Last Updated:
ಮದರ್ ಪ್ರಾಮಿಸ್ ಚಿತ್ರದಲ್ಲಿ ಡಾಲಿ ಧನಂಜಯ್ ಹೆಸರು ಏನು ಅನ್ನೋದು ರಿವೀಲ್ ಆಗಿದೆ. ಆದರೆ, ಈ ಚಿತ್ರದಲ್ಲಿ ಒಂದಲ್ಲ, ಎರಡು ಹೆಸರಿವೆ. ಒಂದು ಇಂಗ್ಲಿಷ್ ಹೆಸರಾಗಿದೆ. ಮತ್ತೊಂದು ಅಚ್ಚ ಕನ್ನಡವೇ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮದರ್ ಪ್ರಾಮಿಸ್ ಚಿತ್ರದ (Mother Promise Movie) ಅಮ್ಮನ ಹಾಡು ಮೊನ್ನೆ ರಿಲೀಸ್ ಆಗಿತ್ತು. ಸ್ವತಃ ಡಾಲಿ ಧನಂಜಯ್ (Daali Dhananjaya) ಇದನ್ನ ಬರೆದ್ದಾರೆ. ಸಂಚಿತ್ ಹೆಗ್ಡೆ (Sanjith Hegde) ಹಾಡಿದ್ದಾರೆ. ವಿಶ್ವ ಅಮ್ಮಂದಿರ ದಿನದ ಹಿನ್ನೆಲೆಯಲ್ಲಿ ಈ ಗೀತೆ ರಿಲೀಸ್ ಆಗಿದೆ. ಇದೇ ಒಂದು ಹಾಡಿನಲ್ಲಿ ಡಾಲಿ ಧನಂಜಯ್ (Daali Dhananjaya) ಪಾತ್ರದ ಪರಿಚಯವೂ ಆಗಿತ್ತು. ಡಾಲಿ ಇಲ್ಲಿ ಒಬ್ಬ ರೇಸರ್ ಅನ್ನೋದು ಗೊತ್ತಾಗಿತ್ತು. ಆದರೆ, ಸ್ನೇಹಿತರ ಜೊತೆಗೆ ಹೋಗುವಾಗ ರಸ್ತೆ ಪಕ್ಕ ನಿಂತ ಪುಟ್ಟ ಹುಡುಗಿ ಒಂದು ಹೆಸರು ಕೂಗುತ್ತಾಳೆ. ಹೇ….ವಿಲನ್ ಅನ್ನೋದೇ ಆ ಹೆಸರಾಗಿದೆ. ಆದರೆ, ಈ ಪಾತ್ರದ ಅಸಲಿ ಹೆಸರೇನು ಅನ್ನೋದು ಇದೀಗ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
ಡಾಲಿ ಫ್ರೆಂಡ್ ಸಿನಿಮಾ ಡೈರೆಕ್ಟರ್
ಆದರೆ, ಈ ಹೆಸರಿನಿಂದ ಡಾಲಿಯನ್ನ ಇಲ್ಲಿ ಯಾರೂ ಕರೆಯೋದೇ ಇಲ್ಲ. ರಸ್ತೆ ಪಕ್ಕ ನಿಂತ ಹುಡುಗಿ ಹೇ ವಿಲನ್ ಅಂತಾಳೆ. ಅದರಿಂದ ರಾಮಚಂದ್ರ ಸಿ ಬೇಸರ ಪಡೋದಿಲ್ಲ. ಆ ಪುಟ್ಟ ಹುಡುಗಿಯ ಬಳಿಗೆ ಹೋಗಿ, ಪ್ರೀತಿಯಿಂದ ಮಾತನಾಡಿಸ್ತಾರೆ. ಚಾಕೋಲೆಟ್ ಕೂಡ ಕೊಡ್ತಾರೆ.
ಡಾಲಿ ಧನಂಜಯ್ ಅವರನ್ನ ಇಲ್ಲಿ ಸ್ನೇಹಿತರು ರಾಮಚಂದ್ರ.ಸಿ ಅಂತ ಹೇಳೋದಿಲ್ಲ. ಬದಲಾಗಿ ರೊಸ್ಸಿ (ROSSI) ಅಂತಲೇ ಕೂಗ್ತಾರೆ. ಪ್ರೀತಿಯಿಂದಲೇ ಈ ಹೆಸರನ್ನ ಹೇಳ್ತಾನೇ ಇರ್ತಾರೆ.
ಈ ರೊಸ್ಸಿ ಒಬ್ಬ ರೇಸರ್ ಅನ್ನೋದು ಗೊತ್ತಾಗಿದೆ. ಲುಕ್ ನೋಡಿದ್ರೇನೆ ಅದು ತಿಳಿಯುತ್ತದೆ. ಆದರೆ, ಪ್ರೊಫೆಷನಲ್ ರೇಸರಾ ಅನ್ನುವ ಪ್ರಶ್ನೆಗೆ ಸಿನಿಮಾದಲ್ಲಿಯೇ ಉತ್ತರ ಸಿಗುತ್ತದೆ ಅನಿಸುತ್ತದೆ.
ಮದರ್ ಪ್ರಾಮಿಸ್ ಚಿತ್ರ ರೆಡಿ ಆಗಿದೆ. ಚಿತ್ರದ ಒಂದು ಹಾಡು ರಿಲೀಸ್ ಆಗಿದೆ. ಪೋಸ್ಟರ್ಗಳು ಹೊರ ಬಂದಿವೆ. ಡಾಲಿ ಧನಂಜಯ್ ಪಾತ್ರದ ಹೆಸರು ಏನು ಅನ್ನೋದು ಗೊತ್ತಾಗಿದೆ.
ರಾಮಚಂದ್ರ.ಸಿ….
ಇದರ ಬೆನ್ನಲ್ಲಿಯೇ ಚಿತ್ರ ಆದಷ್ಟು ಬೇಗ ಬರುತ್ತದೆ ಅನ್ನೋದು ರಿವೀಲ್ ಆಗಿದೆ. ಆದಷ್ಟು ಬೇಗ ಅಂದ್ರೆ ಅದು ಮುಂದಿನ ತಿಂಗಳು ಅಂತ ಹೇಳಬಹುದು. ಜೂನ್ ತಿಂಗಳ ಯಾವ ಡೇಟ್ ಅನ್ನೋದು ಇನ್ನಷ್ಟೆ ತಿಳಿಯಬೇಕಿದೆ.
ಡಾಲಿ ಸ್ನೇಹಿತ ಪೂರ್ಣ ಮೈಸೂರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕಥೆ ಬರೆಯುವ ಸಮಯದಲ್ಲಿಯೇ ಈ ಚಿತ್ರದ ಮಾಹಿತಿ ಡಾಲಿ ಧನಂಜಯ್ ಅವರಿಗೆ ಇತ್ತು.
ಆದರೆ, ಈ ಚಿತ್ರ ಇನ್ನು ಶುರು ಆಗಿಲ್ಲ ಅನ್ನೋದು ಗೊತ್ತೇ ಆಗಿರಲ್ಲಿಲ್ಲ. ಈ ಚಿತ್ರದ ವಿಷಯ ಕೇಳಿದಾಗಲೇ ಡಾಲಿ ಧನಂಜಯ್ ಅವರಿಗೆ ಒಂದು ವಿಷಯ ತಿಳಿಯಿತು. ಈ ಚಿತ್ರದ ಕಥೆ ತಮ್ಮ ಟೇಬಲ್ ಮೇಲೆ ಕಳೆದ 6 ತಿಂಗಳಿನಿಂದಲೂ ಇದೆ ಅಂತಲೇ ತಿಳಿದಿದೆ.
ಡಾಲಿ ಧನಂಜಯ್ ಕಥೆ ಓದೋಕೆ ಶುರು ಮಾಡಿದರು. ಅದು ಇವರನ್ನ ಬಿಟ್ಟು ಬಿಡದೇ ಓದಿಸಿಕೊಂಡು ಹೋಯಿತು. ಆದರೆ, ಕೊನೆ ಇಲ್ವೇ ಅಂತಲೂ ತಿಳಿಯಿತು.
ಆ ಕೂಡಲೇ ಧನಂಜಯ್ ಒಂದು ಕೆಲಸ ಮಾಡಿದರು. ಗೆಳೆಯ ಪೂರ್ಣ ಮೈಸೂರಿಗೆ ಪೋನ್ ಮಾಡಿದರು. ಈ ಚಿತ್ರದ ಕಥೆಯನ್ನ ಪೂರ್ತಿ ಮಾಡು, ಇದನ್ನ ನಾನೇ ನಿರ್ಮಾಣ ಮಾಡುತ್ತೇನೆ ಅಂತಲೇ ಹೇಳಿದರು.
ಪೂರ್ಣ ಮೈಸೂರು ಒಂದು ಮಾತು ಹೇಳಿದರು. ಸಿನಿಮಾ ನಿರ್ಮಾಣ ಮಾಡೋದೇನೋ ಸರಿ. ಆದರೆ, ಈ ಚಿತ್ರದ ಹೀರೋ ಕೂಡ ನೀವೇ ಅಂತಲೂ ಹೇಳಿದರು. ಹೀಗೆ ಶುರು ಆದ ಈ ಚಿತ್ರ ಇದೀಗ ರಿಲೀಸ್ ಹಂತಕ್ಕೆ ಬಂದಿದೆ. ಒಂದು ಹೊಸ ಭರವಸೆಯನ್ನೂ ಮೂಡಿಸಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
May 23, 2026 10:01 PM IST













