Chandan Shetty: ‘ತಪ್ಪು ಮಾಡಿ ಕ್ಷಮೆ ಕೇಳಿದ್ಮೇಲೂ ಬೇಡ ನೀನು ಅಂತ ರಿಜೆಕ್ಟ್ ಮಾಡಿದ್ರೆ ನೋವಾಗುತ್ತೆ’ ಚಂದನ್ ಮಾತು | Chandan shetty speaks about mistakes forgivenss | | ACTPnews

ಚಂದನ್ ಶೆಟ್ಟಿ-ನಿವೇದಿತಾ


Last Updated:

Chandan Shetty: ತಪ್ಪು, ಕ್ಷಮೆ, ಸ್ವೀಕಾರದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು? ತಮ್ಮ ವೈವಾಹಿಕ ಜೀವನದ ಹಿನ್ನೆಲೆಯಲ್ಲೇ ಮಾತನಾಡಿದ್ರಾ ಚಂದನ್?

ಚಂದನ್ ಶೆಟ್ಟಿ-ನಿವೇದಿತಾ
ಚಂದನ್ ಶೆಟ್ಟಿ-ನಿವೇದಿತಾ

ಬಿಗ್​ಬಾಸ್ (Bigg Boss)​ ಮನೆಯಲ್ಲಿ ಭೇಟಿಯಾಗಿ ಪರಸ್ಪರ ಇಷ್ಟಪಟ್ಟು ಪ್ರೀತಿಸಿ (Love) ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda). ಪರಸ್ಪರ ಪ್ರೀತಿಸಿ ಮದುವೆಯಾಗಿ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದರೆ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ  (Social Media) ಚರ್ಚೆಯಾಗುತ್ತಲೇ ಇರುತ್ತದೆ.

ಇತ್ತೀಚೆಗೆ ರ್ಯಾಪರ್ ಚಂದನ್ ಶೆಟ್ಟಿ ಅವರು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ ಜೊತೆ ಮಾಡತನಾಡಿದ್ದಾರೆ. ಹೀಗೆ ಮಾತನಾಡುವಾಗ ಅವರು ಹಲವಾರು ಸಂಗತಿಗಳ ಬಗ್ಗೆ ಮಾತನಾಡಿದ್ದು ಬದುಕಿನಲ್ಲಿ ತಪ್ಪು, ಕ್ಷಮೆ, ಸ್ವೀಕಾರ, ರಿಜೆಕ್ಷನ್ ಬಗ್ಗೆಯೂ ಮಾತನಾಡಿದ್ದಾರೆ.

ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ನೀವು ಬಯಸುವಿರಾ? ನೀವು ಇತರರನ್ನು ಮತ್ತು ನಿಮ್ಮನ್ನು ಹೇಗೆ ಕ್ಷಮಿಸುತ್ತೀರಿ? ಈ ಬಗ್ಗೆ ಒಂದು ಹೃದಯಸ್ಪರ್ಶಿ ಮಾತುಕತೆಯಲ್ಲಿ, ಚಂದನ್ ಶೆಟ್ಟಿ ತಪ್ಪೊಪ್ಪಿಗೆ, ಕ್ಷಮೆ ಮತ್ತು ಜೀವನದ ಅನುಭವಗಳ ಮೂಲಕ ಕಲಿತ ಪಾಠಗಳ ಬಗ್ಗೆ ಮಾತನಾಡಿದ್ದಾರೆ.

”ನೀವೇನೋ ಒಂದು ತಪ್ಪು ಮಾಡಿ ಸಾರಿ ಕೇಳ್ತೀರಿ. ಆ ವ್ಯಕ್ತಿ ನಿಮಗೆ ಸರಿ ಅಂತ ಕ್ಷಮಿಸಿದ್ರೆ ಅಲ್ಲಿಗೆ ನಿಮ್ಮ ಪಾರ್ಟ್ ನೀವು ಮಾಡಿ ಆಯ್ತು. ತಪ್ಪು ಮಾಡಿದವರು ಸಾರಿ ಕೇಳಿದಾಗ ಕ್ಷಮಿಸ್ಬೇಕು ಅನ್ನೋದು ಯೂನಿವರ್ಸಲ್ ನಿಯಮ ಎಂದಿದ್ದಾರೆ”.

ಏನೋ ಒಂದು ಸಲ ಮನುಷ್ಯ ಸಹಜವಾಗಿ ತಪ್ಪು ಮಾಡುತ್ತಾನೆ, ಸರಿ ಬಿಡು ಮುಂದಿನ ಸಲ ಮಾಡಬೇಡ ಅಂತ ಅಂತೀವಿ. ನೀವು ಸಾರಿ ಕೇಳಿ ಆಯ್ತು, ಸಾರಿ ಕೇಳ್ಬೇಕು ಅಂತ ಗಿಲ್ಟ್ ಇರುತ್ತೆ, ಅದೂ ಆಯ್ತು. ಆದರೆ ಆಮೇಲೂ ಆ ವ್ಯಕ್ತಿ ನಿಮ್ಮನ್ನು ರಿಜೆಕ್ಟ್ ಮಾಡಿದ್ರೆ ಹರ್ಟ್ ಆಗುತ್ತೆ. ಆ ಸಮಯದಲ್ಲಿ ನೀವು ದೇವರಲ್ಲಿ ಕ್ಷಮೆ ಕೇಳುತ್ತೇವೆ. ಆ ಸಮಯದಲ್ಲಿ ಎಷ್ಟು ಡೀಪ್ ಆಗಿ ಕ್ಷಮೆ ಕೇಳ್ಬೇಕು ಅಂದ್ರೆ ನೀವು ಅಳಬೇಕು ಎಂದಿದ್ದಾರೆ.

ಇಷ್ಟಪಟ್ಟು ಮದುವೆಯಾದಾಗ ಯಾರಿಗೂ ಅದನ್ನು ಬ್ರೇಕ್ ಮಾಡಬೇಕು ಅಂತ ಇರೋದಿಲ್ಲ. ಆದರೆ ಕೆಲವೊಂದು ಪರಿಸ್ಥಿತಿಗಳು ನಾವಂದುಕೊಂಡಿದ್ದನ್ನು ಉಲ್ಟಾ ಮಾಡಿ ಬಿಡುತ್ತವೆ. ನಾವು ಫ್ರೆಂಡ್ಸ್ ಆಗಿಲ್ಲ. ಆ ಫೇಸ್ ಬರಬಾರದಾಗಿತ್ತು. ಅದ್ಯಾವುದು ನಮ್ಮ ಕೈನಲ್ಲಿಲ್ಲ ಎಂದಿದ್ದಾರೆ.

ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್

ರಿಲೇಷನ್​​ಶಿಪ್​​ನಲ್ಲಿದ್ದು ಮದುವೆಯಾದಾಗ ಬೇರೆಯಾಗಬೇಕು ಅಂತ ಇರುವುದಿಲ್ಲ. ಕೆಲವೊಂದು ಪರಿಸ್ಥಿತಿ ಹಾಗಾಗುತ್ತೆ. ನಾವು ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್ ಮಾಡಿದ್ದೇವೆ. ನಾನು ಅವರ ಬಗ್ಗೆ ಕೆಟ್ಟದಾಗಿ ಹೇಳೋದು, ಅವರು ನನ್ನ ಬಗ್ಗೆ ಕೆಟ್ಟದಾಗಿ ಹೇಳೋದು ಮಾಡಿಲ್ಲ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed