Last Updated:
ಖ್ಯಾತ ನಟ 1.5 ಕೋಟಿಯ ಕಾರು ಖರೀದಿ ಮಾಡೋಕೆ ಪ್ಲಾನ್ ಮಾಡಿದ್ದರು. ಇನ್ನೇನು ನಾಳೆ ಕಾರು ಬರಬೇಕು ಎನ್ನುವಷ್ಟರಲ್ಲಿ ಅವರು ಆ ಪ್ಲ್ಯಾನ್ ಕ್ಯಾನ್ಸರ್ ಮಾಡ್ತಾರೆ. ಯಾಕೆ?
ಚಿತ್ರರಂಗದಲ್ಲಿರುವ ದೊಡ್ಡ ಸ್ಟಾರ್ಗಳು ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿಯೂ (Social Service) ತೊಡಗಿಸಿಕೊಂಡವರಿದ್ದಾರೆ. ನಟ ಸೂರ್ಯ, ಸಲ್ಮಾನ್ ಖಾನ್, ಶಾರುಖ್, ಬಚ್ಚನ್ ಫ್ಯಾಮಿಲಿ ಹೀಗೆ ದೊಡ್ಡ ಸ್ಟಾರ್ಗಳು ಸಮಾಜಮುಖಿ ಕೆಲಸಗಳಿಗಾಗಿ ಫೌಂಡೇಷನ್ ಮಾಡಿಕೊಂಡು ಕೆಲಸ ಮಾಡುತ್ತಿರುತ್ತಾರೆ. ಬಾಲಿವುಡ್ನ ಒಬ್ಬ ನಟ ಒಂದೇ ಒಂದು ಸುದ್ದಿಯನ್ನು ಟಿವಿಯಲ್ಲಿ ನೋಡಿ ಮರುದಿನ ಮನೆಗೆ ತರಬೇಕಾಗಿದ್ದ ಲಕ್ಷುರಿ ಕಾರು ಖರೀದಿ ಪ್ಲಾನ್ ಕೈಬಿಟ್ಟಿದ್ದರು. ಗೊತ್ತಾ?
ನಾನಾ ಪಾಟೇಕರ್ ಅವರು ಆಗಾಗ ತಮ್ಮ ಮಾನವೀಯ ಗುಣಗಳಿಗಾಗಿ ಆಗಾಗ ಸುದ್ದಿಯಾಗುತ್ತಾರೆ. ಈ ಹಿರಿಯ ನಟ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿದಿಲ್ಲ. ಏನಿದ್ದರೂ ನೇರಾ ನೇರವಾಗಿ ಹೇಳುತ್ತಾರೆ.
ಭಾರತದ ಪ್ರಮುಖ ಚಿತ್ರಕಥೆಗಾರ, ಕಾದಂಬರಿಕಾರ, ನಟ ಮತ್ತು ಚಲನಚಿತ್ರ ನಿರ್ದೇಶಕ ರಣಬೀರ್ ಪುಷ್ಪ್ ಇತ್ತೀಚೆಗೆ ಪಾಟೇಕರ್ ಅವರ ಉದಾರ ಮನೋಭಾವದ ಬಗ್ಗೆ ಯಾರಿಗೂ ತಿಳಿಯದ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.
ನಾನಾ ಪಾಟೇಕರ್ ಅವರ ಕೋಪವು ನಿರ್ಮಾಪಕರು ಹಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬ ಮಾತನ್ನು ರಣಬೀರ್ ಪುಷ್ಪ್ ತಳ್ಳಿಹಾಕಿದರು. ಜನರು ಹೇಗೆ ತಪ್ಪು ಅಭಿಪ್ರಾಯವನ್ನು ರೂಪಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಅವರು ಮಾತನಾಡಿದರು.
ರೈತರ ಆತ್ಮಹತ್ಯೆಗಳಿಂದ ಬಳಲುತ್ತಿರುವ ಕುಟುಂಬಗಳ ಶೋಚನೀಯ ಸ್ಥಿತಿಯನ್ನು ನೋಡಿ ಸ್ವತಃ ಪಾಟೇಕರ್ ಹೇಗೆ ತೀವ್ರವಾಗಿ ನೊಂದಿದ್ದರು ಎಂಬುದನ್ನು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡರು. ಆಗ ಅವರು 1.5 ಕೋಟಿ ರೂ. ಮೌಲ್ಯದ ಕಾರನ್ನು ಖರೀದಿಸದಿರಲು ನಿರ್ಧರಿಸಿದರು. ಇನ್ನೇನು ನಾಳೆಯೇ ಹೋಗಿ ಕಾರು ಮನೆಗೆ ತರಬೇಕು. ಆ ಒಂದು ಸುದ್ದಿ ನೋಡಿ ಕಾರು ಬೇಡ, ಬದಲಿಗೆ ಆ ಹಣವನ್ನು 15,000 ರೂ.ಗಳ ಚೆಕ್ಗಳಾಗಿ ವಿಂಗಡಿಸಿ ಸಂತ್ರಸ್ತ ಕುಟುಂಬಗಳಿಗೆ ವಿತರಿಸಿದರು.
“ಒಂದು ದಿನ ನಾನಾ ಪಟೇಕರ್ ಅವರು ಸುದ್ದಿ ನೋಡುತ್ತಿದ್ದರು. ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ಕುಟುಂಬಗಳು ದುಃಖಿಸುತ್ತಿರುವುದನ್ನು ನೋಡಿದರು. ಮರುದಿನ ಅವರು 1.5 ಕೋಟಿ ರೂ. ಕಾರು ಖರೀದಿಸಬೇಕಿತ್ತು, ಆದರೆ ಬದಲಾಗಿ ಅವರು ತಮ್ಮ ಕಲಾವಿದ ಸ್ನೇಹಿತರಿಗೆ ಕರೆ ಮಾಡಿ 15,000 ರೂ. ಚೆಕ್ಗಳನ್ನು ನೀಡಿ ರೈತರ ಕುಟುಂಬಗಳಿಗೆ ವಿತರಿಸಲು ಹೇಳಿದರು ಎಂದು ನೆನಪಿಸಕೊಂಡಿದ್ದಾರೆ.
ರೈತರ ಕಣ್ಣೀರು ಒರೆಸುವವನು ಯಾರಿಗೂ ಹಾನಿ ಮಾಡಲು ಸಾಧ್ಯವಿಲ್ಲ. ಅವರು NAAM ಫೌಂಡೇಶನ್ ಅನ್ನು ರಚಿಸಿದರು, ಅದು ಇಂದಿನವರೆಗೂ ಲೆಕ್ಕವಿಲ್ಲದಷ್ಟು ಹಣವನ್ನು ಸಂಗ್ರಹಿಸಿದೆ. ಅವರು ಸ್ವತಃ ಫಾರ್ಮ್ನಲ್ಲಿಯೇ ವಾಸಿಸುತ್ತಾರೆ ಎಂದಿದ್ದಾರೆ.
“ಅವರು ಕಾರನ್ನು ನಿಲ್ಲಿಸಿ ಬಾಟಲಿಯನ್ನು ಎತ್ತಿಕೊಂಡರು. ಮುಂದೆ ಹೋಗಿ ಆ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಟ್ರಾಫಿಕ್ ಸಿಗ್ನಲ್ ಬಳಿ ನಿಲ್ಲಿಸಿದರು. ಕಿಟಕಿಯನ್ನು ಕೆಳಗಿಳಿಸಲು ಹೇಳಿದನು. ನಾನಾ ಅವರಿಗೆ, ‘ಭಾರತವನ್ನು ಯಾರು ಸ್ವಚ್ಛವಾಗಿಡುತ್ತಾರೆ? ಗಾಂಧಿ ಜಿ ಹೋಗಿದ್ದಾರೆ, ಆದರೆ ನೀವು ಇನ್ನೂ ಈ ಗ್ರಹದಲ್ಲಿದ್ದೀರಿ. ಹಾಗಾದರೆ, ಈ ದೇಶದ ಪ್ರಜೆಯಾಗಿ ಅದನ್ನು ಸ್ವಚ್ಛವಾಗಿಡುವುದು ನಿಮ್ಮ ಕರ್ತವ್ಯವಲ್ಲವೇ? ಅದು ಕಸದ ಬುಟ್ಟಿ ಎಂದು ಭಾವಿಸಿ ನಾನು ಬಾಟಲಿಯನ್ನು ನಿಮ್ಮ ಕಾರಿನೊಳಗೆ ಎಸೆಯಬೇಕೇ?” ಎಂದು ಪ್ರಶ್ನಿಸಿದ್ದನ್ನು ಪುಷ್ಪ್ ನೆನಪಿಸಿಕೊಂಡಿದ್ದಾರೆ.














