Darshan Case: ದರ್ಶನ್​ ವಿರುದ್ಧ ತಿರುಗಿಬಿದ್ದ ದೋಸ್ತಿಗಳು! ಪ್ರದೋಶ್​ ಜೊತೆ ಮತ್ತಿಬ್ಬರು ಆರೋಪಿಗಳು ಮಾಫಿ ಸಾಕ್ಷಿ ಆಗಲು ರೆಡಿ | | ACTPnews

Darshan Case: ದರ್ಶನ್​ ವಿರುದ್ಧ ತಿರುಗಿಬಿದ್ದ ದೋಸ್ತಿಗಳು! ಪ್ರದೋಶ್​ ಜೊತೆ ಮತ್ತಿಬ್ಬರು ಆರೋಪಿಗಳು ಮಾಫಿ ಸಾಕ್ಷಿ ಆಗಲು ರೆಡಿ |


ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ..!

ಕೋರ್ಟ್​​ನಲ್ಲಿ ಆರೋಪಿ ಪ್ರದೂಶ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಆರಂಭವಾಗ್ತಿದ್ದಂತೆ ಮತ್ತಿಬ್ಬರು ಆರೋಪಿಗಳು ಕೂಡ ನಾವು ಕೂಡ ಮಾಫಿ ಸಾಕ್ಷಿ ಆಗಲು ರೆಡಿ ಎಂದಿದ್ದಾರೆ. ಕೇಸ್​ ಎ7 ರವಿಶಂಕರ್ ಹಾಗೂ ಎ 10 ವಿನಯ್ ಮಾಫಿ ಸಾಕ್ಷಿಗೆ ಮನವಿ ಮಾಡಿದ್ದಾರೆ.

ದಯವಿಟ್ಟು ನಮ್ಮನ್ನು ಮಾಫಿ ಸಾಕ್ಷಿ ಮಾಡಿ

ದಯವಿಟ್ಟು ನಮ್ಮನ್ನು ಪ್ರದೂಶ್ ಅರ್ಜಿಯಲ್ಲಿ ಪರಿಗಣಿಸಿ ಅಂತ ಕೋರ್ಟ್​​ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದಕ್ಕೆ ಪ್ರದೂಶ್ ಪರ ವಕೀಲ ದಿವಾಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಮೊದಲು ನಾವು ಅರ್ಜಿ ಹಾಕಿದ್ದು, ನಿಮ್ಮ ಅರ್ಜಿ ಪರಿಗಣನೆ ಮಾಡಲ್ಲ. ಕ್ಲಬ್ ಮಾಡಲು ಆಗೋದಿಲ್ಲ,  ನಮ್ಮ ಅರ್ಜಿಯನ್ನು ಮೊದಲು ಪರಿಗಣಿಸಿ ಆದೇಶ ನೀಡಿ. ಉಳಿದವರು ಬೇಕಿದ್ದರೆ ಪ್ರತ್ಯೇಕ ಅರ್ಜಿ ಹಾಕಲಿ ಎಂದು ಕೋರ್ಟ್ ಗೆ ಪ್ರದೂಶ್ ಪರ ವಕೀಲ ದಿವಾಕರ್ ಮನವಿ ಮಾಡಿದ್ರು.

ಮತ್ತಿಬ್ಬರು ಮಾಫಿ ಸಾಕ್ಷಿ ಯಾರು?

ವಿಟ್ನೆಸ್ ಪ್ರೊಟೆಕ್ಷನ್ ಕೂಡ ಕೊಡಿ ಅಂತಾನೂ  ಸಿಸಿಎಚ್ 59 ಜಡ್ಜ್ ಗೆ ಪ್ರದೂಶ್ ಪರ ವಕೀಲರ ಮನವಿ ಮಾಡಿದ್ದಾರೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಿದಾಗ ಇಟಿಯೋಸ್ ಕಾರು ಚಾಲಕನಾಗಿದ್ದ ರವಿಶಂಕರ್, ಹಾಗೂ ಸ್ಟೋನಿ ಬ್ರೂಕ್ಸ್ ಪಬ್ ಮಾಲೀಕ ವಿನಯ್ ಕೂಡ ಮಾಫಿ ಸಾಕ್ಷಿಗೆ ಮನವಿ ಮಾಡಿದ್ದಾರೆ.

ವಿನಯ್ (A10) ಪಾತ್ರ ಏನು?

1. ಹತ್ಯೆ ಮತ್ತು ಸಾಕ್ಷ್ಯನಾಶದಲ್ಲಿ ಪಾತ್ರ

2. ಕೊಲೆ ನಡೆದ ಪಟ್ಟಣಗೆರೆ ಶೆಡ್ ವಿನಯ್ ಸಂಬಂಧಿಕರದ್ದು

3. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ಆರೋಪ

4. A9 ಧನರಾಜ್‌ನನ್ನ ದರ್ಶನ್‌ಗೆ ಪರಿಚಯಿಸಿದ್ದ ವಿನಯ್

5. ಕೊಲೆ ಬಳಿಕ ಪ್ರಕರಣ ಮುಚ್ಚಿಹಾಕಲು ಪ್ರಯತ್ನ

6. ಸಾಕ್ಷ್ಯನಾಶಕ್ಕೆ ಸ್ಥಳೀಯ ಪೊಲೀಸರೊಬ್ಬರ ನೆರವಿನ ಆರೋಪ

ರವಿಶಂಕರ್ (A8) ಪಾತ್ರ

ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿದ ಆರೋಪ

ಚಿತ್ರದುರ್ಗದಿಂದ ಅಪಹರಿಸಿ ತಂದಿದ್ದ ರವಿಶಂಕರ್

ಕಿಡ್ನ್ಯಾಪ್‌ಗೆ ಬಳಸಿದ್ದ ಕಾರು ಚಾಲಕ ರವಿಶಂಕರ್

ಶೆಡ್‌ಗೆ ರೇಣುಕಾಸ್ವಾಮಿಯನ್ನ ತಲುಪಿಸಿದ್ದ

ಹತ್ಯೆ ನಂತ್ರ ಫೋಟೋ ತೆಗೆಸಿಕೊಂಡಿದ್ದ ರವಿಶಂಕರ್

ದರ್ಶನ್ ಮತ್ತು ಇತರೆ ಆರೋಪಿಗಳ ಜೊತೆ ಫೋಟೋ

ಸ್ವಾಮಿ ಕೇಸ್ ಬಳಿಕ ಫೋಟೋ ಡಿಲೀಟ್ ಮಾಡಿದ್ದ

ಮೊಬೈಲ್ ರಿಟ್ರೀವ್‌ ವೇಳೆ ಈ ಫೋಟ್ ಪತ್ತೆ ಆಗಿತ್ತು

ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯವಾಗಿದ್ದ ಈ ಫೋಟೋ

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed