ಇದೀಗ ತಮಿಳು ನಟ ವಿಷ್ಣು ವಿಶಾಲ್ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ವಿಚಾರವೊಂದನ್ನು ಇತ್ತೀಚಿಗೆ ಬಹಿರಂಗಪಡಿಸಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ನಾನು ದೀರ್ಘಕಾಲದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ನಟ ವಿಷ್ಣು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ವಿಷ್ಣು ವಿಶಾಲ್ ಅನುಭವಿಸುತ್ತಿರುವ ಯಾವುದೇ ದೈಹಿಕ ಬದಲಾವಣೆಗಳು ಮತ್ತು ಸಮಸ್ಯೆಗಳು ವಾಸ್ತವವಾಗಿ ಅವರು ತೆಗೆದುಕೊಳ್ಳುತ್ತಿರುವ ಭಾರೀ ಔಷಧಿಗಳ ಅಡ್ಡಪರಿಣಾಮಗಳಾಗಿವೆ ಎಂದು ಹೇಳಲಾಗಿತ್ತು. ಇನ್ನು ವೆನ್ನಿಲಾ ಕಬಡ್ಡಿ ಕುಝು (Vanilla Kabaddi Kuzu) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು ವಿಶಾಲ್, ಆರಂಭದಿಂದಲೇ ವಿಭಿನ್ನ ಕಥೆಗಳತ್ತ ಒಲವು ತೋರಿದರು. ಕುಲ್ಲನಾರಿ ಕೂಟಂ, ಜೀವ, ರಾಟ್ಸಸನ್ ಹಾಗೂ ಕಟ್ಟಾ ಕುಸ್ತಿ ಮೊದಲಾದ ಚಿತ್ರಗಳ ಮೂಲಕ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿಶೇಷವಾಗಿ ಒಳ್ಳೆಯ ಕಥೆ ಹೊಂದಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿಷ್ಣು , ಪ್ರತಿಯೊಂದು ಪಾತ್ರದಲ್ಲೂ ಹೊಸತನ ತರುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.













