Last Updated:
KSNDMC ಆಗಸ್ಟ್ 15ರ ವರದಿ ಪ್ರಕಾರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಟ್ಟು 74% ನೀರಿದೆ. ಕೃಷ್ಣಾ ಕೊಳ್ಳದ ಡ್ಯಾಂಗಳು ಬಹುತೇಕ ಭರ್ತಿಯಾಗಿದ್ದರೆ, KRS ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ.
ಬೆಂಗಳೂರು: ನೀವು ರೈತರಾಗಿದ್ದರೆ (Farmer) ಅಥವಾ ಕುಡಿಯುವ ನೀರಿನ ಬಗ್ಗೆ ಕಾಳಜಿ (Care) ಇರುವವರಾಗಿದ್ದರೆ ಈ ವರದಿ ನಿಮ್ಮ ಗಮನದಲ್ಲಿರಲೇಬೇಕು. ಒಂದೆಡೆ ರಾಜ್ಯದ ಕೆಲವು ಪ್ರಮುಖ ಜಲಾಶಯಗಳು ಭರ್ತಿಯಾಗಿ ಕೋಡಿ ಬೀಳುವ ಹಂತದಲ್ಲಿದ್ದರೆ, ದಕ್ಷಿಣ ಕರ್ನಾಟಕದ ಜೀವನಾಡಿ ಕೆಆರ್‌ಎಸ್ ಹಾಗೂ ಜಲವಿದ್ಯುತ್‌ಗೆ ಆಸರೆಯಾಗಿರುವ ಲಿಂಗನಮಕ್ಕಿ ಜಲಾಶಯಗಳು ಈ ಬಾರಿ ತೀವ್ರ ಆತಂಕ ಮೂಡಿಸಿವೆ.














