Dam Water Level: ರಾಜ್ಯದ ಅತಿ ದೊಡ್ಡ ಜಲಾಶಯಗಳಲ್ಲಿ ಭರ್ಜರಿ ನೀರು, ಹಿಡ್ಕಲ್ ಡ್ಯಾಮ್ ಶೇ. 100 ಭರ್ತಿ, ಆಲಮಟ್ಟಿಯಲ್ಲೂ ಕಳಕಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಕರ್ನಾಟಕ ಜಲಾಶಯದ ನೀರಿನ ಮಟ್ಟ


Last Updated:

ಹಿಡ್ಕಲ್ ಅಣೆಕಟ್ಟು ಭರ್ತಿ, ಆಲಮಟ್ಟಿ 93.87% ಸಂಗ್ರಹ. KRS 56.21%, ಹಾರಂಗಿ 67.68%, ಕಬಿನಿ 56.41% ಭರ್ತಿ. ತುಂಗಭದ್ರಾ 75.08%, ಭದ್ರಾ 85.47% ತುಂಬಿದೆ.

ಕರ್ನಾಟಕ ಜಲಾಶಯದ ನೀರಿನ ಮಟ್ಟ
ಕರ್ನಾಟಕ ಜಲಾಶಯದ ನೀರಿನ ಮಟ್ಟ

ಬೆಂಗಳೂರು: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ (Reservoir) ನೀರಿನ ಮಟ್ಟಕ್ಕೆ (Water Level) ಸಂಬಂಧಿಸಿದಂತೆ ಅತ್ಯಂತ ಕುತೂಹಲಕಾರಿ ಅಪ್ಡೇಟ್ಸ್ ಇಲ್ಲಿದೆ. ಯಾವ ಡ್ಯಾಮ್ ಭರ್ತಿಯಾಗಿ ಕಂಗೊಳಿಸುತ್ತಿದೆ ಮತ್ತು ಎಲ್ಲಿ ಎಚ್ಚರಿಕೆಯ ಗಂಟೆ ಬಾರಿಸಲಾಗಿದೆ. ಉತ್ತರದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಿಡ್ಕಲ್ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿ (ಶೇ. 100.18) ಇತಿಹಾಸ ಸೃಷ್ಟಿಸಿದೆ. ಇಲ್ಲಿ ಒಳಹರಿವು ಮುಂದುವರಿದಿದ್ದು, ಆಲಮಟ್ಟಿ (Alamatti) ಅಣೆಕಟ್ಟಿನಲ್ಲಿ ಕೂಡ ಶೇ. 93.87ರಷ್ಟು ನೀರು ಸಂಗ್ರಹವಾಗಿದೆ. ಒಟ್ಟು 123 ಖಿಒಅ ಸಾಮಥ್ರ್ಯವಿರುವ ಆಲಮಟ್ಟಿಯಲ್ಲಿ ಪ್ರಸ್ತುತ 115 TMC ಗೂ ಅಧಿಕ ನೀರಿದ್ದು, ಬರೋಬ್ಬರಿ 10,798 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ರೈತರ (Farmer) ಮುಖದಲ್ಲಿ ಇದರಿಂದ ಮಂದಹಾಸ ಮೂಡಿದೆ.

ಕಾವೇರಿ ಕೊಳ್ಳದ ಜಲಾಶಯಗಳ ನೈಜ ಸ್ಥಿತಿ

ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಕೊಳ್ಳದ ಜಲಾಶಯಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕೆ.ಆರ್.ಎಸ್ ಅಣೆಕಟ್ಟಿನಲ್ಲಿ ಪ್ರಸ್ತುತ ಶೇ. 56.21ರಷ್ಟು (27.79 TMC) ನೀರು ಸಂಗ್ರಹವಿದ್ದು, 4,233 ಕ್ಯೂಸೆಕ್ ಒಳಹರಿವು ಬರುತ್ತಿದೆ. ಹಾಗೆಯೇ ಹಾರಂಗಿ ಶೇ. 67.68 ಮತ್ತು ಕಬಿನಿ ಅಣೆಕಟ್ಟು ಶೇ. 56.41ರಷ್ಟು ಭರ್ತಿಯಾಗಿವೆ. ಮಳೆಯ ಅಬ್ಬರ ಕೊಂಚ ತಗ್ಗಿದರೂ ಕಾವೇರಿ ತಾಯಿಯ ಒಡಲು ಇನ್ನೂ ಸಂಪೂರ್ಣ ತುಂಬಲು ತುಸು ಕಾಲಾವಕಾಶ ಬೇಕಿದೆ.
ಲಕ್ಷಾಂತರ ಕ್ಯೂಸೆಕ್ ನೀರು ಹೊರಕ್ಕೆ

ತುಂಗಭದ್ರಾ ಅಣೆಕಟ್ಟು ಶೇ. 75.08ರಷ್ಟು ಭರ್ತಿಯಾಗಿದ್ದು, ಡ್ಯಾಮ್‍ನಿಂದ ಬರೋಬ್ಬರಿ 12,747 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮತ್ತೊಂದೆಡೆ ಭದ್ರಾ ಅಣೆಕಟ್ಟು ಶೇ. 85.47ರಷ್ಟು ತುಂಬಿದ್ದು (61.14 TMC), ಒಳಹರಿವು 207 ಕ್ಯೂಸೆಕ್ ಇದ್ದರೆ, ಹೊರಹರಿವು 4,409 ಕ್ಯೂಸೆಕ್ ಇದೆ. ಈ ಭಾಗದ ಜಲಾಶಯಗಳ ಮೇಲ್ವಿಚಾರಕರು ಪ್ರವಾಹದ ಮುನ್ನೆಚ್ಚರಿಕೆ ವಹಿಸಿದ್ದಾರೆ.
ನಿಮ್ಮೂರಿನ ಹತ್ತಿರದ ಡ್ಯಾಮ್ ಪರಿಸ್ಥಿತಿ ಹೇಗಿದೆ ಗೊತ್ತಾ? 

ನಾರಾಯಣಪುರ ಅಣೆಕಟ್ಟು ಶೇ. 81.68ರಷ್ಟು ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಮಲಪ್ರಭಾ ಅಣೆಕಟ್ಟು ಶೇ. 57.22 ಹಾಗೂ ವಾಣಿವಿಲಾಸ ಸಾಗರ ಅಣೆಕಟ್ಟು ಶೇ. 69.16ರಷ್ಟು ತುಂಬಿಕೊಂಡಿವೆ. ಒಟ್ಟಾರೆಯಾಗಿ ರಾಜ್ಯದ ಹಲವು ಪ್ರಮುಖ ಅಣೆಕಟ್ಟುಗಳು ಅಪಾಯದ ಮಟ್ಟ ಮೀರುವ ಭೀತಿಯಿಲ್ಲದೆ, ಸುರಕ್ಷಿತವಾಗಿ ಭರ್ತಿಯಾಗುತ್ತಿರುವುದು ಜನತೆಗೆ ಸಮಾಧಾನ ತಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed