Bollywood Actress: ಸನ್​ ಗ್ಲಾಸ್ ಧರಿಸಿ ಶಿವಪೂಜೆ! ಇದು ಪೂಜೆಯಾ ಅಥವಾ ಫೋಟೋಶೂಟ್? ಎಂದ ನೆಟ್ಟಿಗರು | Bhumi Pednekkar trolled for wearing sunglasses at temple | | ACTPnews

ಭೂಮಿ ಪಡ್ನೇಕರ್


Last Updated:

Bhumi pednekkar: ಖ್ಯಾತ ನಟಿ ಶಿವಪೂಜೆ ಮಾಡುವಾಗ ಸನ್​​ಗ್ಲಾಸ್ ಧರಿಸಿದ್ಯಾಕೆ? ಇದರ ಹಿಂದಿನ ಕಾರಣ ಏನು?

ಭೂಮಿ ಪಡ್ನೇಕರ್
ಭೂಮಿ ಪಡ್ನೇಕರ್

ಬಾಲಿವುಡ್ ನಟಿ (Actress) ಭೂಮಿ ಪೆಡ್ನೆಕ್ಕರ್ (Bhumi Padnekkar) ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಾವನ್ ಪ್ರಾರ್ಥನೆಯ ಫೋಟೋಗನ್ನು ಶೇರ್ ಮಾಡಿ ಟ್ರೋಲ್ ಆಗಿದ್ದಾರೆ. ಹೊಸ ಲುಕ್ ಶೇರ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಟೀಕೆಗೆ ಗುರಿಯಾದರು.

ಅವರ ಪೋಸ್ಟ್ ಅವರ ಉಡುಪು ಮತ್ತು ಆ್ಯಕ್ಸಸರೀಸ್ ಆಯ್ಕೆಯ ಬಗ್ಗೆ ನೆಟ್ಟಿಗರು ಚರ್ಚೆಯನ್ನು ಶುರು ಮಾಡಿದರು. ಭೂಮಿ ಪಡ್ನೇಕರ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಲಿಂಗಕ್ಕೆ ನೀರು ಅರ್ಪಿಸುತ್ತಿದ್ದ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಿದ್ದಾರೆ.

ನಟಿ ನೀಲಿ ಡೆನಿಮ್ ಜೀನ್ಸ್ ಜೊತೆಗೆ ಕಪ್ಪು ಟಾಪ್ ಧರಿಸಿದ್ದರು. ಕಪ್ಪು ಸನ್ ಗ್ಲಾಸ್ ಕೂಡಾ ಧರಿಸಿದ್ದರು. ಪೋಸ್ಟ್ ಲೈವ್ ಆದ ಕೂಡಲೇ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊಗೆ ಪ್ರತಿಕ್ರಿಯಿಸಿದರು. ಅನೇಕರು ಭೂಮಿ ಪೂಜೆ ಮಾಡುವಾಗ ಸನ್ ಗ್ಲಾಸ್ ಏಕೆ ಎಂದು ಪ್ರಶ್ನಿಸಿದರು.

“ಶ್ರಾವಣ ಆರಂಭವಾದಂತೆ, ನಾನು ಸುಲಭವಾದ ಜೀವನಕ್ಕಾಗಿ ಪ್ರಾರ್ಥಿಸುವುದಿಲ್ಲ, ಆದರೆ ಅದನ್ನು ಅನುಗ್ರಹದಿಂದ ನಡೆಯುವ ಶಕ್ತಿಗಾಗಿ ಪ್ರಾರ್ಥಿಸುತ್ತೇನೆ. ಹರ್ ಹರ್ ಮಹಾದೇವ್,” ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಒಂದು ವರ್ಗದ ನೆಟ್ಟಿಗರು ನಟಿಯನ್ನು ಟೀಕಿಸಿದರು, ಧಾರ್ಮಿಕ ಸಮಾರಂಭದ ಸಮಯದಲ್ಲಿ ಈ ಸನ್ ಗ್ಲಾಸ್ ಎಲ್ಲವೂ ಸೂಕ್ತವಲ್ಲ ಎಂದು ಹೇಳಿದರು.

ಸನ್ ಗ್ಲಾಸ್ ತೆಗೆದು ಪೂಜೆ ಮಾಡಬಹುದೇ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಕನಿಷ್ಠ ಪಕ್ಷ ಆ ಸನ್​ಗ್ಲಾಸ್ ಆದರೂ ತೆಗೆಯಿರಿ” ಎಂದು ಬರೆದಿದ್ದಾರೆ.

“ಯಾರಾದರೂ ಕನ್ನಡಕ ಧರಿಸಿ ಪೂಜೆ ಮಾಡುವುದನ್ನು ನಾನು ನೋಡಿಲ್ಲ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

“ದೇವಸ್ಥಾನದಲ್ಲಿ ಭಕ್ತಿಯೋ ಫೋಟೋಶೂಟ್ ಮಾಡ್ತಿದ್ದೀರಾ ಎಂದು?” ಇನ್ನೊಬ್ಬರು ಕೆಳಿದ್ದಾರೆ. ಈ ಟೀಕೆಗಳಿಗೆ ಭೂಮಿ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.

ಭೂಮಿ ಕೊನೆಯ ಬಾರಿಗೆ ಅರ್ಜುನ್ ಕಪೂರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಮೇರೆ ಹಸ್ಬೆಂಡ್ ಕಿ ಬಿವಿ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು 2026 ರಲ್ಲಿ ಬಿಡುಗಡೆಯಾದ ದಾಲ್ಡಾಲ್ ಎಂಬ ವೆಬ್ ಸರಣಿಯಲ್ಲಿಯೂ ಕಾಣಿಸಿಕೊಂಡರು.

ಇದನ್ನೂ ಓದಿ: Yash: ಎರಡೂವರೆ ವರ್ಷ, ಬ್ಯಾಕ್ To ಬ್ಯಾಕ್ ಲಾಭ! ರಾಕಿಂಗ್ ಸ್ಟಾರ್ ಯಶ್ ಕಾರಣ

ಭೂಮಿ ಈಗ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಐತಿಹಾಸಿಕ ನಾಟಕದಲ್ಲಿ ಕರ್ನಾಟಕದ ಪೌರಾಣಿಕ ಯೋಧ ರಾಣಿ ಬೆಳವಾಡಿ ಮಲ್ಲಮ್ಮ ಪಾತ್ರವನ್ನು ನಟಿ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಕಾಂತಾರ ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports