Last Updated:
ಮಾಫಿ ಸಾಕ್ಷಿ ವಿಚಾರದಲ್ಲಿ ದರ್ಶನ್ಗೆ ಮತ್ತೆ ಶಾಕ್ ಉಂಟಾಗಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟೆಲೇರಿದ್ದ ದರ್ಶನ್ಗೆ ಹಿನ್ನೆಡೆ ಉಂಟಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ದರ್ಶನ್ಗೆ (Darshan) ಮಾಫಿ ಸಾಕ್ಷಿ ಕಂಟಕ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇದೀಗ ಮಾಫಿ ಸಾಕ್ಷಿ ವಿಚಾರದಲ್ಲಿ ದರ್ಶನ್ಗೆ ಮತ್ತೆ ಶಾಕ್ ಉಂಟಾಗಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ (High Court) ಮೆಟ್ಟೆಲೇರಿದ್ದ ದರ್ಶನ್ ಅರ್ಜಿ ವಜಾ ಆಗಿದ್ದು, ಹಿನ್ನೆಡೆ ಉಂಟಾಗಿದೆ.














