Bigg Boss: ಲಾಲ್‍ಬಾಗ್‍ನಲ್ಲಿ ಶುರುವಾಗ್ತಿದೆ ರೋಚಕ ‘ಬಿಗ್ ಬಾಸ್ ಅಗ್ನಿಪರೀಕ್ಷೆ’, ಕಿಚ್ಚ ಸುದೀಪ್ ಜೊತೆ ಲೈವ್ ವೀಕ್ಷಿಸುವ ಸುವರ್ಣಾವಕಾಶ! | | ACTPnews

ಬಿಗ್ ಬಾಸ್ ಕನ್ನಡ


Last Updated:

ಬಿಗ್ ಬಾಸ್ ಆರಂಭಕ್ಕೂ ಮುನ್ನ ಕಲರ್ಸ್ ಕನ್ನಡದಿಂದ ಅಭಿಮಾನಿಗಳಿಗೆ ಬಂಪರ್ ಆಫರ್. ಲಾಲ್‍ಬಾಗ್‌ನಲ್ಲಿ ‘Bigg Boss Agnipariksha Experience Zone’ ಆರಂಭ. ವಿಜೇತರಿಗೆ ಕಿಚ್ಚ ಸುದೀಪ್ ಜೊತೆ ವೀಕೆಂಡ್ ಎಪಿಸೋಡ್ ಲೈವ್ ನೋಡುವ ಅವಕಾಶ.

ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಕನ್ನಡ

ಬೆಂಗಳೂರು: ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಆರಂಭಕ್ಕೂ ಮುನ್ನವೇ ಕಲರ್ಸ್ ಕನ್ನಡ (Colors Kannada) ವಾಹಿನಿ ಅಭಿಮಾನಿಗಳಿಗೆ (Fans) ಥ್ರಿಲ್ ನೀಡುವಂತಹ ಬಂಪರ್ ಆಫರ್ ಒಂದನ್ನು ಘೋಷಿಸಿದೆ. ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ಬಾಗಿಲು ತೆರೆಯುವ ಮುನ್ನ, ಬೆಂಗಳೂರಿನ ಐತಿಹಾಸಿಕ ಲಾಲ್‍ಬಾಗ್ ಬೋಟಾನಿಕಲ್ ಗಾರ್ಡನ್‍ನಲ್ಲಿ ಅದ್ಧೂರಿಯಾಗಿ ‘Bigg Boss Agnipariksha Experience Zone’ ಆರಂಭವಾಗುತ್ತಿದೆ. ಬಿಗ್ ಬಾಸ್ ಲವರ್ಸ್‍ಗಾಗಿ ಹಮ್ಮಿಕೊಂಡಿರುವ ಈ ಸಾಹಸಮಯ ಅನುಭವದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಬಿಗ್ ಬಾಸ್ ಚೇರ್ & ಅಗ್ನಿಪರೀಕ್ಷೆ ಚಾಲೆಂಜ್

ಲಾಲ್‍ಬಾಗ್ ಫ್ಲವರ್ ಶೋನಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾಗಿರುವ ಈ ಎಕ್ಸ್ ಪೀರಿಯನ್ಸ್ ಜೋನ್‍ಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ರೋಚಕ ಅನುಭವ ಕಾದಿದೆ. ಇಲ್ಲಿ ನೀವು ನೇರವಾಗಿ ನಿಮ್ಮ ನೆಚ್ಚಿನ ಐಕಾನಿಕ್ Bigg Boss Chair ಮೇಲೆ ಕುಳಿತುಕೊಳ್ಳಬಹುದು, ಅದ್ಭುತ ಸೆಲ್ಫಿ ಜೋನ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು ಮತ್ತು ಹಾರ್ಟ್-ಸ್ಟಾಪ್ ಮಾಡುವಂತಹ Agnipariksha Challengesಗಳಲ್ಲಿ ಭಾಗವಹಿಸಿ ನಿಮ್ಮ ಧೈರ್ಯವನ್ನು ಸಾಬೀತುಪಡಿಸಲು ಸುವರ್ಣ ಅವಕಾಶವಿದೆ.
ವೀಕೆಂಡ್ ಎಪಿಸೋಡ್ ಲೈವ್ ನೋಡುವುದು ಹೇಗೆ?

ನೀವು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೆಲವು ಸಿಂಪಲ್ ರೂಲ್ಸ್ ಫಾಲೋ ಮಾಡಬೇಕು.

ಲಾಲ್‌ಬಾಗ್‌ನ ಎಕ್ಸ್‌ಪೀರಿಯನ್ಸ್ ಜೋನ್‌ನಲ್ಲಿ ನಡೆಯುವ Agnipariksha Challengesನಲ್ಲಿ ಭಾಗವಹಿಸಿ.

ಅಲ್ಲಿ ಅತ್ಯಕರ್ಷಕ ಸೆಲ್ಫಿ ತೆಗೆದು, ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ #BBKAGNIPARIKSHE ಹ್ಯಾಶ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿ.

ಪೋಸ್ಟ್ ಮಾಡುವಾಗ ಅಧಿಕೃತ @ColorsKannada ಖಾತೆಯನ್ನು ಕಡ್ಡಾಯವಾಗಿ ಟ್ಯಾಗ್ ಮಾಡಿ.

ಅತ್ಯಂತ ಮುಖ್ಯವಾಗಿ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು Public ಮೋಡ್‌ನಲ್ಲಿಡಿ!

ಹೀಗೆ ಮಾಡಿದ್ದಲ್ಲಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ ನೇರವಾಗಿ Bigg Boss Weekend Episode ಅನ್ನು LIVE ಆಗಿ ವೀಕ್ಷಿಸುವ ಸುವರ್ಣಾವಕಾಶ ಹಾಗೂ ಇನ್ನೂ ಹತ್ತಾರು ಆಕರ್ಷಕ ಬಿಗ್ ಬಾಸ್ ಗಿಫ್ಟ್‌ಗಳು ನಿಮ್ಮ ಕೈ ಸೇರಲಿವೆ.
ಈವೆಂಟ್ ವಿವರಗಳು

ಸ್ಥಳ: ಲಾಲ್‍ಬಾಗ್ ಬೋಟಾನಿಕಲ್ ಗಾರ್ಡನ್, ಬೆಂಗಳೂರು.

ದಿನಾಂಕ: 6 ಆಗಸ್ಟ್ 2026.

ಸಮಯ: ಬೆಳಿಗ್ಗೆ 10:30 ರಿಂದ.

ಕರ್ನಾಟಕದ ಅತಿ ದೊಡ್ಡ ಮನರಂಜನಾ ಸಂಭ್ರಮಕ್ಕೆ ನಾಂದಿ ಹಾಡುತ್ತಿರುವ ಈ ರೋಚಕ ಕಾರ್ಯಕ್ರಮಕ್ಕೆ ತಡಮಾಡದೆ ಭೇಟಿ ನೀಡಿ, ನಿಮ್ಮ ಬಿಗ್ ಬಾಸ್ ಕ್ರೇಜ್ ಅನ್ನು ಜಗತ್ತಿಗೆ ತೋರಿಸಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed