Congress: ಇತ್ತ ಡಿಕೆಶಿ ಪ್ರಮಾಣವಚನ, ಅತ್ತ ಕಾಂಗ್ರೆಸ್​ಗೆ ವಿಜಯ್​ ಭರ್ಜರಿ ಗಿಫ್ಟ್​! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್​ ಪಕ್ಷದ ಕಟ್ಟಾಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್​ ಅವರು ಕಾಂಗ್ರೆಸ್​ಗೆ ಭರ್ಜರಿಯಾದ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…

News18
News18

ಚೆನ್ನೈ (ತಮಿಳುನಾಡು): ಕಾಂಗ್ರೆಸ್​ (Congress) ಪಕ್ಷಕ್ಕೆ ಇಂದು ಡಬಲ್​ ಜ್ಯಾಕ್​ಪಾಟ್​! ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್​ ಪಕ್ಷದ ಕಟ್ಟಾಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್​ ವಿಜಯ್​ (Joseph Vijay) ಅವರು ಕಾಂಗ್ರೆಸ್​ಗೆ ಭರ್ಜರಿಯಾದ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…

ಕಾಂಗ್ರೆಸ್​ಗೆ ವಿಜಯ್​ ನೀಡಿದ ಸಿಹಿ ಸುದ್ದಿ ಏನು?

ತಮಿಳುನಾಡಿನ ವಿಧಾನಸಭೆಯಲ್ಲಿ ವಿಜಯ್​ ನೇತೃತ್ವದ ಟಿವಿಕೆ ಪಕ್ಷ ಭರ್ಜರಿಯಾಗಿ 107 ಸ್ಥಾನಗಳನ್ನ ಹೊಂದಿದೆ. ಹಾಗಾಗಿ, ಎಐಎಡಿಎಂಕೆಯ ಮಾಜಿ ಸಚಿವ ಸಿ.ವಿ. ಷಣ್ಮುಗಂ ಅವರಿಂದ ತೆರವಾಗಿರುವ ರಾಜ್ಯಸಭಾ ಸಂಸದ ಸ್ಥಾನವನ್ನ, ಟಿವಿಕೆ ಪಕ್ಷ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ ಎನ್ನಲಾಗಿತ್ತು. ಆದ್ರೆ, ಹೊಸ ಅಪ್ಡೇಟ್​ ಪ್ರಕಾರ, ಟಿವಿಕೆ ಪಕ್ಷ ಆ ಸ್ಥಾನವನ್ನ ಕಾಂಗ್ರೆಸ್​ಗೆ ಬಿಟ್ಟುಕೊಡಲಿದೆ ಎನ್ನಲಾಗಿದೆ.

ಚುನಾವಣೆಯ ನಂತರ ಕಾಂಗ್ರೆಸ್​ ಬಲಾಬಲ ಹೇಗಿರಲಿದೆ?

ರಾಜ್ಯಸಭೆಯಲ್ಲಿ ಪ್ರಸ್ತುತ 30 ಸ್ಥಾನಗಳನ್ನ ಕಾಂಗ್ರೆಸ್​ ಪಕ್ಷ ಹೊಂದಿದೆ. ಈ ಪೈಕಿ, ಕಾಂಗ್ರೆಸ್​ನ 4 ಸ್ಥಾನಗಳು ಖಾಲಿಯಾಗುತ್ತಿದೆ. ಅದರಲ್ಲಿ 1 ಸ್ಥಾನ ಕರ್ನಾಟಕದಲ್ಲೂ, ಮತ್ತೆ ಉಳಿದ 3 ಸ್ಥಾನಗಳು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್​ ರಾಜ್ಯಗಳದ್ದಾಗಿದೆ. ಆದ್ರೆ, 4 ಸ್ಥಾನಗಳ ಪೈಕಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ತಮ್ಮ ತಲಾ 1 ಸ್ಥಾನಗಳು ಹಾಗೆಯೇ ಉಳಿಯುತ್ತದೆ! ಆದ್ರೆ, ಗುಜರಾತ್​ ರಾಜ್ಯದಲ್ಲಿನ ತಮ್ಮ ಬಲವನ್ನ ಸಂಪೂರ್ಣವಾಗಿ ಕಳೆದುಕೊಳ್ಳಲಿದೆ.

ಮತ್ತೊಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್​ 1 ಸ್ಥಾನ ಉಳಿಸಿಕೊಳ್ಳುವುದರೊಂದಿಗೆ, ವಿಧಾನಸಭಾ ಬಲಾಬಲಗಳ ಪ್ರಕಾರ ಇನ್ನೂ ಹೆಚ್ಚುವರಿಯಾಗಿ 2 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಲಿದೆ. ಇದರೊಂದಿಗೆ ಜಾರ್ಖಾಂಡ್​ನಲ್ಲಿಯೂ ಮಿತ್ರ ಪಕ್ಷದ ಬಲದೊಂದಿಗೆ 1 ಸ್ಥಾನವನ್ನ ಗೆಲ್ಲಬಹುದು! ಜೊತೆಗೆ ಈಗ ತಮಿಳುನಾಡಿನಲ್ಲಿಯೂ ರಾಜ್ಯಸಭಾ ಸ್ಥಾನವನ್ನ ಕಾಂಗ್ರೆಸ್​​ಗೆ ಏನಾದ್ರೂ ಟಿವಿಕೆ ಬಿಟ್ಟುಕೊಟ್ಟರೆ, ಕಾಂಗ್ರೆಸ್​ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಒಟ್ಟು 6 ರಿಂದ 7 ಸ್ಥಾನಗಳ ಹೆಚ್ಚಳವಾಗಲಿದೆ. ಈ ಮೂಲಕ ಕಾಂಗ್ರೆಸ್​ ತನ್ನ ಸ್ಥಾನವನ್ನ ಹೆಚ್ಚಿಸಿಕೊಳ್ಳಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed