Last Updated:
Bigg Boss: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಜಗಳ ಮಾಡಿದ್ರೆ, ಕಿತ್ತಾಡಿದ್ರೆ, ಒಬ್ಬರನ್ನೊಬ್ಬರು ನಿಂದಿಸಿಕೊಂಡ್ರೆ ನೋಡುವವರಿಗೆ ಯಾಕೆ ಇಷ್ಟ ಆಗುತ್ತೆ? ಸ್ಪರ್ಧಿಗಳು ಜಗಳ ಆಡೋದನ್ನು ವೀಕ್ಷಕರ್ಯಾಕೆ ಆಸಕ್ತಿಯಿಂದ ನೋಡ್ತಾರೆ? ಈ ಬಗ್ಗೆ ಮನೋವಿಜ್ಞಾನಿಗಳು ವಿವರಿಸಿದ್ದಾರೆ…
ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ (biggest reality show) ಬಿಗ್ ಬಾಸ್ (Bigg Boss) ಶುರುವಾಗಿದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಬಿಗ್ ಬಾಸ್ ಹವಾ ಶುರುವಾಗಿದೆ. ಘಟಾನುಘಟಿ ಸ್ಪರ್ಧಿಗಳು (contestants), ವಿವಿಧ ಕ್ಷೇತ್ರಗಳಲ್ಲಿ ಜನಪ್ರಿಯರಾದವರು, ವಿವಾದಗಳಿಂದಲೇ ಹೆಸರು ಮಾಡಿದವರು, ಜನಸಾಮಾನ್ಯ ಸೇರಿದಂತೆ ವಿವಿಧ ರೀತಿಯ ಜನರು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರ ನಡುವೆ ಜಗಳ ನಿರೀಕ್ಷಿಸಿರೋ ವೀಕ್ಷಕರು (Viewers), ಅದಕ್ಕೋಸ್ಕರ ಕಾಯುತ್ತಿದ್ದಾರೆ. ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಜಗಳ ಮಾಡಿದ್ರೆ, ಕಿತ್ತಾಡಿದ್ರೆ, ಒಬ್ಬರನ್ನೊಬ್ಬರು ನಿಂದಿಸಿಕೊಂಡ್ರೆ ನೋಡುವವರಿಗೆ ಯಾಕೆ ಇಷ್ಟ ಆಗುತ್ತೆ? ಸ್ಪರ್ಧಿಗಳು ಜಗಳ ಆಡೋದನ್ನು ವೀಕ್ಷಕರ್ಯಾಕೆ ಆಸಕ್ತಿಯಿಂದ ನೋಡ್ತಾರೆ? ಈ ಬಗ್ಗೆ ಮನೋವಿಜ್ಞಾನಿಗಳು (Psychologists) ವಿವರಿಸಿದ್ದಾರೆ…














