Cricket: ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಮಿಸ್ ಫೀಲ್ಡ್ ಮಿರಾಕಲ್! ಕ್ರಿಕೆಟ್​ ಇತಿಹಾಸದಲ್ಲೇ ಈ ರೀತಿಯ ರನ್​ ಔಟ್ ನೋಡಿರಲ್ಲ! | ಕ್ರೀಡಾ ಸುದ್ದಿ | ACTPnews

ಡಿಪಿಎಲ್ ರನ್​ಔಟ್


Last Updated:

ಡೆಲ್ಲಿ ಪ್ರೀಮಿಯರ್ ಲೀಗ್ 8ನೇ ಲೀಗ್​ ಪಂದ್ಯದಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ಮತ್ತು ನ್ಯೂಡೆಲ್ಲಿ ಟೈಗರ್ಸ್ ನಡುವಿನ ಪಂದ್ಯದ ವೇಳೆ ಈ ಅಪರೂದ ಘಟನೆ ನಡೆದಿದೆ. ಈ ಥ್ರಿಲ್ಲಿಂಗ್ ಪಂದ್ಯದ ಕೊನೆಯ ಎಸೆತ ಹೈಡ್ರಾಮಕ್ಕೆ ಕಾರಣವಾಯಿತು.

ಡಿಪಿಎಲ್ ರನ್​ಔಟ್
ಡಿಪಿಎಲ್ ರನ್​ಔಟ್

ಡೆಲ್ಲಿ ಪ್ರೀಮಿಯರ್ ಲೀಗ್ (DPL) ವೇಳೆ ಅತ್ಯಂತ ವಿಚಿತ್ರ ರನ್ ಔಟ್ ಆಗಿರುವುದು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನಿರ್ಣಾಯಕ ಹಂತದಲ್ಲಿ ಫೀಲ್ಡಿಂಗ್ ದೋಷದಿಂದ ಚೆಂಡನ್ನು ಹಿಡಿಯಲಾಗದೇ ನಿರಾಶೆಗೊಂಡ ಫೀಲ್ಡರ್ ಚೆಂಡನ್ನು ಕಾಲಿನಲ್ಲಿ ಒದ್ದಾಗ, ಅದು ಅನಿರೀಕ್ಷಿತವಾಗಿ ಸ್ಟಂಪ್‌ಗಳಿಗೆ ಬಡಿದು ರನ್ ಔಟ್ ಆಗಿದೆ. ಈ ರನ್ ಔಟ್​​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಈ ಅಭೂತಪೂರ್ವ ರನ್ ಔಟ್‌ನಿಂದಾಗಿ ಸೋಲಬೇಕಿದ್ದ ಪಂದ್ಯ ಟೈ ಆಗಿ, ಸೂಪರ್​ ಓವರ್​​ಗೆ ಕೊಂಡೊಯ್ದಿದೆ. ಈ ವಿಡಿಯೋ ನೋಡಿದವರೆಲ್ಲಾ ಇದು ಕ್ರಿಕೆಟ್​​​ನಲ್ಲೇ ಮಿರಾಕಲ್ ಎಂದು ಬಣ್ಣಿಸುತ್ತಿದ್ದಾರೆ.

ಪಂದ್ಯ ವೇಳೆ ನಡೆದದ್ದೆನು?

ಡೆಲ್ಲಿ ಪ್ರೀಮಿಯರ್ ಲೀಗ್ 8ನೇ ಲೀಗ್​ ಪಂದ್ಯದಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ಮತ್ತು ನ್ಯೂಡೆಲ್ಲಿ ಟೈಗರ್ಸ್ ನಡುವಿನ ಪಂದ್ಯದ ವೇಳೆ ಈ ಅಪರೂಪದ ಘಟನೆ ನಡೆದಿದೆ. ಈ ಥ್ರಿಲ್ಲಿಂಗ್ ಪಂದ್ಯದ ಕೊನೆಯ ಎಸೆತ ಹೈಡ್ರಾಮಕ್ಕೆ ಕಾರಣವಾಯಿತು. ಔಟರ್ ಡೆಲ್ಲಿ ವಾರಿಯರ್ಸ್​​ಗೆ ಗೆಲ್ಲಲು ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ನ್ಯೂಡೆಲ್ಲಿ ಟೈಗರ್ಸ್ ಬೌಲರ್ ಲಕ್ಷ್ಮಣ್ ಬೌಲಿಂಗ್​​ನಲ್ಲಿ ಬ್ಯಾಟರ್ ಪ್ರಥಮ್ ಸಲೂಜಾ ಅವರು ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದು ತಕ್ಷಣವೇ ಸಿಂಗಲ್ ಓಡಲು ಆರಂಭಿಸಿದರು.

ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನ್ಯೂ ಡೆಲ್ಲಿ ತಂಡದ ನಾಯಕ ಹಿಮ್ಮತ್ ಸಿಂಗ್ ಚೆಂಡನ್ನು ಸುಲಭವಾಗಿ ಹಿಡಿಯುವಲ್ಲಿ ವಿಫಲರಾದರು. ಚೆಂಡು ಕೈಗೆ ಸಿಗದಿದ್ದರಿಂದ ಅವರು ತಾಳ್ಮೆ ಕಳೆದುಕೊಂಡು, ತಮ್ಮಿಂದ ಪಂದ್ಯ ಸೋಲುವಂತಾಯಿತು ಎಂಬ ಹತಾಶೆಯಲ್ಲಿ ಚೆಂಡನ್ನು ಗಟ್ಟಿಯಾಗಿ ಒದ್ದರು. ಆದರೆ ಅಲ್ಲಿ ಪವಾಡವೇ ನಡೆದು ಹೋಯಿತು.

ಮಿರಾಕಲ್ ರನ್​ಔಟ್

ಹಿಮ್ಮತ್ ಕೋಪದಲ್ಲಿ ಒದ್ದ ಚೆಂಡು ರಾಕೆಟ್ ವೇಗದಲ್ಲಿ ಹೋಗಿ ನೇರವಾಗಿ ನಾನ್-ಸ್ಟ್ರೈಕರ್ ತುದಿಯ ವಿಕೆಟ್‌ಗೆ ಬಡಿಯಿತು. ಈ ವೇಳೆ ಬ್ಯಾಟರ್ ಪ್ರಥಮ್ ಸಲೂಜಾ ಇನ್ನೂ ಕ್ರೀಸ್ ತಲುಪದ ಕಾರಣ ರನ್-ಔಟ್ ಎಂದು ಘೋಷಿಸಲಾಯಿತು. ಸೋಲಬೇಕಿದ್ದ ಪಂದ್ಯ ಟೈ ಆಗಿ ಬದಲಾಯಿತು. ಈ ದೃಶ್ಯವನ್ನ ನೋಡಿದ ಫೀಲ್ಡಿಂಗ್ ತಂಡದವರೆಲ್ಲಾ ಮೈದಾನದಲ್ಲೆಲ್ಲಾ ಓಡಿ ಸಂಭ್ರಮಿಸಿದರು. ಬೌಲರ್​ ಹಾಗೂ ಬ್ಯಾಟರ್ ಮಿರಾಕಲ್ ರನ್​ಔಟ್ ನೋಡಿ ಶಾಕ್ ಆದರು. ಸಾಮಾಜಿಕ ಜಾಲತಾಣದಲ್ಲಿ ಹಿಮ್ಮತ್ ಸಿಂಗ್ ಅವರ ಈ ಅನಿರೀಕ್ಷಿತ ‘ಫುಟ್‌ಬಾಲ್ ಶೈಲಿಯ ಕಿಕ್’ ಮತ್ತು ಅದರಿಂದ ಮೂಡಿಬಂದ ಅಪರೂಪದ ರನ್-ಔಟ್ ದೃಶ್ಯ ಸಖತ್ ಟ್ರೆಂಡ್ ಸೃಷ್ಟಿಸಿದೆ.

ಫಲ ನೀಡದ ರನ್​ಔಟ್

ಆದರೆ ಈ ಮಿರಾಕಲ್ ರನ್​ಔಟ್ ನ್ಯೂಡೆಲ್ಲಿಗೆ ಫಲ ನೀಡಲಿಲ್ಲ. ನ್ಯೂಡೆಲ್ಲಿ ಟೈಗರ್ಸ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಸೂಪರ್ ಓವರ್‌ನಲ್ಲಿ, ಔಟರ್ ಡೆಲ್ಲಿ ವಾರಿಯರ್ಸ್ ಅದ್ಭುತ ಪ್ರದರ್ಶನ ನೀಡಿ ಗೆದ್ದಿತು. ಸೂಪರ್ ಓವರ್​​ನಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ 20 ರನ್​ಗಳಿಸಿದರೆ, ನ್ಯೂಡೆಲ್ಲಿ ಕೇವಲ 6 ರನ್​ಗಳಿಸಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

15 ಓವರ್​​ಗಳ ಪಂದ್ಯ

ಮಳೆಯಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂ ಡೆಲ್ಲಿ ಟೈಗರ್ಸ್ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಅಂತಿಮವಾಗಿ ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ 15 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಸೂಪರ್ ಓವರ್‌ನಲ್ಲಿ ಡೆಲ್ಲಿ ವಾರಿಯರ್ಸ್ ತಂಡ ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿತು. ಅಂಚಿನ ಹೊಡೆತ ಟೈಗರ್ಸ್ ತಂಡ 6 ರನ್ ನೀಡಿ 2 ವಿಕೆಟ್ ಕಳೆದುಕೊಂಡಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Cricket: ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಮಿಸ್ ಫೀಲ್ಡ್ ಮಿರಾಕಲ್! ಕ್ರಿಕೆಟ್​ ಇತಿಹಾಸದಲ್ಲೇ ಈ ರೀತಿಯ ರನ್​ ಔಟ್ ನೋಡಿರಲ್ಲ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed