರಿಲೀಸ್ ಮಾಡಿದರು. ನೋಡಿ ಮೆಚ್ಚಿಕೊಂಡರು. ಆ ಮೇಲೆ ತಮ್ಮ ಮತ್ತು ಪ್ರಭಾಕರ್ ಫ್ಯಾಮಿಲಿಯ ನಂಟು ಅದೆಷ್ಟು ಗಟ್ಟಿ ಅನ್ನೋದನ್ನು ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed