Brundavihari Movie: ‘ಬೃಂದಾವಿಹಾರಿ’ ರಿಲೀಸ್ ಮುಂದಕ್ಕೆ! ಗಣೇಶ್ ಸಿನಿಮಾ ತಡವಾಗ್ತಿರೋದಕ್ಕೆ ‘ಪ್ರೇಮದ ಊರಲಿ’ ಕಾರಣನಾ? | | ACTPnews

ಬೃಂದಾವಿಹಾರ 1 ತಿಂಗಳು ಮುಂದೆ; ಪ್ರೇಮದ ಊರಲಿ ಚಿತ್ರಕ್ಕೆ ದಾರಿ ಮಾಡಿಕೊಡ್ತೇ?


Last Updated:

ಬೃಂದಾವಿಹಾರಿ ಚಿತ್ರ 1 ತಿಂಗಳು ಮುಂದೆ ಹೋಗಿದ್ದು ಯಾಕೆ? ಈ ಮೂಲಕ ಪ್ರೇಮದ ಊರಲಿ ಚಿತ್ರಕ್ಕೆ ದಾರಿ ಮಾಡಿಕೊಟ್ಟಿತೇ? ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದೇನು? ವಿವರ ಇಲ್ಲಿದೆ ಓದಿ.

ಬೃಂದಾವಿಹಾರ 1 ತಿಂಗಳು ಮುಂದೆ; ಪ್ರೇಮದ ಊರಲಿ ಚಿತ್ರಕ್ಕೆ ದಾರಿ ಮಾಡಿಕೊಡ್ತೇ?
ಬೃಂದಾವಿಹಾರ 1 ತಿಂಗಳು ಮುಂದೆ; ಪ್ರೇಮದ ಊರಲಿ ಚಿತ್ರಕ್ಕೆ ದಾರಿ ಮಾಡಿಕೊಡ್ತೇ?

ಬೃಂದಾವಿಹಾರಿ ಚಿತ್ರ (Brundavihari Movie) ತಂಡ ಹುಬ್ಬಳ್ಳಿಯಲ್ಲಿ (Hubballi) ಇದೆ. ಈ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಚಿತ್ರ ರಿಲೀಸ್ (Movie Release) ಆಗುತ್ತದೆ ಅಂತಲೇ ಕಾದಿದ್ದ ಎಲ್ಲರಿಗೂ ಇಡೀ ಟೀಮ್ ಒಂದು ಬ್ರೇಕ್‌ಕಿಂಗ್ ನ್ಯೂಸ್ ಕೊಟ್ಟಿದೆ. ಇದೇ ತಿಂಗಳು ಅಕ್ಟೋಬರ್-16 ರಿಲೀಸ್ ಆಗಬೇಕಿದ್ದ ಈ ಚಿತ್ರ ಮುಂದೆ ಹೋಗಿದೆ. ಬರೋಬ್ಬರಿ ಒಂದು ತಿಂಗಳು ಮುಂದೆ ಹೋಗಿದೆ. ಈ ಅಧಿಕೃತ ಮಾಹಿತಿಯ ಸಂಪೂರ್ಣ ವಿವರ ಇಲ್ಲಿದೆ ಓದಿ.

ಒಂದು ತಿಂಗಳು ಮುಂದೆ

ಬೃಂದಾವಿಹಾರಿ ಚಿತ್ರ ಒಂದು ತಿಂಗಳ ಮುಂದೆ ಹೋಗಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.
Golden Star Ganesh Brindavihari Movie Release Postponed

ಪ್ರೇಮದ ಊರಲಿ ಚಿತ್ರಕ್ಕೆ ದಾರಿ ಮಾಡಿಕೊಡ್ತೇ?

ನಮ್ಮವರ ಜೊತೆಗೇನೆ ನಾವು ಏನು ಕಾಂಪಿಟೇಷನ್ ಮಾಡೋದಾ? ಯಾಕೆ ಈ ರೀತಿ ಮಾಡಬೇಕು? ಪ್ರೇಮದ ಊರಲಿ ಚಿತ್ರ ಚೆನ್ನಾಗಿದೆ ಅಂತ ನಾನೇ ಹೇಳಿದ್ದೇನೆ.

ಇದು ರಿಲೀಸ್ ಆದ್ಮೇಲೆ ಸಿನಿಮಾ ನೋಡಿ ಉತ್ತಮ ಚಿತ್ರ ಇದಾಗಿದೆ ಅಂತಲೂ ಪ್ರಮೋಟ್ ಮಾಡಿದ್ದೇನೆ. ಈ ಚಿತ್ರಕ್ಕೆ ನಾನೇ ತೊಂದರೆ ಕೊಡುವುದಾ? ಹೀಗೆ ಪ್ರಶ್ನೆಯನ್ನು ಗಣೇಶ್ ಕೇಳಿದ್ದಾರೆ.

ನಮಗೆ ಎರಡು ಶೋ…

ಒಂದು ವೇಳೆ ನಾವು ಅಕ್ಟೋಬರ್-16 ರಂದು ಬಂದ್ರೆ ಏನ್ ಆಗುತ್ತದೆ. ನಮಗೆ ಎರಡು ಶೋ ಮತ್ತು ಅವರಿಗೆ ಎರಡು ಹೀಗೆ ಶೋಗಳೇ ಡಿವೈಡ್ ಆಗುತ್ತದೆ.

ಫಸ್ಟ್ ಟೈಮ್ ಅನೌನ್ಸ್

ಸಾಮಾನ್ಯವಾಗಿ ನನ್ನ ಚಿತ್ರದ ರಿಲೀಸ್ ಡೇಟ್ ಬೆಂಗಳೂರಿನಲ್ಲಿಯೇ ಅನೌನ್ಸ್ ಆಗುತ್ತವೆ. ಆದರೆ, ಫಸ್ಟ್ ಟೈಮ್ ಉತ್ತರ ಕರ್ನಾಟಕದಲ್ಲಿ ಆಗುತ್ತಿದೆ.

ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕೂಡ ಅಷ್ಟೆ ನೋಡಿ. ನನ್ನ ಯಾವುದೇ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಈ ಕಡೆಗೆ ಆಗಿಯೇ ಇಲ್ಲ. ಫಸ್ಟ್ ಟೈಮ್ ಎರಡೂ ಇಲ್ಲಿ ಆಗುತ್ತಿವೆ.

Golden Star Ganesh Brindavihari Movie Release Postponed

ಬೃಂದಾವಿಹಾರ 1 ತಿಂಗಳು ಮುಂದೆ
ನವೆಂಬರ್-20 ರಂದು ರಿಲೀಸ್

ನಮ್ಮ ಬೃಂದಾವಿಹಾರಿ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ನವೆಂಬರ್-20 ರಂದೇ ಇದು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಇದು ರಿಲೀಸ್ ಆಗುತ್ತದೆ.

ಅದು ಎಷ್ಟು ಥಿಯೇಟರ್ ಅಲ್ಲಿ ರಿಲೀಸ್ ಆಗುತ್ತದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಮ್ಮ ಚಿತ್ರ ಮುಂದೆ ಹೋಗಿರೋದನ್ನ ಹೇಳಿದರು. ಗಣೇಶ್ ಹೇಳಿದ ಕಾರಣವನ್ನೆ ಇವರೂ ಕೊಟ್ಟರು.

ದೇವಿಕಾ ಭಟ್ ಶಾಕ್

ಚಿತ್ರದ ನಾಯಕಿ ದೇವಿಕಾ ಭಟ್ ಶಾಕ್ ಆದರು. ಗಣೇಶ್ ಮತ್ತು ಸಮೃದ್ಧಿ ಮಂಜುನಾಥ್ ಚಿತ್ರ ರಿಲೀಸ್ ಮುಂದೆ ಹೋಗಿದೆ ಅಂತ ಹೇಳಿದ್ಮೇಲೆ ಇವರು ಆಶ್ವರ್ಯ ಪಟ್ಟರು.

ನಮ್ಮ ಚಿತ್ರದ ಪ್ರಮೋಷನ್ ಬಹುತೇಕ ಆಗಿದೆ. ಇನ್ನೇನು ಚಿತ್ರ ರಿಲೀಸ್ ಬಾಕಿದೆ. ಆದರೆ, ಅಷ್ಟರಲ್ಲಿಯೇ ಸಿನಿಮಾ ರಿಲೀಸ್ ಮುಂದೆ ಹೋಗಿದೆ. ರಿಲೀಸ್ ಮುಂದೆ ಹೋಗಿರೋದು ಇಲ್ಲಿ ಬಂದ್ಮೇಲೆ ಗೊತ್ತಾಗಿದೆ ಅಂತಲೇ ಹೇಳಿಕೊಂಡಿದ್ದಾರೆ. ಮಾಳವಿಕಾ ಶರ್ಮಾ, ಮ್ಯೂಸಿಕ್ ಡೈರೆಕ್ಟರ್ ಅಬ್ದುಲ್ ಹೇಶಮ್ ವಹಾಬ್, ಡೈರೆಕ್ಟರ್ ಶ್ರೀನಿವಾಸ್ ರಾಜು ತಮ್ಮ ಚಿತ್ರದ ಕುರಿತು ಒಂದಷ್ಟು ಮಾಹಿತಿ ಕೊಟ್ಟರು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports