Last Updated:
ನಟನ ಆಪ್ತ ಬಳಗದಲ್ಲೂ ಈತ ಕಾಣಿಸಿಕೊಂಡಿದ್ದು, ಹೀಗಾಗಿ ಬೆದರಿಕೆ ಕೇಸ್ನಲ್ಲಿ ದರ್ಶನ್ಗೂ ಶುರುವಾಗುತ್ತಾ ಸಂಕಷ್ಟ? ದರ್ಶನ್ ಜೊತೆ ಫಾರ್ಮ್ಹೌಸ್ನಲ್ಲಿರೋ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಕೋರ್ಟ್ನಲ್ಲಿ ಟ್ರಯಲ್ ನಡೆಯುತ್ತಿರುವಾಗಲೇ ಮಹತ್ವದ ಬೆಳವಣಿಗೆಗಳು ಕೇಸ್ಗೆ ಟ್ವಿಸ್ ಮೇಲೆ ಟ್ವಿಸ್ಟ್ ಕೊಡ್ತಿದೆ. ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ ಮೂವರನ್ನ ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸಿದ್ದು, ಈ ವೇಳೆ ದರ್ಶನ್ (Darshan) ಆಪ್ತ ಬಳಗದಲ್ಲೇ ಪುನೀತ್ ಕಾಣಿಸಿಕೊಂಡಿದ್ದಾನೆ.
ರೇಣುಕಾಸ್ವಾಮಿ ಹತ್ಯೆ ಸಾಕ್ಷಿಗೆ ಬೆದರಿಕೆ ಹಾಕಿದ ಕೇಸ್ ಸಂಬಂಧ ಬಂಧಿತ ಪುನೀತ್, ವೇಣು, ಸುಹಾಸ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಮುಖ ಆರೋಪಿ ಹಾಗೂ ರೇಣುಕಾಸ್ವಾಮಿ ಕೇಸ್ನ ಸಾಕ್ಷಿಯೂ ಆಗಿರೋ ಪುನೀತ್ ಎಂಬಾತ ದರ್ಶನ್ಗೆ ಸಿಕ್ಕಾಪಟ್ಟೆ ಕ್ಲೋಸ್ ಎನ್ನಲಾಗ್ತಿದೆ. ನಟನ ಆಪ್ತ ಬಳಗದಲ್ಲೂ ಈತ ಕಾಣಿಸಿಕೊಂಡಿದ್ದು, ಹೀಗಾಗಿ ಬೆದರಿಕೆ ಕೇಸ್ನಲ್ಲಿ ದರ್ಶನ್ಗೂ ಶುರುವಾಗುತ್ತಾ ಸಂಕಷ್ಟ?
ಆರೋಪಿ ಪುನೀತ್ ಎಂಬಾತ ನಟ ದರ್ಶನ್ ಫ್ಯಾನ್ ಪೇಜ್ಗಳ ಹಲವು ಖಾತೆಗಳನ್ನ ಹ್ಯಾಂಡಲ್ ಮಾಡ್ತಿದ್ದ. ಜೊತೆಗೆ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಕೆಲವು ಆರೋಪಿಗಳಿಗೂ ಈತ ಪರಿಚಿತನಾಗಿದ್ದ. ಹೀಗಾಗಿ ಪುನೀತ್, ವೇಣು, ಸುಹಾಸ್ ಮೂವರ ಮೊಬೈಲ್ ಫೋನ್ ಸೀಜ್ ಮಾಡಿದ್ದು, ಮಹತ್ವದ ಸಾಕ್ಷಿಗಳ ನಿರೀಕ್ಷೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆ ಜೊತೆಗೆ ವಾಟ್ಸಾಪ್ ಡೇಟಾವನ್ನ ಕೂಡ ಪೊಲೀಸರು ಚೆಕ್ ಮಾಡ್ತಿದ್ದಾರೆ. ಆರೋಪಿಗಳು ಸಂದೀಪ್ಗೆ ವಾಟ್ಸಾಪ್ ಕರೆ ಮೂಲಕವೇ ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ್ದರು. ಡೇಟಾ ರಿಟ್ರೀವ್ ಬಳಿಕ ಮೊಬೈಲ್ ಫೋನ್ಗಳನ್ನ ಎಫ್ಎಸ್ಎಲ್ಗೆ ರವಾನೆ ಮಾಡಲಾಗುತ್ತೆ. ಸಿಡಿಆರ್ ರಿಪೋರ್ಟ್ ಪಡೆದು ಪ್ರತಿಯೊಂದು ಕರೆಗಳ ಪರಿಶೀಲನೆ ನಡೆಸುವ ಸಾಧ್ಯತೆ ಇದ್ದು, ಪ್ರತಿಯೊಂದು ನಂಬರ್ ಬಗ್ಗೆ ಕೂಡ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ದರ್ಶನ್ ಆಪ್ತ ಬಳಗದಲ್ಲೇ ಆರೋಪಿ ಬೆದರಿಕೆ ಆರೋಪಿ ಪುನೀತ್ ಗುರುತಿಸಿಕೊಂಡಿದ್ದ ಎನ್ನುವ ಮಾಹಿತಿ ಹೊರ ಬಂದಿದೆ. ಈ ಹಿಂದೆ ತೂಗುದೀಪ್ ಫಾರ್ಮ್ಹೌಸ್ನಲ್ಲಿ ನಟ ದರ್ಶನ್ ಜೊತೆಯೇ ಪುನೀತ್ ಕಾಣಿಸಿಕೊಂಡಿದ್ದ ವಿಡಿಯೋ ಕೂಡ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ದರ್ಶನ್ ಹಾಗೂ ಪುನೀತ್ಗೆ ಯಾವ ರೀತಿ ಸಂಬಂಧವಿತ್ತು ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.
(ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)
Jul 03, 2026 10:01 AM IST
Darshan Case: ರೇಣುಕಾಸ್ವಾಮಿ ಕೇಸ್ಗೆ ಟ್ವಿಸ್ಟ್, ನಟ ದರ್ಶನ್ಗೆ ಈತ ಸಿಕ್ಕಾಪಟ್ಟೆ ಕ್ಲೋಸ್! ತೂಗುದೀಪ ಫಾರ್ಮ್ ಹೌಸ್ನಲ್ಲಿ ಸಿಕ್ತು ಮಹತ್ವದ ‘ಸಾಕ್ಷಿ’













