Last Updated:
Darshan Case: ಪ್ರದೋಷ್ ಇಂದು ಕೋರ್ಟ್ಗೆ ಬಂದರೂ ಪ್ರಯೋಜನವಾಗಿಲ್ಲ. ದರ್ಶನ್ ಹೈಕೋರ್ಟ್ ಅರ್ಜಿ ಆದೇಶ ಬರುವ ತನಕ ಹೇಳಿಕೆ ದಾಖಲಿಸೋದಿಲ್ಲ ಎಂಬ ಕಾರಣದಿಂದ ಪ್ರದೋಷ್ ವಾಪಸ್ ಬರಬೇಕಾಯಿತು. ಆ ವೇಳೆ ಪ್ರದೋಷ್ ಆ ಒಂದು ಸನ್ನೆ ಮಾಡಿದ್ರಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ (Approver) ಟ್ವಿಸ್ಟ್ ಸಿಕ್ಕಿದ ನಂತರ ಕೇಸ್ ಬಹಳಷ್ಟು ಬೆಳವಣಿಗೆ ಕಾಣುತ್ತಿದೆ. ಎಲ್ಲರ ಗಮನವೂ ಕೇಸ್ ಮೇಲಿದ್ದರೆ ಡಿಗ್ಯಾಂಗ್ಗೆ ಈಗಾಗಲೇ ಢವ ಢವ ಶುರುವಾಗಿದೆ. ಹೀಗಿರುವಾಗಲೇ ಪ್ರದೋಷ್ (Pradosh) ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದಕ್ಕೂ ಕೂಡಾ ಸಿದ್ಧತೆ ನಡೆದಿತ್ತು. ಎಲ್ಲಾ ಓಕೆ ಆಗಿದ್ದರೆ ಇಂದೇ ಪ್ರದೋಷ್ ಹೇಳಿಕೆ ದಾಖಲಾಗುತ್ತಿತ್ತು. ಆದರೆ ಸದ್ಯಕ್ಕೆ ಈ ಪ್ರಕ್ರಿಯೆ ಇಂದು ನಡೆದಿಲ್ಲ.














