Last Updated:
ಇಷ್ಟು ದಿನ ಟಾಸ್ಕ್, ಮಾತುಕತೆ ಹಾಗೂ ಸಣ್ಣಪುಟ್ಟ ಮನಸ್ತಾಪಗಳಿಗೆ ಸೀಮಿತವಾಗಿದ್ದ ಮನೆಯೊಳಗಿನ ಕಿರಿಕ್ ಇದೀಗ ದೊಡ್ಡ ಗಲಾಟೆಯ ಹಂತಕ್ಕೆ ತಲುಪಿದೆ. ಸ್ಪರ್ಧಿಗಳ ಕೋಪ ನೆತ್ತಿಗೇರಿದ್ದು, ಕೈ ಕೈ ಮಿಲಾಯಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada Season 13) ಮೊದಲ ವಾರ ಮುಗಿದ ಬೆನ್ನಲ್ಲೇ ದೊಡ್ಮನೆಯ ವಾತಾವರಣ ಬದಲಾಗಿದೆ. ಇಷ್ಟು ದಿನ ಟಾಸ್ಕ್, ಮಾತುಕತೆ ಹಾಗೂ ಸಣ್ಣಪುಟ್ಟ ಮನಸ್ತಾಪಗಳಿಗೆ ಸೀಮಿತವಾಗಿದ್ದ ಮನೆಯೊಳಗಿನ ಕಿರಿಕ್ ಇದೀಗ ದೊಡ್ಡ ಗಲಾಟೆಯ ಹಂತಕ್ಕೆ ತಲುಪಿದೆ. ಸ್ಪರ್ಧಿಗಳ ಕೋಪ ನೆತ್ತಿಗೇರಿದ್ದು, ಕೈ ಕೈ ಮಿಲಾಯಿಸುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಅದರಲ್ಲೂ ಮಂಜು ಮತ್ತು ಸೌಂದರ್ಯ ಶೆಟ್ಟಿ ನಡುವೆ ನಡೆದ ಕಿತ್ತಾಟ ಇದೀಗ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದೆ.














