Last Updated:
ರಾಜ್ಯದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಳ. ಆಲಮಟ್ಟಿ, ಹಾರಂಗಿ ಅಣೆಕಟ್ಟುಗಳು ಭರ್ತಿಯಾಗುವ ಹಂತದಲ್ಲಿವೆ. ಕೆ.ಆರ್.ಎಸ್, ಕಬಿನಿ, ತುಂಗಭದ್ರಾ, ಭದ್ರಾ, ಹಿಡ್ಕಲ್, ವಾಣಿವಿಲಾಸ ಸಾಗರದಲ್ಲೂ ನೀರಿನ ಮಟ್ಟ ಏರಿಕೆ.
ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚುತ್ತಿದ್ದು, ರೈತರಲ್ಲಿ (Farmer) ಮಂದಹಾಸ ಮೂಡಿಸಿದೆ. ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪ್ರಮುಖ ಜಲಾಶಯಗಳಾದ (Reservoirs) ಆಲಮಟ್ಟಿ ಹಾಗೂ ಹಾರಂಗಿ (Harangi) ಅಣೆಕಟ್ಟುಗಳು ಭರ್ತಿಯಾಗುವ ಹಂತ ತಲುಪಿದ್ದು, ಶೇಕಡಾವಾರು ನೀರಿನ ಪ್ರಮಾಣ (Water Level) ಗಣನೀಯವಾಗಿ ಏರಿಕೆಯಾಗಿದೆ.
ಹಾರಂಗಿ ಅಣೆಕಟ್ಟು: 89.17% ರಷ್ಟು ಭರ್ತಿಯಾಗಿದ್ದು, ಜಲಾಶಯದ ಗರಿಷ್ಠ ಮಟ್ಟ 2859.00 ಅಡಿಗಳಿದ್ದರೆ ಪ್ರಸ್ತುತ ಮಟ್ಟ 2856.28 ಅಡಿಯಲ್ಲಿದೆ. ಒಟ್ಟು 8.500 ಟಿಎಂಸಿ ಸಾಮಥ್ರ್ಯದಲ್ಲಿ 7.580 ಟಿಎಂಸಿ ನೀರು ಸಂಗ್ರಹಗೊಂಡಿದೆ.
ಆಲಮಟ್ಟಿ ಅಣೆಕಟ್ಟು: ಒಟ್ಟು 123.081 ಟಿಎಂಸಿ ಸಾಮರ್ಥ್ಯವಿರುವ ಆಲಮಟ್ಟಿಯಲ್ಲಿ ಶೇಕಡಾ 84.30 ರಷ್ಟು ಅಂದರೆ 103.766 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು ಭರ್ತಿಯಾಗಿ ಮುಂದುವರೆದಿದೆ.
ಕೆ.ಆರ್.ಎಸ್ ಮತ್ತು ಕಬಿನಿ: ಕಾವೇರಿ ಕೊಳ್ಳದ ಕೆ.ಆರ್.ಸಾಗರ ಅಣೆಕಟ್ಟಿನಲ್ಲಿ ಪ್ರಸ್ತುತ 34.64% (17.132 ಟಿಎಂಸಿ) ಹಾಗೂ ಕಬಿನಿ ಅಣೆಕಟ್ಟಿನಲ್ಲಿ 68.03% ರಷ್ಟು ನೀರು ಸಂಗ್ರಹವಾಗಿದೆ.
ಇತರ ಜಲಾಶಯಗಳು: ತುಂಗಭದ್ರಾ ಅಣೆಕಟ್ಟಿನಲ್ಲಿ 26.46% (28.000 ಟಿಎಂಸಿ), ಭದ್ರಾ ಅಣೆಕಟ್ಟಿನಲ್ಲಿ 48.87%, ಹಿಡ್ಕಲ್ ಅಣೆಕಟ್ಟಿನಲ್ಲಿ 50.86% ಹಾಗೂ ವಾಣಿವಿಲಾಸ ಸಾಗರ ಅಣೆಕಟ್ಟಿನಲ್ಲಿ 78.13% ರಷ್ಟು ನೀರು ಲಭ್ಯವಿದೆ.
ಕಳೆದ ಕೆಲಕಾಲ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ಅನ್ನದಾತರಿಗೆ ಈಗಿನ ಜಲಾಶಯಗಳ ನೀರಿನ ಒಳಹರಿವು ಸಮಾಧಾನ ತಂದಿದೆ. ಮುಂಬರುವ ದಿನಗಳಲ್ಲಿ ಮಳೆಯ ಅಬ್ಬರ ಮುಂದುವರಿದರೆ ಬಹುತೇಕ ಜಲಾಶಯಗಳು ಭರ್ತಿಯಾಗುವ ಸಾಧ್ಯತೆಯಿದೆ.
ಮುಂದಿನ ದಿನಗಳಲ್ಲಿ ಬಹುತೇಕ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗುವ ನಿರೀಕ್ಷೆಯಿದೆ. ರೈತರು ಹಾಗೂ ಸಾರ್ವಜನಿಕರು ನದಿ ತೀರದ ಪ್ರದೇಶಗಳಲ್ಲಿ ಎಚ್ಚರವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Bangalore [Bangalore],Bangalore,Karnataka
Jul 24, 2026 11:25 AM IST














