Last Updated:
ದುನಿಯಾ ವಿಜಯ್ ಅವರ ಸಿಟಿ ಲೈಟ್ಸ್ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಚಿತ್ರದ ರನ್ ಟೈಮ್ ಕೂಡ ಗೊತ್ತಾಗಿದೆ. ಈ ಚಿತ್ರಕ್ಕೆ ಯಾವ ಪ್ರಮಾಣ ಪತ್ರ ಬಂದಿದೆ ಅನ್ನೋದು ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ ‘ಸಿಟಿ ಲೈಟ್ಸ್’ ಚಿತ್ರಕ್ಕೆ (City Lights) ಸೆನ್ಸಾರ್ ಆಗಿದೆ. ಈ ಚಿತ್ರ 2 ಗಂಟೆ 9 ನಿಮಿಷ 26 ಸೆಕೆಂಡ್ ಇದೆ. ಈ ಚಿತ್ರಕ್ಕೆ A ಪ್ರಮಾಣ ಪತ್ರ (A Certification) ಬಂದಿದೆ. ಸೆಪ್ಟೆಂಬರ್-18 ರಂದು ಈ ಚಿತ್ರ ರಿಲೀಸ್ (Movie Release) ಆಗುತ್ತಿದೆ. ರಾಜ್ಯದೆಲ್ಲೆಡೆ 150 ಪ್ಲಸ್ ಥಿಯೇಟರ್ (Theater) ಅಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ವಿಷಯ ಇಲ್ಲಿದೆ ಓದಿ.
A ಪ್ರಮಾಣ ಪತ್ರ (ಚಿತ್ರ ಕೃಪೆ: ಸಿಟಿ ಲೈಟ್ಸ್ ಟೀಮ್)
ಈ ಚಿತ್ರದ ಒಟ್ಟು 2 ಗಂಟೆ 9 ನಿಮಿಷ 26 ಸೆಕೆಂಡ್ ಇದೆ. ಸೆಪ್ಟೆಂಬರ್-18 ರಂದು ಈ ಸಿನಿಮಾ ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ.
ಸಿಟಿ ಲೈಟ್ಸ್ ಚಿತ್ರದಲ್ಲಿ ವೇಶ್ಯಾವಾಟಿಕೆಯ ಕರಾಳ ಮುಖ ತೋರಿಸೋಕೆ ಹೊರಟ್ಟಿದ್ದಾರೆ. ಈ ಹಿಂದಿನ ಸಲಗದಲ್ಲಿ ರೌಡಿಸಂ ಬಗ್ಗೆ ಹೇಳಿದ್ದರು.
ಮೊನಿಷಾ ವಿಜಯ್‌ಕುಮಾರ್ ಅವರಿಗೆ ಇದು ಮೊದಲ ಚಿತ್ರವಾಗಿದೆ. ಈ ಚಿತ್ರದ ಮೂಲಕ ನಾಯಕಿ ಆಗಿದ್ದಾರೆ. ಮೊದಲ ಅವಕಾಶದಲ್ಲಿಯೇ ಅಪ್ಪನ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದಲ್ಲಿರೋ ಕಲಾವಿದರಿಂದ ಸಾಕಷ್ಟು ಕಲಿತುಕೊಂಡಿದ್ದಾರೆ. ಅಪ್ಪನಿಂದಲೂ ಸುಮಾರು ತಿಳಿದುಕೊಂಡಿದ್ದಾರೆ. ಉಮಾಶ್ರೀ ಅವರಿಂದಲೂ ಸಾಕಷ್ಟು ವಿಚಾರ ಅರ್ಥ ಮಾಡಿಕೊಂಡಿದ್ದಾರೆ.
ಮೊನಿಷಾ ಫಸ್ಟ್ ಚಿತ್ರ (ಚಿತ್ರ ಕೃಪೆ: ಸಿಟಿ ಲೈಟ್ಸ್ ಟೀಮ್)
ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಲಾಂಗ್ ಹಿಡಿದಿದ್ದಾರೆ. ರಕ್ತಪಾತವೂ ಈ ಚಿತ್ರದಲ್ಲಿದೆ. ಈ ಹಿಂದಿನ ಚಿತ್ರಗಳಿಗಿಂತಲೂ ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಬೇರೆ ರೀತಿನೇ ಕಾಣಿಸುತ್ತಾರೆ.
ವಿನಯ್ ರಾಜ್‌ಕುಮಾರ್ ಹಾಗೂ ಮೊನಿಷಾ ವಿಜಯ್ ಕುಮಾರ್ ಈ ಚಿತ್ರದಲ್ಲಿ ಪ್ರೇಮಿಗಳಾಗಿಯೇ ಕಾಣಿಸಿಕೊಂಡಿದ್ದಾರೆ. ದುನಿಯಾ ಚಿತ್ರದಲ್ಲಿದ್ದ ಆ ಮುಗ್ಧ ಪ್ರೇಮಿಗಳಂತೆನೂ ಇವರಿದ್ದಾರೆ. ಇವರ ಪ್ರೀತಿಯನ್ನ ಇಲ್ಲಿ ಅಷ್ಟೆ ವಿಶೇಷವಾಗಿಯೇ ತೋರಿಸುವ ಕೆಲಸವನ್ನ ದುನಿಯಾ ವಿಜಯ್ ಮಾಡುತ್ತಿದ್ದಾರೆ.
ಚರಣ್ ರಾಜ್ ಮ್ಯೂಸಿಕ್ ಈ ಚಿತ್ರಕ್ಕೆ ಇದೆ. ಈ ಸಿನಿಮಾದ ಹಾಡುಗಳು ಚೆನ್ನಾಗಿವೆ. ಜನರನ್ನ ಸೆಳೆಯುವ ಕೆಲಸ ಮಾಡುತ್ತಿವೆ. ವಿನಯ್ ಮತ್ತು ಮೊನಿಷಾ ಅವರ ಪ್ರೀತಿಯನ್ನ ಹೇಳುವ ‘ಕಂದಮ್ಮ’ ಹಾಡು ಹಿಟ್ ಆಗಿದೆ.
ಈ ಚಿತ್ರಕ್ಕೆ ಮಾಸ್ತಿ ಡೈಲಾಗ್ ಬರೆದಿದ್ದಾರೆ. ಒಂದು ರೋಲ್ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಶಿವಣ್ಣನ ಫ್ಯಾನ್ ಪುನೀತ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ಈ ರೀತಿ ಹಲವು ಹೊಸ ಕಲಾವಿದರಿಗೆ ದುನಿಯಾ ವಿಜಯ್‌ಕುಮಾರ್ ಈ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಅಂತಲೇ ಹೇಳಬಹುದು.














