DevaRaaya Movie: ಕಿಚ್ಚನ ‘ದೇವರಾಯ’ ತಯಾರಿ ಜೋರು, ಇತಿಹಾಸಕಾರ ಧರ್ಮೇಂದ್ರ ಕುಮಾರ್ ಭೇಟಿ ಫೋಟೋ ವೈರಲ್! | | ACTPnews

ಇತಿಹಾಸಕಾರ ಧರ್ಮೇಂದ್ರ ಕುಮಾರ್ ಭೇಟಿ ಫೋಟೋ ವೈರಲ್!


Last Updated:

ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿ ಶ್ರೀಕೃಷ್ಣ ದೇವರಾಯನ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಇದಕ್ಕಾಗಿ ದೇಹವನ್ನ ಹುರಿಗೊಳಿಸ್ತಿರೋದು ತಿಳಿದಿದೆ. ಆದರೆ, ಇದೀಗ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಮತ್ತು ಕಿಚ್ಚ ಸುದೀಪ್ ಭೇಟಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಇತಿಹಾಸಕಾರ ಧರ್ಮೇಂದ್ರ ಕುಮಾರ್ ಭೇಟಿ ಫೋಟೋ ವೈರಲ್!
ಇತಿಹಾಸಕಾರ ಧರ್ಮೇಂದ್ರ ಕುಮಾರ್ ಭೇಟಿ ಫೋಟೋ ವೈರಲ್!

ಕಿಚ್ಚ ಸುದೀಪ್ (Kichcha Sudeepa) ಇತಿಹಾಸಕಾರ ಧರ್ಮೇಂದ್ರ ಕುಮಾರ್ (Dharmendra Kumar) ಅವರನ್ನ ಮೀಟ್ ಆಗಿದ್ದಾರೆ. ಇದು ಒಂದು ಸಾಧಾರಣ ಭೇಟಿ ಆಗಿದೆ. ಇಲ್ಲಿ ಅಂತಹ ವಿಶೇಷ ಏನೂ ಇಲ್ಲ ಅನ್ನುವ ಮಾತುಗಳು ಕೇಳಿ ಬರ್ತಿವೆ. ಆದರೆ, ಕಿಚ್ಚ ಸುದೀಪ್ ಈಗೊಂದು ದೊಡ್ಡ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಕೃಷ್ಣ ದೇವರಾಯನ (Sri Krishnadevaraya) ಪಾತ್ರ ಮಾಡುತ್ತಿದ್ದಾರೆ. ಸುದೀಪ್ (Sudeepa) ಜನ್ಮ ದಿನ ಸೆಪ್ಟೆಂಬರ್-2 ರಂದು ಈ ಒಂದು ಪಾತ್ರದ ಲುಕ್ ಹೊರ ಬಂದಿದೆ. ಈ ಕಾರಣಕ್ಕೇನೆ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಭೇಟಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.

ದೇವರಾಯ…

ಸುದೀಪ್ ಅಭಿನಯದ ಮುಂದಿನ ಚಿತ್ರ ದೇವರಾಯ ವಿಶೇಷವಾಗಿದೆ. ಶ್ರೀಕೃಷ್ಣ ದೇವರಾಯನ ಕತೆಯನ್ನ ಇಲ್ಲಿ ಹೇಳಾಗುತ್ತಿದೆ. ಈ ಚಿತ್ರದಲ್ಲಿ ಸುದೀಪ್ ಹೇಗೆ ಕಾಣಿಸುತ್ತಾರೆ ಅನ್ನುವ ಕಲ್ಪನೆ ಸಿಕ್ಕಾಗಿದೆ.
devaraaya movie kiccha sudeepa historian dharmendra kumar meet photo viral

ಕಿಚ್ಚನ ‘ದೇವರಾಯ’ ತಯಾರಿ ಜೋರು

(ಚಿತ್ರ ಕೃಪೆ: ದೇವರಾಯ ಸಿನಿಮಾ ಟೀಮ್)

ಚಿತ್ರದ ಮೊದಲ ಲುಕ್ ಹೊರ ಬಂದಿದೆ. ಸೆಪ್ಟೆಂಬರ್-2 ಸುದೀಪ್ ಜನ್ಮ ದಿನದಂದು ಈ ಪೊಸ್ಟರ್ ಹೊರ ಬಂದಿದೆ. ಈ ಚಿತ್ರದ ಡೈರೆಕ್ಟರ್ ಯಾರು ಅನ್ನುವ ಕುತೂಹಲವು ಇದೆ.

ಯಾವಾಗ ಶೂಟಿಂಗ್

ಈ ಚಿತ್ರದ ಶೂಟಿಂಗ್ ಇನ್ನು ಲೇಟ್ ಇದೆ. ಬಿಲ್ಲ ರಂಗ ಬಾಷಾ ಚಿತ್ರದ ಕೆಲಸದಲ್ಲಿ ಸುದೀಪ್ ಬ್ಯೂಸಿ ಇದ್ದಾರೆ. ಬಿಗ್ ಬಾಸ್ ಕೆಲಸವು ನಡೀತಿದೆ.

ಈ ಎಲ್ಲ ಸಿನಿಮಾಗಳು ಆದ್ಮೇಲೆ ದೇವರಾಯ ಮಾಡ್ತಾರೋ? ಅಥವಾ ಈ ಚಿತ್ರ ಮಾಡ್ತಾನೇ ಉಳಿದ ಸಿನಿಮಾದ ಕೆಲಸ ಮಾಡ್ತಾರೋ ನೋಡ್ಬೇಕು.

ಇತಿಹಾಸಕಾರರ ಭೇಟಿ

ಕಿಚ್ಚ ಸುದೀಪ್ ಇದೀಗ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅವರನ್ನ ಭೇಟಿ ಆಗಿದ್ದಾರೆ. ಈ ಒಂದು ಭೇಟಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಈ ಭೇಟಿಯ ಫೋಟೋ ಕೂಡ ವೈರಲ್ ಆಗುತ್ತಿವೆ.

devaraaya movie kiccha sudeepa historian dharmendra kumar meet photo viral

ಇತಿಹಾಸಕಾರರ ಭೇಟಿ

(ಚಿತ್ರ ಕೃಪೆ: ಧರ್ಮೇಂದ್ರ ಕುಮಾರ್ ಇನ್​ಸ್ಟಾಗ್ರಾಮ್)

ಆದರೆ, ಸುದೀಪ್ ಈ ಭೇಟಿಯ ಹಿಂದೆ ಏನೂ ಕಾರಣ ಇಲ್ಲ. ಬದಲಾಗಿ ಇದು Casual Meet ಅನ್ನುವ ಮಾತು ಕೇಳಿ ಬರ್ತಿವೆ. ಆದರೆ, ಇದು Casual Meet ಅಲ್ಲ ಅನ್ನುವ ಇನ್ನೂ ಒಂದು ಮಾತು ಕೇಳಿ ಬರ್ತಿದೆ.

ದೇವರಾಯ ಸಿನಿಮಾ

ದೇವರಾಯ ಸಿನಿಮಾದಲ್ಲಿ ಶ್ರೀ ಕೃಷ್ಣದೇವರಾಯನ ಕತೆ ಇದೆ. ವಿಜಯ ನಗರ ಸಾಮ್ರಾಜ್ಯದ ಶ್ರೇಷ್ಠ ಚಕ್ರವರ್ತಿ ಈ ದೇವರಾಯನ ಆಳ್ವಿಕೆಯ ಕಾಲವನ್ನ ಸುವರ್ಣ ಯುಗ ಅಂತಲೇ ಕರೆಯುತ್ತಾರೆ.

ದೇವರಾಯನಿಗಾಗಿ…

ದೇವರಾಯನಿಗಾಗಿಯೆ ಕಿಚ್ಚ ಸುದೀಪ್ ಫಿಜಿಕಲಿ ಫಿಟ್ ಆಗುತ್ತಿದ್ದಾರೆ. ದೇಹವನ್ನ ಹುರಿಗೊಳಿಸುತ್ತಿದ್ದಾರೆ. ಬಿಲ್ಲ ರಂಗ ಬಾಷಾ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed