Last Updated:
ಹಾಸ್ಯ ನಾಯಕ ನಟ ಚಿಕ್ಕಣ್ಣ ತಮ್ಮ ಲಕ್ಷ್ಮೀಪುತ್ರ ಚಿತ್ರದ ಇನ್ಮೇಲೆ ಹಾಡನ್ನ ಹಾಡಿದ್ದಾರೆ. ರೀಲ್ಸ್ ರೂಪದಲ್ಲಿಯೇ ಇರೋ ಈ ಗೀತೆಯ ವಿಡಿಯೋದ ಜೊತೆಗೆ ಚಿಕ್ಕಣ್ಣನ ಒಂದು ರಿಕ್ವೆಸ್ಟ್ ಕೂಡ ಮಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಹಾಗೆ ಸುಮ್ಮನೆ ನನ್ನ ಧ್ವನಿಯಲ್ಲಿ ಒಂದು ಚಿಕ್ಕ ಪ್ರಯತ್ನ. ಹೀಗೆ ಚಿಕ್ಕಣ್ಣ ಬರೆದಿದ್ದಾರೆ. ಆದರೆ, ಈ ಪ್ರಯತ್ನ ಇಂಟ್ರಸ್ಟಿಂಗ್ ಆಗಿದೆ. ತಮ್ಮ ಚಿತ್ರದ “ಇನ್ಮೇಲೆ” ಹಾಡನ್ನ (Inmele Song) ಚಿಕ್ಕಣ್ಣ (Chikkanna) ಹಾಡಿದ್ದಾರೆ. ಸಿನಿಮಾದಲ್ಲಿ ದರ್ಶನ್ ಮೆಳವಂಕಿ (Darshan Melavanki) ಹಾಗೂ ಪೃಥ್ವಿ ಭಟ್ (Prithwi Bhat) ಈ ಗೀತೆ ಹಾಡಿದ್ದಾರೆ. ಆದರೆ, ಇಲ್ಲಿ ಚಿಕ್ಕಣ್ಣ ಹಾಡಿ ಅದನ್ನ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ. ನಾನು ಈ ಹಾಡನ್ನ ಹಾಡಿದ್ದೇನೆ. ನೀವೂ ಈ ಗೀತೆಗೆ ರೀಲ್ಸ್ ಮಾಡಿ, ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಿ ಅಂತಲೇ ಕೇಳಿಕೊಂಡಿದ್ದಾರೆ. ಆದರೆ, ಚಿಕ್ಕಣ್ಣ ಈ ಹಾಡನ್ನ ಹೇಗೆ ಹಾಡಿದ್ದಾರೆ ಅನ್ನೊದರ ವಿವರ ಇಲ್ಲಿದೆ ಓದಿ.
ಇವರ ಹಾಡಿಗೆ ‘ಇನ್ಮೇಲೆ’ ನೀವೂ ಫಿದಾ
(ಚಿತ್ರ ಕೃಪೆ: ಚಿಕ್ಕಣ್ಣ ಇನ್ಸ್ಟಾಗ್ರಾಮ್)
ಈ ಒಂದು ಹಾಡನ್ನ ಹಾಡುವ ಮುಂಚೆನೂ ಸ್ಟೈಲ್ ರಾಜ ಚಿತ್ರಕ್ಕೂ ಚಿಕ್ಕಣ್ಣ ಹಾಡಿದ್ದಾರೆ. ‘ಯಾಕೋ ಗೊತ್ತಾಗಿಲ್ಲ’ ಅನ್ನುವ ಈ ಗೀತೆಯ ಹಾಡಿನಲ್ಲಿ ಚಿಕ್ಕಣ್ಣ ಕೂಡ ಇದ್ದಾರೆ. ಆದರೆ, ಹೀರೋಗಾಗಿಯೇ ಈ ಹಾಡನ್ನ ಹಾಡಿದಂತೆ ಇದೆ.
ಲಕ್ಷ್ಮೀಪುತ್ರ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮಾಡಿದ್ದಾರೆ. ಚಿತ್ರದ ನಿರ್ಮಾಪಕ ಎ.ಪಿ.ಅರ್ಜುನ್ ಸಾಹಿತ್ಯ ಬರೆದಿದ್ದಾರೆ. ದರ್ಶನ್ ಮೆಳವಂಕಿ ಹಾಗೂ ಪೃಥ್ವಿ ಭಟ್ ಈ ಗೀತೆಯನ್ನ ಹಾಡಿದ್ದಾರೆ.
ಚಿತ್ರವನ್ನ ಈ ಒಂದು ಹಾಡು ಪ್ರಮೋಟ್ ಮಾಡುತ್ತಿದೆ. ರೀಲ್ಸ್ ಮೇಲೆ ರೀಲ್ಸ್ ಕೂಡ ಆಗುತ್ತಿವೆ. ಸ್ವತಃ ಚಿಕ್ಕಣ್ಣ ಇನ್ಮೇಲೆ ಹಾಡನ್ನ ಹಾಡಿದ್ದಾರೆ. ಇದು ನನ್ನ ಒಂದು ಚಿಕ್ಕ ಪ್ರಯತ್ನವೇ ಆಗಿದೆ. ಈ ಹಾಡಿನ ಮೇಲೆ ರೀಲ್ಸ್ ಮಾಡಿ, ನಮ್ಮ ಚಿತ್ರಕ್ಕೆ ಸಪೋರ್ಟ್ ಮಾಡಿ ಅಂತಲೂ ಚಿಕ್ಕಣ್ಣ ಕೇಳಿಕೊಂಡಿದ್ದಾರೆ.
ಲಕ್ಷ್ಮೀಪುತ್ರ ಚಿತ್ರದ ಇನ್ಮೇಲೆ ಹಾಡು ವೈರಲ್ ಆಗುತ್ತಿದೆ. ಮೊದಲ ಸಲ ಕೇಳಿದಾಗ ಇದರಲ್ಲಿ ಏನೂ ಇಲ್ಲ ಅನಿಸುತ್ತದೆ. ಆದರೆ, ಇದನ್ನ ಕೇಳ್ತಾ ಹೋದಂತೆ ಇದು ಸೆಳೆಯುತ್ತಲೇ ಸಾಗುತ್ತದೆ. ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತದೆ.
ಲಕ್ಷ್ಮೀಪುತ್ರ ಶೂಟಿಂಗ್ ಕಂಪ್ಲೀಟ್
(ಚಿತ್ರ ಕೃಪೆ: ಚಿಕ್ಕಣ್ಣ ಇನ್ಸ್ಟಾಗ್ರಾಮ್)
ಆ ರೀತಿಯ ಈ ಹಾಡನ್ನ ಹಾಡುವ ಮೂಲಕ ಎಲ್ಲರೂ ಈ ಹಾಡಿಗೆ ರೀಲ್ಸ್ ಮಾಡಿ ಅಂತ ಚಿಕ್ಕಣ್ಣ ಕೇಳಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಕೊಡಿ ಅಂತಲೂ ಕೇಳಿಕೊಂಡಿದ್ದಾರೆ.
ಲಕ್ಷ್ಮೀಪುತ್ರ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರದ ಒಂದೇ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಈ ವಿಷಯವನ್ನ ಚಿತ್ರದ ಹಾಡಿನ ರಿಲೀಸ್ ಇವೆಂಟ್ ಅಲ್ಲಿ ಚಿತ್ರದ ನಿರ್ಮಾಪಕ ಎ.ಪಿ.ಅರ್ಜುನ್ ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಚಿಕ್ಕಣ್ಣನಿಗೆ ವಂದಿತಾ ಜೋಡಿ ಆಗಿದ್ದಾರೆ. ಚಿಕ್ಕಣ್ಣನ ಗೆಳೆಯ ಕುರಿ ಪ್ರತಾಪ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತಾರಾ ಅನುರಾಧಾ ಇಲ್ಲಿ ಚಿಕ್ಕಣ್ಣನ ಅಮ್ಮನ ಪಾತ್ರ ಮಾಡಿದ್ದಾರೆ.
ಇದು ಅಮ್ಮ ಮತ್ತು ಮಗನ ಸೆಂಟಿಮೆಂಟ್ ಇರೋ ಚಿತ್ರವೂ ಆಗಿದೆ. ಈ ಚಿತ್ರಕ್ಕೆ ಗಿರೀಶ್ ಆರ್. ಗೌಡ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













