Last Updated:
ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ 668.08 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು ಸಾಮರ್ಥ್ಯದ ಶೇ.75ರಷ್ಟು ನೀರಿದ್ದು, ಕಳೆದ ವರ್ಷದ ಇದೇ ದಿನಕ್ಕಿಂತ 173.42 ಟಿಎಂಸಿ ಕಡಿಮೆಯಾಗಿದೆ.
ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ (Dams) ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಈ ಬಾರಿ ಗಣನೀಯವಾಗಿ ಕಡಿಮೆಯಾಗಿದೆ. ಅಂಕಿಅಂಶಗಳ ಪ್ರಕಾರ ಕರ್ನಾಟಕದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 668.08 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಜಲಾಶಯಗಳ ಒಟ್ಟು ಸಾಮರ್ಥ್ಯ (Capacity) 895.65 ಟಿಎಂಸಿ ಆಗಿದ್ದು, ಶೇ.75ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ದಿನ ಜಲಾಶಯಗಳಲ್ಲಿ 841.50 ಟಿಎಂಸಿ ನೀರು ಇತ್ತು. ಈ ಬಾರಿ 173.42 ಟಿಎಂಸಿ ಕಡಿಮೆ ನೀರು ಇದೆ. ಜಲಾಶಯಗಳಿಗೆ ಒಟ್ಟು 20,714 ಕ್ಯೂಸೆಕ್ ಒಳಹರಿವು ಇದ್ದರೆ, 56,679 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.














