Last Updated:
ರಾಜ್ಯದ ಜಲಾಶಯಗಳಲ್ಲಿ ಮಳೆಯಿಂದ ನೀರಿನ ಒಳಹರಿವು ಹೆಚ್ಚಿದೆ. ಹಾರಂಗಿ, ಆಲಮಟ್ಟಿ, ಹಿಡ್ಕಲ್ ಡ್ಯಾಮ್ ಭರ್ತಿಯಾಗುವ ಹಂತದಲ್ಲಿವೆ. ಕೆಆರ್‌ಎಸ್, ತುಂಗಭದ್ರಾ, ಭದ್ರಾ, ಹೇಮಾವತಿ, ಮಲಪ್ರಭಾ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ (Reservoir) ನೀರಿನ (Water) ಒಳಹರಿವು ಭರ್ಜರಿಯಾಗಿ ಮುಂದುವರಿದಿದೆ. ಕೆಲವು ಅಣೆಕಟ್ಟುಗಳು (Dams) ಭರ್ತಿಯಾಗುವ ಹಂತ ತಲುಪಿದ್ದರೆ, ಇನ್ನುಳಿದ ಕಡೆಗಳಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇತ್ತೀಚಿನ ಜಲಾಶಯಗಳ ನೀರಿನ ಮಟ್ಟದ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ.














