Last Updated:
ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕಾಂಗ್ರೆಸ್ಗೆ ಭರ್ಜರಿಯಾದ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…
ಚೆನ್ನೈ (ತಮಿಳುನಾಡು): ಕಾಂಗ್ರೆಸ್ (Congress) ಪಕ್ಷಕ್ಕೆ ಇಂದು ಡಬಲ್ ಜ್ಯಾಕ್ಪಾಟ್! ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಅವರು ಕಾಂಗ್ರೆಸ್ಗೆ ಭರ್ಜರಿಯಾದ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…
ತಮಿಳುನಾಡಿನ ವಿಧಾನಸಭೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿಯಾಗಿ 107 ಸ್ಥಾನಗಳನ್ನ ಹೊಂದಿದೆ. ಹಾಗಾಗಿ, ಎಐಎಡಿಎಂಕೆಯ ಮಾಜಿ ಸಚಿವ ಸಿ.ವಿ. ಷಣ್ಮುಗಂ ಅವರಿಂದ ತೆರವಾಗಿರುವ ರಾಜ್ಯಸಭಾ ಸಂಸದ ಸ್ಥಾನವನ್ನ, ಟಿವಿಕೆ ಪಕ್ಷ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು. ಆದ್ರೆ, ಹೊಸ ಅಪ್ಡೇಟ್ ಪ್ರಕಾರ, ಟಿವಿಕೆ ಪಕ್ಷ ಆ ಸ್ಥಾನವನ್ನ ಕಾಂಗ್ರೆಸ್ಗೆ ಬಿಟ್ಟುಕೊಡಲಿದೆ ಎನ್ನಲಾಗಿದೆ.
ರಾಜ್ಯಸಭೆಯಲ್ಲಿ ಪ್ರಸ್ತುತ 30 ಸ್ಥಾನಗಳನ್ನ ಕಾಂಗ್ರೆಸ್ ಪಕ್ಷ ಹೊಂದಿದೆ. ಈ ಪೈಕಿ, ಕಾಂಗ್ರೆಸ್ನ 4 ಸ್ಥಾನಗಳು ಖಾಲಿಯಾಗುತ್ತಿದೆ. ಅದರಲ್ಲಿ 1 ಸ್ಥಾನ ಕರ್ನಾಟಕದಲ್ಲೂ, ಮತ್ತೆ ಉಳಿದ 3 ಸ್ಥಾನಗಳು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ ರಾಜ್ಯಗಳದ್ದಾಗಿದೆ. ಆದ್ರೆ, 4 ಸ್ಥಾನಗಳ ಪೈಕಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಮ್ಮ ತಲಾ 1 ಸ್ಥಾನಗಳು ಹಾಗೆಯೇ ಉಳಿಯುತ್ತದೆ! ಆದ್ರೆ, ಗುಜರಾತ್ ರಾಜ್ಯದಲ್ಲಿನ ತಮ್ಮ ಬಲವನ್ನ ಸಂಪೂರ್ಣವಾಗಿ ಕಳೆದುಕೊಳ್ಳಲಿದೆ.
ಮತ್ತೊಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ 1 ಸ್ಥಾನ ಉಳಿಸಿಕೊಳ್ಳುವುದರೊಂದಿಗೆ, ವಿಧಾನಸಭಾ ಬಲಾಬಲಗಳ ಪ್ರಕಾರ ಇನ್ನೂ ಹೆಚ್ಚುವರಿಯಾಗಿ 2 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಲಿದೆ. ಇದರೊಂದಿಗೆ ಜಾರ್ಖಾಂಡ್ನಲ್ಲಿಯೂ ಮಿತ್ರ ಪಕ್ಷದ ಬಲದೊಂದಿಗೆ 1 ಸ್ಥಾನವನ್ನ ಗೆಲ್ಲಬಹುದು! ಜೊತೆಗೆ ಈಗ ತಮಿಳುನಾಡಿನಲ್ಲಿಯೂ ರಾಜ್ಯಸಭಾ ಸ್ಥಾನವನ್ನ ಕಾಂಗ್ರೆಸ್ಗೆ ಏನಾದ್ರೂ ಟಿವಿಕೆ ಬಿಟ್ಟುಕೊಟ್ಟರೆ, ಕಾಂಗ್ರೆಸ್ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಒಟ್ಟು 6 ರಿಂದ 7 ಸ್ಥಾನಗಳ ಹೆಚ್ಚಳವಾಗಲಿದೆ. ಈ ಮೂಲಕ ಕಾಂಗ್ರೆಸ್ ತನ್ನ ಸ್ಥಾನವನ್ನ ಹೆಚ್ಚಿಸಿಕೊಳ್ಳಲಿದೆ.
Chennai,Tamil Nadu













