Last Updated:
ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಆರೋಪಿಗಳು ಮಾಫಿ ಸಾಕ್ಷಿಗಳಾಗುತ್ತಿರೋ ಸುದ್ದಿ ಕೇಳಿ ದಾಸ ಮೌನಕ್ಕೆ ಜಾರಿದ್ದಾರೆ.
ಬೆಂಗಳೂರು (ಆ.06): ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ (Renukaswamy Case) ಮಹತ್ವದ ಬೆಳವಣಿಗೆ ನಡೆದಿದ್ದು, ಆರೋಪಿ ದರ್ಶನ್ (Darshan) ಹಾಗೂ ಪವಿತ್ರಾ ಗೌಡಗೆ (Pavithra Gowda) ಇದು ಬಿಗ್ ಶಾಕಿಂಗ್ ನ್ಯೂಸ್ ಆಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ನಡುವೆಯೇ ಮತ್ತಿಬ್ಬರು ಆರೋಪಿಗಳು ಕೂಡ ಮಾಫಿ ಸಾಕ್ಷಿಯನ್ನಾಗಿ ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೆಲ್ಲಾ ಕಂಡು ದರ್ಶನ್ ಹಾಗೂ ಪವಿತ್ರಾ ಗೌಡ ಮೌನಕ್ಕೆ ಜಾರಿದ್ದಾರೆ.
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆದಿದ್ದು, ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಆರೋಪಿಗಳು ಮಾಫಿ ಸಾಕ್ಷಿಗಳಾಗುತ್ತಿರೋ ಸುದ್ದಿ ಕೇಳಿ ನಟ ದರ್ಶನ್ ಬೇಸರಗೊಂಡಿದ್ದಾರೆ.
ವಿಡಿಯೋ ಕಾನ್ಫೆರೆನ್ಸ್ ವೇಳೆ ನಟ ದರ್ಶನ್ ಅವರು ಕೊನೆಯ ಬೇಂಜ್ನಲ್ಲಿ ಸೈಲೆಂಟ್ ಆಗಿ ಕೂತಿದ್ರು. ಮಾಫಿ ಸಾಕ್ಷಿಗಳು ಮುಂದೆ ಕುಳಿತುಕೊಂಡಿದ್ರು. ದರ್ಶನ್ ಮುಖದಲ್ಲಿ ಬೇಸರ ಎದ್ದು ಕಾಣ್ತಿತ್ತು. ಮಾಫಿ ಸಾಕ್ಷಿಗಳ ಹೇಳಿಕೆ ಬಳಿಕ ಕೇಸ್ ಕಥೆ ಏನಾಗುತ್ತೋ ಅನ್ನೋ ಟೆನ್ಷನ್ ದರ್ಶನ್ ಮುಖ ಮೂಡಿದೆ.
ಮಾಫಿ ಸಾಕ್ಷ್ಯ ಅರ್ಜಿ ವಾದವನ್ನ ಎಲ್ಲಾ ಆರೋಪಿಗಳು ಕೇಳ್ತಿದ್ದಾರೆ. ಈ ವೇಳೆ ದರ್ಶನ್ ಹಾಗೂ ಪವಿತ್ರಗೌಡ ಇಬ್ಬರೂ ಚಿಂತೆಯಲ್ಲಿ ಮುಳುಗಿದ್ದು, ತಲೆ ಮೇಲೆ ಕೈ ಇಟ್ಟುಕೊಂಡು ಕೂತಿದ್ದಾರೆ.
(ವರದಿ: ಮಂಜುನಾಥ್, ನ್ಯೂಸ್18 ಕನ್ನಡ, ಬೆಂಗಳೂರು)
Darshan-Pavithra: ದರ್ಶನ್, ಪವಿತ್ರಾ ಗೌಡಕ್ಕೆ ಇದೆಂಥಾ ಸ್ಥಿತಿ ಬಂತು! ಕೋರ್ಟ್ನಲ್ಲಿ ‘ಮಾಫಿ ಸಾಕ್ಷಿ’ಗಳ ಆಟಕ್ಕೆ ದಾಸನ ರಿಯಾಕ್ಷನ್ ಹೇಗಿತ್ತು?














