Certificate: ಕಚೇರಿ ಅಲೆದಾಟಕ್ಕೆ ಮುಕ್ತಿ, ನಿಮ್ಮ ಮನೆ ಬಾಗಿಲಿಗೆ ಬರಲಿದೆ ಉಚಿತ ಜಾತಿ ಪ್ರಮಾಣ ಪತ್ರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಾತಿ ಪ್ರಮಾಣಪತ್ರ


Last Updated:

ಜಾತಿ, ನಿವಾಸ ಪ್ರಮಾಣಪತ್ರಕ್ಕಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್. ಸಿಎಂ ಡಿ.ಕೆ. ಶಿವಕುಮಾರ್, ಡಿಸಿಎಂ ಡಾ. ಜಿ. ಪರಮೇಶ್ವರರಿಂದ ಮನೆ ಮನೆಗೆ ಉಚಿತ ಪ್ರಮಾಣಪತ್ರ ವಿತರಣೆಗೆ ಚಾಲನೆ.

ಜಾತಿ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ

ಬೆಂಗಳೂರು: ಸಾರ್ವಜನಿಕರ (Public) ದೀರ್ಘಕಾಲದ ಕಚೇರಿ ಅಲೆದಾಟಕ್ಕೆ ಹಾಗೂ ನಾನಾ ಹೈರಾಣುಗಳಿಗೆ ಕಂದಾಯ ಇಲಾಖೆಯು ಕೊನೆಗೂ ದೊಡ್ಡ ಬ್ರೇಕ್ ಹಾಕಿದೆ. ಇನ್ನು ಮುಂದೆ ಜಾತಿ ಮತ್ತು ನಿವಾಸಿ ಪ್ರಮಾಣ ಪತ್ರಕ್ಕಾಗಿ (Certificate) ತಾಲ್ಲೂಕು ಕಚೇರಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಥವಾ ಸಾಲುಗಟ್ಟಿ ನಿಲ್ಲುವ ಅವಶ್ಯಕತೆಯೇ ಇಲ್ಲ. ರಾಜ್ಯ ಸರ್ಕಾರದ (Govt) ಮಹತ್ವಾಕಾಂಕ್ಷೆಯ ಮನೆ ಮನೆಗೆ ಉಚಿತ (Free) ಜಾತಿ ಪ್ರಮಾಣ ಪತ್ರ ವಿತರಣಾ ವಿಶೇಷ ಅಭಿಯಾನ ಹಾಗೂ ನೂತನ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ (CM) ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಅದ್ಭುತ ಯೋಜನೆಯಿಂದ ಜನಸಾಮಾನ್ಯರ ಪರದಾಟ ಕೊನೆಗೊಂಡಿದೆ.

ಮೊಬೈಲ್‍ನಲ್ಲೇ ಸಿಗಲಿದೆ ಪಿಡಿಎಫ್

ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಅತ್ಯಂತ ವ್ಯವಸ್ಥಿತವಾಗಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಇವುಗಳನ್ನು ಮುದ್ರಿಸಿ ನೇರವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಕಾರ್ಯ ನಡೆಯುತ್ತಿದೆ. ವಿಶೇಷವೆಂದರೆ, ಈಗಾಗಲೇ ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಸಾರ್ವಜನಿಕರ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ವಾಟ್ಸಾಪ್ ಅಥವಾ ಎಸ್‍ಎಂಎಸ್ ಮೂಲಕ ನೇರ ಲಿಂಕ್ ಕಳುಹಿಸಿ ಡೌನ್‍ಲೋಡ್ ಮಾಡಿಕೊಳ್ಳಲು ಕಲ್ಪಿಸಲಾಗಿದೆ.

ಅಲ್ಲದೆ, ಸಾರ್ವಜನಿಕರು ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಲು https://nadakacheri.karnataka.gov.in/AJSKCertificates ವಿಶೇಷ ವೆಬ್‍ಸೈಟ್ ಲಭ್ಯವಿದ್ದು, ಪ್ರತಿ ಹೋಬಳಿ ಮಟ್ಟದಲ್ಲಿ ಉಚಿತ ಮುದ್ರಣದ ಸಹಾಯ ಕೇಂದ್ರಗಳನ್ನು ಕೂಡ ಸ್ಥಾಪಿಸಲಾಗಿದೆ.

ಈಗ ಅತ್ಯಂತ ಸುಲಭ

ಕೇವಲ ಜಾತಿ ಪ್ರಮಾಣ ಪತ್ರವಷ್ಟೇ ಅಲ್ಲದೆ, ರಾಜ್ಯದಾದ್ಯಂತ ಏಕರೂಪದ, ಸಂಪೂರ್ಣ ಪಾರದರ್ಶಕ ಹಾಗೂ ಕಾನೂನುಬದ್ಧ ಚೌಕಟ್ಟಿನಡಿಯಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಿಸುವ ನೂತನ ಸೇವೆಗೂ ಆದ್ಯತೆಯ ಮೇರೆಗೆ ಚಾಲನೆ ನೀಡಲಾಗಿದೆ. ನಾಗರಿಕರು ಈ ಪ್ರಮಾಣ ಪತ್ರವನ್ನು ಪಡೆಯಲು ಯಾವುದೇ ಕಚೇರಿಗೆ ಅಲೆಯದೆ,ಹತ್ತಿರದ ನಾಡಕಚೇರಿಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳುಬಾಪೂಜಿ ಸೇವಾ ಕೇಂದ್ರಗಳು ಅಥವಾ ಅಧಿಕೃತ ಜಾಲತಾಣ https://ajsk.karnataka.gov.in/nk5_online/Login/Login_Public ಮೂಲಕ ಅತ್ಯಂತ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed