Last Updated:
ಶಿವಾಜಿ ಪಾರ್ಕ್ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾದರು. ಯಾರ್ಯಾರು ಇದ್ದರು?
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijith Deepke) ಮುಂಬೈನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬಿ ಟೌನ್ ಸೆಲೆಬ್ರಿಟಿಗಳು (Celebrtities) ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ. ಗಾಯಕ ವಿಶಾಲ್ ದದ್ಲಾನಿ ಅವರು ಶಿವಾಜಿ ಪಾರ್ಕ್ನಲ್ಲಿ (Shivaji Park) ನಡೆಯುತ್ತಿರೋ ಪ್ರತಿಭಟನೆಯಲ್ಲಿ (Protest) ಭಾಗಿಯಾದರು. ಈ ಹಿಂದೆ ಅವರು ಆನ್ಲೈನ್ನಲ್ಲಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟಯನೆಯಲ್ಲಿ ಭಾಗಿಯಾಗಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ವಿಶಾಲ್ ಅವರು, ಇದು ತುಂಬಾ ಸುಂದರವಾದ ದೃಶ್ಯ. ನನಗೆ ಇವರೊಂದಿಗೆ ದೆಹಲಿಯಲ್ಲಿರುವ ಅವಕಾಶ ಸಿಗಲಿಲ್ಲ. ಆದರೆ ಇಲ್ಲಿ ಜೊತೆಯಾಗು ಅವಕಾಶ ಸಿಕ್ಕಿತು. ಈ ಪ್ರತಿಭಟನೆ ಜಾರಿಯಲ್ಲಿರುತ್ತದೆ ಎಂದರು. ಈ ಹಿಂದೆ ಅವರು ದೀಪ್ಕೆ ಹಾಗೂ ಪ್ರತಿಭಟನೆಯನ್ನು ಬೆಂಬಲಿಸುವ ಪೋಸ್ಟ್ ಹಾಕಿದ್ದರು. ಈ ಬಾರಿ ಅವರು ಸಿಜೆಪಿ ನಡೆಸುತ್ತಿರುವ ಜೈಲ್ ಭರೋ ಆಂದೋಲನದಲ್ಲಿ ಭಾಗಿಯಾದರು.
ಚುನಾವಣಾ ಆಯೋಗದ ಮುಖ್ಯಸ್ಥ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಎಸ್ಐಆರ್ ಬಗ್ಗೆಯೂ ಪ್ರತಿಭಟನಾಕಾರರು ಮಾತನಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸುಮಾರು 13 ಕೋಟಿ ಜನ ಮತದಾರರ ಹೆಸರನ್ನು ತೆಗೆಯಲಾಗಿದೆ ಎಂದು ಸಿಜೆಪಿ ಆರೋಪಿಸಿದೆ. ಇದು ಪ್ರತಿಭಟನಾಕಾರರು ಮಾಡಿರುವ ಆರೋಪವಾಗಿದೆ.
ಮತದಾರರ ಪಟ್ಟಿಯಲ್ಲಿ ಅಷ್ಟು ದೊಡ್ಡ ವ್ಯತ್ಯಾಸ ಇರುವುದು ಚುನಾವಣೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮುಂಬೈ ಪೊಲೀಸರು ಅನುಮತಿ ನೀಡದಿದ್ದರೂ ಶಿವಾಜಿ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಾಗಿದೆ.
ನಟಿ ಶಬಾನಾ ಅಜ್ಮಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಹಿಂದೆಯೇ ನಟಿ ಜನರು ಹೊರ ಬಂದು ತಮ್ಮ ಮತದಾನದ ಹಕ್ಕಿನ ಬಗ್ಗೆ ಪ್ರಶ್ನೆ ಎತ್ತಬೇಕು ಎಂದು ಹೇಳಿದ್ದರು. ಪ್ರತಿಭಟನಾ ಸ್ಥಳದಿಂದ ಶೇರ್ ಆದ ವಿಡಿಯೋ ಒಂದರಲ್ಲಿ ಶಬಾನಾ ಅವರು, ನಿಮ್ಮ ಮತ ನಿಮ್ಮ ಧ್ವನಿ. ನಿಮ್ಮ ಹಕ್ಕು. ನಿಮ್ಮ ಮತ ಈ ದೇಶದ ಭವಿಷ್ಯವನ್ನು ರೂಪಿಸುತ್ತದೆ, ಆದರೆ ನಿಮ್ಮ ಮತ ಲೆಕ್ಕಕ್ಕೇ ಇಲ್ಲ ಎಂದಾದಾಗ ಏನಾಗುತ್ತದೆ? ವೋಟರ್ ಲಿಸ್ಟ್ನಿಂದ ದಿಢೀರ್ ಆಗಿ ನಿಮ್ಮ ಹೆಸರು ತೆಗೆದರೆ ಏನಾಗುತ್ತದೆ? ನಿಮ್ಮ ಮತವನ್ನು ಲಿಸ್ಟ್ನಿಂದ ತೆಗೆಯಬಹುದು, ಬದಲಾಯಿಸಬಹುದು ಎಂದಾದಾಗ ಏನಾಗುತ್ತೆ? ಎಂದು ಪ್ರಶ್ನೆ ಮಾಡಿದ್ದಾರೆ.














