Dam Water Level: ಕರ್ನಾಟಕದ ಜಲಾಶಯಗಳ ಇಂದಿನ ಲೇಟೆಸ್ಟ್ ರಿಪೋರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಪ್ರಮುಖ ಜಲಾಶಯಗಳ ಇಂದಿನ ಪರಿಸ್ಥಿತಿ


Last Updated:

ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ 76.89%, ವಾಣಿವಿಲಾಸ ಸಾಗರ 78.80% ಭರ್ತಿ. ಕೆ.ಆರ್.ಸಾಗರ 35%, ತುಂಗಭದ್ರಾ 24.35% ಇದೆ. ರೈತರಿಗೆ ಕೃಷಿ ಚಟುವಟಿಕೆ ಯೋಜಿಸಲು ಸಲಹೆ.

ಪ್ರಮುಖ ಜಲಾಶಯಗಳ ಇಂದಿನ ಪರಿಸ್ಥಿತಿ
ಪ್ರಮುಖ ಜಲಾಶಯಗಳ ಇಂದಿನ ಪರಿಸ್ಥಿತಿ

ಬೆಂಗಳೂರು : ಕರ್ನಾಟಕದ ರೈತರಿಗೆ (Farmer) ಮತ್ತು ಸಾರ್ವಜನಿಕರಿಗೆ ಸಿಹಿ ಸುದ್ದಿ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ (Reservoirs) ನೀರಿನ (Water) ಸಂಗ್ರಹ ಮಟ್ಟ ಕ್ರಮೇಣ ಏರಿಕೆಯಾಗುತ್ತಿದ್ದು, ಹಲವು ಅಣೆಕಟ್ಟುಗಳು ಭರ್ತಿಯಾಗುವ ಹಾದಿಯಲ್ಲಿವೆ. ಜುಲೈ 20, 2026ರ ಇಂದಿನ ನೀರಿನ ಮಟ್ಟದ (Level) ವರದಿ ಅಚ್ಚರಿಯ ಅಂಕಿಅಂಶಗಳನ್ನು ನೀಡಿದೆ.

ಪ್ರಮುಖ ಜಲಾಶಯಗಳ ಇಂದಿನ ಪರಿಸ್ಥಿತಿ

ಆಲಮಟ್ಟಿ ಅಣೆಕಟ್ಟು: ಪ್ರಸ್ತುತ 76.89% ಭರ್ತಿಯಾಗಿದ್ದು, 94.64 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಭರ್ಜರಿಯಾಗಿ (40,173 ಕ್ಯೂಸೆಕ್) ಇರುವುದರಿಂದ ಶೀಘ್ರವೇ ಅಣೆಕಟ್ಟು ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ.

ವಾಣಿವಿಲಾಸ ಸಾಗರ: ರಾಜ್ಯದ ಇತರ ಜಲಾಶಯಗಳಿಗೆ ಹೋಲಿಸಿದರೆ ಇದು 78.80% ಭರ್ತಿಯಾಗುವ ಮೂಲಕ ಮುಂಚೂಣಿಯಲ್ಲಿದೆ.

ಹಾರಂಗಿ: ಸುಮಾರು 73.94% ಭರ್ತಿಯಾಗಿದ್ದು, ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದು ಆಶಾದಾಯಕವಾಗಿದೆ.

ಕೆ.ಆರ್.ಸಾಗರ ಅಣೆಕಟ್ಟು 35% ಭರ್ತಿಯಾಗಿದ್ದು, ಮಳೆಗಾಅಗಿ ರೈತರು ಕಾಯುತ್ತಿದ್ದಾರೆ

ಕಬಿನಿ: 64.38% ಭರ್ತಿಯಾಗಿದ್ದು, ಮಳೆ ಮುಂದುವರಿದರೆ ಹೊರಹರಿವು ಹೆಚ್ಚಾಗುವ ಸಾಧ್ಯತೆಯಿದೆ.

ಎಚ್ಚರಿಕೆ ಮತ್ತು ಗಮನಿಸಬೇಕಾದ ಅಂಶಗಳು

ತುಂಗಭದ್ರಾ ಅಣೆಕಟ್ಟಿನ ಮಟ್ಟ ಇನ್ನೂ 24.35% ಮಾತ್ರ ಇದೆ. ಮಳೆಗಾಲದ ಮಧ್ಯದಲ್ಲಿ ಇದ್ದರೂ, ಮಲಪ್ರಭ (34.29%) ಮತ್ತು ಕೆ.ಆರ್.ಸಾಗರ (35.50%) ಅಣೆಕಟ್ಟುಗಳು ಇನ್ನೂ ಹೆಚ್ಚಿನ ಮಳೆಯನ್ನು ನಿರೀಕ್ಷಿಸುತ್ತಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯಗಳ ಈ ಸ್ಥಿತಿಗತಿಯು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ದೊಡ್ಡ ಮಟ್ಟದ ನೆರವು ನೀಡಲಿದೆ.

ರೈತರಿಗೆ ಸೂಚನೆ

ಪ್ರಸ್ತುತ ಜಲಾಶಯಗಳಲ್ಲಿನ ನೀರಿನ ಮಟ್ಟದ ಆಧಾರದ ಮೇಲೆ, ರೈತರು ಕೃಷಿ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಲಸಂಪನ್ಮೂಲ ಇಲಾಖೆಯು ಪ್ರತಿ ದಿನವೂ ನೀರಿನ ಒಳಹರಿವನ್ನು ಗಮನಿಸುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed