Last Updated:
ಪ್ರದೋಷ್ ದುಃಸ್ವಪ್ನವಾಗ್ತಾನೆ ಅಂತ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ವಾ ದರ್ಶನ್? ಅಂದು ಹೇಳದ್ದೆಲ್ಲಾ ಇಂದು ರಿವೀಲ್? ಒಟ್ಟಿನಲ್ಲಿ ಡಿಗ್ಯಾಂಗ್ಗೆ ದೊಡ್ಡ ಸಂಕಷ್ಟವಾದ ಮಾಫಿ ಸಾಕ್ಷಿ.
ಚಿತ್ರದುರ್ಗದ ರೇಣುಕಾಸ್ವಾಮಿ (Chitradurga Renukaswamy Case) ಕೊಲೆ ಪ್ರಕರಣ ಈಗ ಡಿಗ್ಯಾಂಗ್ಗೆ ದೊಡ್ಡ ಸಂಕಷ್ಟ ತಂದಿದೆ. ಪ್ರದೋಷ್ (Pradosh) ಯಾವಾಗ ಮಾಫಿ ಸಾಕ್ಷಿಯಾಗುತ್ತೇನೆ ಅಂತ ಹೇಳಿದ್ದನೋ ಆಗಿನಿಂದಲೇ ಡಿಗ್ಯಾಂಗ್ಗೆ ಢವ ಢವ ಶುರುವಾಗಿದೆ.
ಮೂರು ದಿನಗಳಲ್ಲಿ ಬರೋಬ್ಬರಿ 83 ಪುಟಗಳ ಹೇಳಿಕೆ ದಾಖಲಿಸಲಾಗಿದೆ. 59 ನೇ ಸಿಸಿಎಚ್ ಕೋರ್ಟ್ನಲ್ಲಿ ಮಾಫಿ ಸಾಕ್ಷ್ಯ ನುಡಿದಿರೋ ಪ್ರದೋಷ್ ಇನ್ನು ಹೇಳಿಕೆ ದಾಖಲು ಬಾಕಿ ಇದ್ದು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.
ಸೋಮವಾರದಿಂದ ಪ್ರದೋಷ್ ಮತ್ತೆ ಮಾಫಿ ಹೇಳಿಕೆ ದಾಖಲಿಸಲಿದ್ದಾನೆ. ಪೊಲೀಸರ ತನಿಖೆಯಲ್ಲಿ ಬಯಲಾಗದ ಹಲವು ವಿಚಾರಗಳು ಬಯಲಾಗಿದ್ದು, ಪೊಲೀಸರು ಎಷ್ಟೇ ವಿಚಾರಣೆ ಮಾಡಿದರೂ ಕೆಲ ವಿಚಾರಗಳು ಬಯಲಾಗಿರಲಿಲ್ಲ. ಈಗ ಅಂತಹ ವಿಚಾರಗಳನ್ನು ಪ್ರದೂಷ್ ಮಾಫಿ ಹೇಳಿಕೆಯಲ್ಲಿ ದಾಖಲಿಸಲಾಗಿದೆ.
ಮುಂದೆ ಇವೇ ಹೇಳಿಕೆಗಳು ದರ್ಶನ್ ಅಂಡ್ ಗ್ಯಾಂಗ್ ಗೆ ಮುಳುವಾಗೋ ಸಾಧ್ಯತೆ ಇದ್ದು, ಮೃತದೇಹ ಸತ್ವಾ ಅಪಾರ್ಟ್ಮೆಂಟ್ ಬಳಿ ಬಿಸಾಡೋ ವರೆಗೂ ಹೇಳಿಕೆ ದಾಖಲಿಸಲಾಗಿದೆ. ಬಳಿಕ ರೇಣುಕಾಸ್ವಾಮಿ ಮೊಬೈಲ್ ನಾಶ ಪಡಿಸಿರೋವರೆಗೂ ಹೇಳಿಕೆ ಕೊಡಲಾಗಿದೆ ಎನ್ನಲಾಗಿದೆ.
ಸೋಮವಾರ ಸರೆಂಡರ್ ಪ್ಲಾನ್ ಹಾಗೂ ಸಾಕ್ಷ್ಯ ನಾಶದ ಬಗ್ಗೆ ಹೇಳಿಕೆ ನೀಡಲಿದ್ದಾನೆ ಎನ್ನಲಾಗಿದ್ದು ಇದರ ಜೊತೆಗೆ ದರ್ಶನ್ ಜೊತೆಗೆ ಸರೆಂಡರ್ ಆಗೋರ ಭೇಟಿ, ಯಾರಿಗೆಲ್ಲ ಎಷ್ಟೆಷ್ಟು ಹಣ ಕೊಡೋದಾಗಿ ಮಾತುಕತೆ ಅಂತ ಹೇಳಿಕೆ ದಾಖಲು ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ನಟ ಪ್ರದೋಷ್ ಮಾಫಿ ಸಾಕ್ಷಿ ದರ್ಶನ್ ಪಾಲಿಗೆ ದೊಡ್ಡ ಸಂಕಷ್ಟ ತಂದುಕೊಟ್ಟಿದೆ.
ಸೆಪ್ಟೆಂಬರ್ 28ರಂದು ಪ್ರದೋಷ್ ನ ಬಿಗಿ ಭದ್ರತೆಯ ನಡುವೆ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅಂದು ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಲಾಗಿತ್ತು. ಹೇಳಿಕೆ ದೀರ್ಘವಾಗಿದ್ದ ಹಿನ್ನೆಲೆಯಲ್ಲಿ ಮುಂದಿನ ದಿನವೂ ವಿಚಾರಣೆ ಮುಂದುವರಿಯಿತು.
ಪ್ರದೋಷ್ ಹೇಳಿಕೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಘಟನೆಗಳ ಕುರಿತು ಹೇಳಿಕೆ ಮುಂದುವರಿಯುವ ಸಾಧ್ಯತೆಯಿದೆ. ವಿಶೇಷವಾಗಿ ಶರಣಾಗತಿ ಪ್ರಕ್ರಿಯೆ ಹಾಗೂ ಮೈಸೂರಿಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಸೋಮವಾರದ ವಿಚಾರಣೆಯಲ್ಲಿ ಮಾಹಿತಿ ದಾಖಲಾಗುವ ನಿರೀಕ್ಷೆಯಿದೆ.
ವರದಿ: ಮಂಜುನಾಥ್ ಎನ್, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














