Delhi Protest: ರಾಷ್ಟ್ರ ರಾಜಧಾನಿಯಲ್ಲಿ ಭುಗಿಲೆದ್ದ ಹಿಂಸಾಚಾರ! ಪೊಲೀಸರ ವಿರುದ್ಧ ಪ್ರತಿಭಟನಾಕಾರರಿಂದ ಕಲ್ಲು ತೂರಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದೆಹಲಿ ಪ್ರತಿಭಟನೆ


Last Updated:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಜಟಾಪಟಿ ಉಂಟಾಗಿದ್ದು, ಕ್ಷಣಕ್ಷಣಕ್ಕೂ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ.

ದೆಹಲಿ ಪ್ರತಿಭಟನೆ
ದೆಹಲಿ ಪ್ರತಿಭಟನೆ

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಜಟಾಪಟಿ ಉಂಟಾಗಿದ್ದು, ದೆಹಲಿಯ ಟಾಲ್ಸ್​​ ಟಾಯ್​​ ಮಾರ್ಗದಲ್ಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯ ಪಡೆ (RAF) ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಇದರಿಂದ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ‘ರಾತ್ರಿ 8:30 ರ ಸುಮಾರಿಗೆ ಕನ್ನಾಟ್ ಪ್ಲೇಸ್‌ನ ಟಾಲ್‌ಸ್ಟಾಯ್ ಮಾರ್ಗ್ ಬಳಿ ಕೆಲವರು ಕಲ್ಲು ಮತ್ತು ಬಾಟಲಿಗಳಿಂದ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಕನ್ನಾಟ್ ಪ್ಲೇಸ್ ಎಸಿಪಿ ವಿವೇಕ್ ಭಗತ್ ಗಾಯಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಅವರನ್ನು ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದರು. ಕೆಲವು ನಿಮಿಷಗಳ ಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು, ಆದ್ರೀಗ ಪರಿಸ್ಥಿತಿ ನಿಯಂತ್ರಿಸಲಾಗಿದೆ ಎಂದು ನ್ಯೂಸ್​18 ಹಿಂದಿ ವರದಿ ಮಾಡಿದೆ.

‘ಜಂತರ್‌ ಮಂತರ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತ’

ಇನ್ನು ಸಿಜೆಪಿ ಪಾರ್ಟಿ ಪ್ರತಿಭಟನೆ ನಡೆಸುತ್ತಿರುವ ಜಂತರ್‌ ಮಂತರ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ. ಅರೆ ಸೇನಾಪಡೆ ಭದ್ರತೆ ಹೆಚ್ಚಿಸಿ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಕೇಜ್ರಿವಾಲ್‌‌‌ ಕೆ.ಸಿ.ವೇಣುಗೋಪಾಲ್‌‌ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಕಾಂಗ್ರೆಸ್​​ ನಾಯಕ  ಕೆ.ಸಿ.ವೇಣುಗೋಪಾಲ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದು, ಪ್ರಧಾನಿ ಮೋದಿ ಜಂತರ್ ಮಂತರ್ ಸುತ್ತ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದ್ದು, ಇದು ಅಪಾಯದ ಭೀತಿಯನ್ನು ಸೃಷ್ಟಿಸುತ್ತಿದೆ ಅಂತ ಹೇಳಿದ್ದಾರೆ. ಯುವಕರ ಧ್ವನಿಯನ್ನು ಅಡಗಿಸಲು ಅಹಿತಕರ ನಿರ್ಧಾರ ಮಾಡಿದ್ರೆ ತೀವ್ರ ಹಾನಿಕಾರಕವಾಗಿರುತ್ತೆ ಅಂತ ಪೋಸ್ಟ್‌ ಹಾಕಿದ್ದಾರೆ. ಇನ್ನೊಂದ್ಕಡೆ ಅರವಿಂದ್‌ ಕೇಜ್ರಿವಾಲ್‌ ವಿಡಿಯೋ ಹೇಳಿಕೆಯನ್ನೂ ರಿಲೀಸ್‌ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed