Last Updated:
ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು ಮನವಿ ಮಾಡಿದ್ದಾರೆ. ಹಾಗಾದ್ರೆ ದರ್ಶನ್ ಪತ್ರದ ಅಸಲಿ ಗುಟ್ಟೇನು?
ಜೈಲಿನಲ್ಲಿ ಕುಟುಂಬದವರ ಭೇಟಿಗೆ ಪರಿತಪಿಸುತ್ತಿರುವ ನಟ ದರ್ಶನ್ (Darshan) ಇದೀಗ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ (Supreme Court) ಜಾಮೀನು ಅರ್ಜಿ (Bail Plea) ಇತ್ಯರ್ಥವಾಗ್ತಿದ್ದಂತೆ, ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು ಮನವಿ ಮಾಡಿದ್ದಾರೆ. ಹಾಗಾದ್ರೆ ದರ್ಶನ್ ಪತ್ರದ ಅಸಲಿ ಗುಟ್ಟೇನು?
ಒಳ ಸಂದರ್ಶನಕ್ಕೆ ಅನುಮತಿ ಕೋರಿ ದರ್ಶನ್ ಪತ್ರ ಬರೆದಿದ್ದಾರೆ.
ಪತ್ನಿ, ಮಗನ ಭೇಟಿಗೆ ಜೈಲು ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ. ಇತ್ತೀಚಿಗೆ ಸುಪ್ರೀಂಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಂಡು ತೀವ್ರ ನಿರಾಸೆಯಲ್ಲಿದ್ದ ನಟ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ಪತ್ರವೊಂದನ್ನ ಬರೆದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗನ ಒಳ ಸಂದರ್ಶನಕ್ಕೆ ಅನುಮತಿ ನೀಡುವಂತೆ ಜೈಲು ಅಧೀಕ್ಷಕ ಎಸ್ ಪಿ ಅಂಶುಕುಮಾರ್ ಗೆ ಮನವಿ ಮಾಡಿದ್ದಾರೆ. ಇದೇ ತಿಂಗಳ 15 ರಂದು ದರ್ಶನ್ ಜಾಮೀನು ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ಇತ್ಯರ್ಥವಾಗಿತ್ತು.
ಈ ವೇಳೆ ಒಂದು ವರ್ಷದ ತನಕ ಜಾಮೀನು ಅರ್ಜಿ ಸಲ್ಲಿಸದಂತೆ ಕೋರ್ಟ್ ಸೂಚನೆ ಕೂಡ ನೀಡಿತ್ತು. ಈ ಬೆನ್ನಲ್ಲೆ ಹೆಂಡತಿ ಮತ್ತು ಮಗನನ್ನ ಕೊಠಡಿಯ ಒಳಗೆ ಭೇಟಿ ಮಾಡಲು ಅವಕಾಶ ನೀಡುವಂತೆ ಪತ್ರ ಬರೆದು ಮನವಿ ಮಾಡದ್ದಾರೆ. ಇನ್ನೂ ದರ್ಶನ್ ಪತ್ರ ವ್ಯವಹಾರದ ಹಿಂದೆ ಗುಟ್ಟೊಂದು ಅಡಗಿದೆ. ನಾಳೆ ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ವಿವಾಹ ವಾರ್ಷಿಕೋತ್ಸವ ಇದ್ದು, ಈ ವೇಳೆ ಪತ್ನಿ ಮತ್ತು ಮಗನ ಭೇಟಿ ಮಾಡುವ ಸಲುವಾಗಿ ಪತ್ರದ ಮುಖೇನಾ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ಈ ಹಿಂದೆಯೂ ಕುಟುಂಬದವರ ಒಳ ಸಂದರ್ಶನಕ್ಕೆ ಅನುಮತಿ ನೀಡುವಂತೆ ಕೋರ್ಟ್ ನಲ್ಲಿ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದರು. ಅದ್ರೆ ಕೋರ್ಟ್ ನಲ್ಲಿ ಪದೇ ಪದೇ ಹಿನ್ನಡೆ ಆದ ಹಿನ್ನೆಲೆಯಲ್ಲಿ ಇದೀಗ ಖುದ್ದು ಜೈಲು ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೊಠಡಿ ಒಳಗೆ ಪ್ರತ್ಯೇಕ ಭೇಟಿಗೆ ಮನವಿ ಮಾಡಿದ್ದಾರೆ. ಒಂದು ಕಡೆ ದರ್ಶನ್ ಜೈಲು ಅಧೀಕ್ಷಕರಿಗೆ ಪತ್ರ ಬರೆದು ಮನವಿ ಮಾಡಿದ್ದರೆ, ಇನ್ನೊಂದು ಕಡೆ ವಿಜಯಲಕ್ಷ್ಮೀ ಗಂಡನ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಮೇ 16 ರಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರನ್ನ ವಿಜಯಲಕ್ಷ್ಮಿ ಭೇಟಿಯಾಗಿದ್ದು, ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
-ಮುನಿರಾಜು, ಕ್ರೈಮ್ ಬ್ಯೂರೋ ನ್ಯೂಸ್ 18 ಬೆಂಗಳೂರು
Bangalore,Karnataka













